Gen G Fashion 2026: ಜೆನ್ ಜಿ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಸ್ಕೋರ್ಟ್
ಸ್ಕೋರ್ಟ್ ಫ್ಯಾಷನ್ ಇದೀಗ ಜೆನ್ ಜಿ ಹುಡುಗಿಯರನ್ನು ಅಪ್ಪಿಕೊಂಡಿದೆ. ಅಲ್ಟ್ರಾ ಮಾಡರ್ನ್ ಲುಕ್‌ನಲ್ಲಿ ಕಾಣಲು ಬಯಸುವ ಜೆನ್ ಜಿ ಯುವತಿಯರನ್ನು ಸ್ಕೋರ್ಟ್ ಫ್ಯಾಷನ್‌ವೇರ್ ಆವರಿಸಿಕೊಂಡಿದ್ದು, ಗ್ಲಾಮರಸ್ ಲುಕ್‌ನೊಂದಿಗೆ ಬಿಂದಾಸ್ ಫ್ಯಾಷನ್‌ಗೆ ಸಾಥ್ ನೀಡುತ್ತಿದೆ. ಇದೇನಿದು ಸ್ಕೋರ್ಟ್? ಇಲ್ಲಿದೆ ಡಿಟೇಲ್ಸ್.
ಸ್ಕೋರ್ಟ್ ಫ್ಯಾಷನ್ ಇದೀಗ ಜೆನ್ ಜಿ ಹುಡುಗಿಯರನ್ನು ಅಪ್ಪಿಕೊಂಡಿದೆ.
ಬಿಂದಾಸ್ ಫ್ಯಾಷನ್‌ಗೆ ಸೇರಿದ ಸ್ಕೋರ್ಟ್
ಹೌದು, ಅಲ್ಟ್ರಾ ಮಾಡರ್ನ್ ಲುಕ್‌ನಲ್ಲಿ ಕಾಣಲು ಬಯಸುವ ಜೆನ್ ಜಿ ಯುವತಿಯರನ್ನು ಸ್ಕೋರ್ಟ್ ಫ್ಯಾಷನ್‌ವೇರ್ ಆವರಿಸಿಕೊಂಡಿದ್ದು, ಗ್ಲಾಮರಸ್ ಲುಕ್‌ನೊಂದಿಗೆ ಬಿಂದಾಸ್ ಫ್ಯಾಷನ್‌ಗೆ ಸಾಥ್ ನೀಡುತ್ತಿದೆ.
ಮನ್ನಾರಾ ಚೋಪ್ರಾ ಧರಿಸಿದ್ಧ ಸ್ಕೋರ್ಟ್
ನಟಿ ಹಾಗೂ ಹಿಂದಿ ಬಿಗ್‌ಬಾಸ್ ಕಂಟೆಸ್ಟಂಟ್ ಮನ್ನಾರಾ ಚೋಪ್ರಾ ಇತ್ತೀಚೆಗೆ ತಮ್ಮ ಹಾಲಿಡೇ ಫ್ಯಾಷನ್‌ನಲ್ಲಿ ಧರಿಸಿದ್ಧ ಸ್ಕೋರ್ಟ್ ಟೀನೇಜ್-ಕಾಲೇಜ್ ಹುಡುಗಿಯರನ್ನು ಮಾತ್ರವಲ್ಲ, ಸ್ಕರ್ಟ್ ಪ್ರಿಯರನ್ನು ಸೆಳೆದಿತ್ತು. ಅವರ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅವರ ಈ ಫ್ಯಾಷನ್‌ವೇರ್ ಸದ್ಯ ಬಿಂದಾಸ್ ಫ್ಯಾಷನ್ ಪ್ರಿಯರನ್ನು ಆಕರ್ಷಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ರಾಶಿ.
ಏನಿದು ಸ್ಕೋರ್ಟ್?
ನೋಡಲು ಥೇಟ್ ಸ್ಕರ್ಟ್‌ನಂತೆ ಕಾಣಿಸುವ ಶಾರ್ಟ್ಸ್ ಎನ್ನಬಹುದು. ಇನ್ನು ಸಿಂಪಲ್ ಆಗಿ ಹೇಳುವುದಾದಲ್ಲಿ, ಮುಂಭಾಗದಲ್ಲಿ ಮಿನಿ ಡೆನಿಮ್ ಸ್ಕರ್ಟ್‌ನಂತೆ ಕಾಣಿಸುವ ಇದು ಮೂಲತಃ ಶಾರ್ಟ್ಸ್. ನೋಡಲು ಅಸ್ಸೆಮ್ಮಿಟ್ರಿಕಲ್ ವ್ರಾಪ್ ಡಿಸೈನ್ ಹೊಂದಿರುತ್ತದೆ. ಕೆಲವೊಮ್ಮೆ ನಾನಾ ಬಗೆಯ ಬಟನ್ ಡಿಸೈನ್‌ಗಳಿಂದಲೇ ವಿನ್ಯಾಸಗೊಂಡಿರುತ್ತದೆ. ಸದ್ಯ ಈ ಸೀಸನ್‌ನಲ್ಲಿ ಲಕ್ಷುರಿ ಹೈ ಫ್ಯಾಷನ್ ಲಿಸ್ಟ್‌ಗೆ ಸೇರಿದೆ.
ಸ್ಕೋರ್ಟ್ ಜತೆ ಟಾಪ್ ಮಿಕ್ಸ್ ಮ್ಯಾಚ್ ಹಾಗೂ ಸ್ಟೈಲಿಂಗ್ ಹೇಗೆ?
- ಡೆನಿಮ್ ಸ್ಕೋರ್ಟ್‌ಗೆ ಆದಷ್ಟೂ ವೈಟ್ ಅಥವಾ ಕ್ರೀಮ್ ಟಾಪ್‌ಗಳನ್ನೇ ಧರಿಸಿ.
- ಕ್ರಾಪ್ ಟಾಪ್ ಇಲ್ಲವೇ ಟೈ ಟೀ ಶರ್ಟ್‌ಗಳು ಸಖತ್ತಾಗಿ ಕಾಣಿಸುತ್ತವೆ.
- ಈ ಸ್ಕೋರ್ಟ್‌ಗೆ ಸ್ಯಾಂಡಲ್ ನಾಟ್ ಓಕೆ. ಶೂ ಅಥವಾ ನೀ ಲೆಂತ್ ಬೂಟ್ಸ್‌ಗಳು ಚೆನ್ನಾಗಿ ಒಪ್ಪುತ್ತವೆ.
- ಮಾಡರ್ನ್ ಲುಕ್ ಪರ್ಫೆಕ್ಟಾಗಿ ನೀಡುತ್ತವೆ.
- ಕ್ಯಾಶುವಲ್ ಲುಕ್‌ಗೂ ಇವು ಸಹಕಾರಿ. ಹಾಗಾಗಿ ಮೇಕೋವರ್ ಕೂಡ ಇದಕ್ಕೆ ಹೊಂದುವುದು ಅಗತ್ಯ.