Gen G Fashion 2026: ಕಾಲೇಜು ಹುಡುಗಿಯರ ಕೈ ಬೆರಳುಗಳನ್ನು ಆಡಿಸುತ್ತಿರುವ ಮಿಡಿ ರಿಂಗ್ಸ್!
Midi Ring Fashion: ಕಾಲೇಜು ಹುಡುಗಿಯರ ಕೈ ಬೆರಳುಗಳನ್ನು ಮಿಡಿ ರಿಂಗ್‌ಗಳು ಸಿಂಗರಿಸುತ್ತಿವೆ. ಇದ್ಯಾವ ಬಗೆಯ ರಿಂಗ್ಸ್? ಏನಿದರ ವಿಶೇಷತೆ? ಈ ಎಲ್ಲದರ ಕುರಿತಂತೆ ಜ್ಯುವೆಲ್ ಸ್ಟೈಲಿಸ್ಟ್‌ಗಳು ಇಲ್ಲಿ ಸಿಂಪಲ್ಲಾಗಿ ವಿವರಿಸಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಕಾಲೇಜು ಹುಡುಗಿಯರ ಕೈ ಬೆರಳುಗಳನ್ನು ಬಗೆಬಗೆಯ ಮಿಡಿ ರಿಂಗ್‌ಗಳು ಅಲಂಕರಿಸುತ್ತಿವೆ.
ಮಿಡಿ ರಿಂಗ್ಸ್ ಫ್ಯಾಷನ್
ಡಿಫರೆಂಟಾಗಿ ಬೆರಳುಗಳ ಸೆಂಟರ್‌ನಲ್ಲಿ ಅಂದರೇ ಬೆರಳುಗಳ ಮುಕ್ಕಾಲು ಭಾಗದಲ್ಲಿ ಧರಿಸುವ ರಿಂಗ್‌ಗಳನ್ನು ಮಿಡಿ ರಿಂಗ್ ಎನ್ನಲಾಗುತ್ತದೆ. ಹೌದು, ಎಲ್ಲರಿಗೂ ಗೊತ್ತಿರುವಂತೆ, ಕೈ ಬೆರಳುಗಳಿಗೆ ಉಂಗುರಗಳನ್ನು ಧರಿಸುವುದು ಕಾಮನ್. ಅದೇ ಕೈ ಬೆರಳುಗಳ ಟಾಪ್‌ನಲ್ಲಿ ಅಥವಾ ಮಧ್ಯದಲ್ಲಿ ಧರಿಸುವುದು ಇದೀಗ ಇನ್ನೊಂಥರ ಫ್ಯಾಷನ್ ಆಗಿದೆ. ಅದರಲ್ಲೂ ಸೆಟ್ ಫಿಂಗರ್ ರಿಂಗ್‌ಗಳನ್ನು ಈ ರೀತಿ ಬೆರಳಿನ ಮಧ್ಯ ಬಾಗದಲ್ಲಿ ಧರಿಸುವುದು ಸ್ಟೈಲ್ ಆಗಿದೆ. ಮೊದಲೆಲ್ಲಾ ಉಂಗುರಗಳನ್ನು ಬೆರಳುಗಳ ಕೆಳಭಾಗದಲ್ಲಿ ತಳದಲ್ಲಿ ಧರಿಸಿದರೆ ಸಾಕಿತ್ತು. ಇದೀಗ ಈ ಸ್ಟೈಲ್ ಜನರೇಷನ್‌ಗೆ ತಕ್ಕಂತೆ ಬದಲಾಗಿದೆ. ಇತರೇ ಉಂಗುರಗಳೊಂದಿಗೆ ತೆಳುವಾದ ಅಥವಾ ಆಕರ್ಷಕ ಉಂಗುರಗಳನ್ನು ಬೆರಳುಗಳ ಮಧ್ಯದಲ್ಲಿ ಧರಿಸುವುದು ಇಂದಿನ ಸ್ಟೈಲಿಂಗ್‌ನಲ್ಲಿ ಸೇರಿದೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು.
ಮಿಡಿ ರಿಂಗ್ಸ್ ಕಥೆಯಿದು
ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಉಂಗುರಗಳನ್ನು ಧರಿಸುವ ಹುಡುಗಿಯರು ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬೆರಳುಗಳ ಸ್ಟೈಲಿಂಗ್ ಹೆಸರಲ್ಲಿ ಬೆರಳುಗಳ ಮಧ್ಯೆ ಹಾಗೂ ಕೊನೆಯ ತುದಿಯಲ್ಲಿ ಉಂಗುರಗಳನ್ನು ಧರಿಸತೊಡಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ನಾನಾ ಬಗೆಯ ಫಿಂಗರ್ ರಿಂಗ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ಜ್ಯೋತಿ. ಅವರ ಪ್ರಕಾರ, ಇದು ಇಂದು ಕಾಲೇಜು ಹುಡುಗಿಯರ ಕ್ರೇಝಿ ಫ್ಯಾಷನ್ ಲಿಸ್ಟ್‌ನಲ್ಲಿದೆ.
ಆನ್‌ಲೈನ್‌ನಲ್ಲಿ ಬಗೆಬಗೆಯ ಮಿಡಿ ರಿಂಗ್ಸ್
ಆನ್‌ಲೈನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಮಿಡಿ ರಿಂಗ್ಸ್ ದೊರೆಯುತ್ತಿವೆ. ಅವುಗಳಲ್ಲಿ ಇಡೀ ಸೆಟ್‌ನಿಂದಿಡಿದು ಸಿಂಪಲ್ ಸ್ಲಿಮ್ ರಿಂಗ್‌ಗಳು ಸಿಗುತ್ತಿವೆ. ಡಿಸೈನ್‌ಗೆ ತಕ್ಕಂತೆ ಅವುಗಳ ದರ ಕೂಡ ನಿಗಧಿಯಾಗಿರುತ್ತದೆ. ಇನ್ನು ಅಂಗಡಿಗಳಲ್ಲಿ ಅದರಲ್ಲೂ ಫ್ಯಾನ್ಸಿ ಶಾಪ್‌ಗಳಲ್ಲಿ ದೊರೆಯುವ ಇವುಗಳ ಬೆಲೆ ಆನ್‌ಲೈನ್ ಶಾಪ್‌ಗಳಿಗಿಂತ ತುಸು ಕಡಿಮೆ ಎನ್ನಬಹುದು.
ಮಿಡಿ ರಿಂಗ್ಸ್ ಸ್ಟೈಲಿಂಗ್ ಟಿಪ್ಸ್
- ಸ್ಲಿಮ್ ಸೆಟ್ ಮಿಡಿ ರಿಂಗ್ಸ್ ನಾನಾ ಬಗೆಯಲ್ಲಿ ಧರಿಸಬಹುದು.
- ಸದಾ ಧರಿಸಕೂಡದು. ರಕ್ತ ಸಂಚಾರಕ್ಕೆ ಧಕ್ಕೆಯಾಗಬಹುದು.
- ಅಡ್ಜಸ್ಟಬಲ್ ಮಿಡಿ ರಿಂಗ್ಸ್ ಖರೀದಿ ಉತ್ತಮ.