ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Funky Hairstyle 2026: ಯಂಗ್‌ ಲುಕ್‌ಗೆ ಸಾಥ್‌ ನೀಡುವ ಫಂಕಿ ಹೇರ್‌ಸ್ಟೈಲ್‌

Funky Hairstyle: ಯಂಗ್‌ ಲುಕ್‌ಗೆ ಫಂಕಿ ಹೇರ್‌ಸ್ಟೈಲ್‌ಗಳು ಸಾಥ್‌ ನೀಡುತ್ತವೆ. ಅದರಲ್ಲೂ ಔಟಿಂಗ್‌, ಹಾಲಿ ಡೇ, ವೀಕೆಂಡ್‌ ಲುಕ್‌ನಲ್ಲಿ ಈ ಶೈಲಿಯ ಹೇರ್‌ಸ್ಟೈಲ್‌ಗಳು ಮತ್ತಷ್ಟು ಮನಮೋಹಕವಾಗಿ ಬಿಂಬಿಸುತ್ತವೆ. ಅದು ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಶ್ರೀ ಮುಖಿ, ನಟಿ
1/5

ನೀವು ಯಂಗ್‌ ಆಗಿಯೇ ಕಾಣಿಸಬೇಕೇ! ಅದರಲ್ಲೂ ಔಟಿಂಗ್‌ ಅಥವಾ ಹಾಲಿಡೇ ಹಾಗೂ ನಿಮ್ಮ ವಕೇಷನ್‌ಗಳಲ್ಲಿ ಆಕರ್ಷಕವಾಗಿ ಕಾಣಿಸಬೇಕೇ! ಹಾಗಾದಲ್ಲಿ ಫಂಕಿ ಲುಕ್‌ಗೆ ಮೊರೆ ಹೋಗಿ. ಇವು ನಿಮಗೆ ಮತ್ತಷ್ಟು ಯಂಗ್‌ ಲುಕ್‌ ನೀಡುತ್ತವೆ.

2/5

ಉಡುಪಿಗೆ ಮಿಕ್ಸ್ ಮ್ಯಾಚ್‌ ಸ್ಟೈಲಿಂಗ್‌

ಹೌದು, ಹೇರ್‌ಸ್ಟೈಲಿಸ್ಟ್ ನಿಶಾ ಪ್ರಕಾರ, ಯಂಗ್‌ ಲುಕ್‌ಗೆ ಫಂಕಿ ಹೇರ್‌ಸ್ಟೈಲ್‌ಗಳು ಸಾಥ್‌ ನೀಡುತ್ತವೆ. ಅದರಲ್ಲೂ ಔಟಿಂಗ್‌, ಹಾಲಿ ಡೇ, ವೀಕೆಂಡ್‌ ಲುಕ್‌ಗೆ ಈ ಶೈಲಿಯ ಹೇರ್‌ಸ್ಟೈಲ್‌ಗಳು ಸೂಕ್ತ. ಆದರೆ, ಇದಕ್ಕೆ ಧರಿಸುವ ಉಡುಪುಗಳೂ ಕೂಡ ಮಿಕ್ಸ್ ಮ್ಯಾಚ್‌ ಆಗಿ ಹೊಂದಬೇಕು ಎನ್ನುತ್ತಾರೆ.

3/5

ಫಂಕಿ ಲುಕ್‌ ಹೇರ್‌ ಸ್ಟೈಲಿಂಗ್‌

ಹಾಗೆಂದು ಫಂಕಿ ಲುಕ್ ನೀಡುವ ಹೇರ್‌ಸ್ಟೈಲ್‌ ಎಲ್ಲರಿಗೂ ಹೊಂದುವುದಿಲ್ಲ! ಕೆಲವರನ್ನು ಜೋಕರ್‌ನಂತೆಯೂ ಬಿಂಬಿಸಬಹುದು. ಹಾಗಾಗಿ, ಈ ಹೇರ್‌ಸ್ಟೈಲ್‌ ಮಾಡುವಂತವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್ ನಿಶಾ. ಟ್ರಯಲ್‌ ಮಾಡಿ, ನೋಡಿ, ಫೋಟೂ ತೆಗೆಸಿ ನೋಡಿ, ಸೆಕೆಂಡ್‌ ಒಪಿನಿಯನ್‌ ಪಡೆಯಿರಿ, ಅದು ಓಕೆ ಎಂದೆನಿಸಿದಲ್ಲಿ ಮಾತ್ರ ಮುಂದುವರೆಯಿರಿ ಎನ್ನುತ್ತಾರೆ.

4/5

ಪಾಪುಲರ್‌ ಆಗಿರುವ ಬೀಡ್ಸ್ ಫಂಕಿ ಹೇರ್‌ಸ್ಟೈಲ್‌

ಇನ್ನು, ಫಂಕಿ ಹೇರ್‌ಸ್ಟೈಲ್‌ಗಳಲ್ಲಿ ಈ ಸೀಸನ್‌ನಲ್ಲಿ ಅತಿ ಹೆಚ್ಚಾಗಿ ಕಲರ್‌ಫುಲ್‌ ಬೀಡ್ಸ್ ಹೇರ್‌ಸ್ಟೈಲ್‌ಗಳು ಪಾಪುಲರ್‌ ಆಗಿವೆ. ಉದಾಹರಣೆಗೆ., ಹೂಗಳ ಹಾಗೂ ಹಾರ್ಟ್ ಶೇಪ್‌ನಲ್ಲಿರುವಂತವು, ಬಟರ್‌ಫ್ಲೈ, ಕ್ಲಿಪ್‌ ಶೇಪ್‌ನ ಪ್ಲಾಸ್ಟಿಕ್‌ ಬೀಡ್ಸ್ನವು ಚಾಲ್ತಿಯಲ್ಲಿವೆ.

5/5

ಫಂಕಿ ಹೇರ್ಸ್ ಸ್ಟೈಲಿಂಗ್‌ ಟಿಪ್ಸ್

  • ಮೊದಲಿಗೆ ನಿಮಗೆ ಬೇಕಾದಷ್ಟು ಕೂದಲನ್ನು ಚಿಕ್ಕ ಚಿಕ್ಕದಾಗಿ ಭಾಗ ಮಾಡಿಕೊಂಡು ಇವನ್ನು ಕ್ಲಿಪ್‌ನಂತೆ ಹಾಕಿ. ನಿಮಗೆ ಇಷ್ಟವಾದಲ್ಲಿ ಕೆಳಗಿನದ್ದನ್ನು ಫ್ರೀ ಹೇರ್‌ ಬಿಡಿ ಅಥವಾ ಜುಟ್ಟನ್ನು ಇಲ್ಲವೇ ಜಡೆಯನ್ನು ಹಾಕಿ.
  • ಆದಷ್ಟೂ ಈ ಬೀಡ್ಸನ್ನು ಮುಂಭಾಗದ ಕೂದಲಿಗೆ ಹಾಕಿ. ಆಗ ನೋಡಲು ಅಂದವಾಗಿ ಕಾಣಿಸುತ್ತವೆ.
  • ಎರಡು ಜಡೆ, ಎರಡು ಜುಟ್ಟು ಹೀಗೆ ನಾನಾ ಬಗೆಯ ವಿನ್ಯಾಸಕ್ಕೂ ಇವನ್ನು ಸೇರಿಸಬಹುದು.

ಶೀಲಾ ಸಿ ಶೆಟ್ಟಿ

View all posts by this author