Gen z Fashion 2026: ಜೆನ್ ಝೀ ಹುಡುಗಿಯರ ಫ್ಯಾಷನ್‌ಗೆ ಸೇರಿದ ಬೆಲ್ ಬಾಟಮ್ ಜೀನ್ಸ್ ಪ್ಯಾಂಟ್ಸ್
Bell Bottom Jeans Pants: ಬೆಲ್ ಬಾಟಮ್ ಜೀನ್ಸ್ ಪ್ಯಾಂಟ್‌ಗಳು ಇದೀಗ ಮರಳಿದ್ದು, ಜೆನ್ ಜಿ ಯುವತಿಯರನ್ನು ಸವಾರಿ ಮಾಡತೊಡಗಿವೆ. ಈ ಶೈಲಿಯ ಪ್ಯಾಂಟ್ ಆಯ್ಕೆ ಹಾಗೂ ಸ್ಟೈಲಿಂಗ್ ಹೇಗೆ? ಈ ಬಗ್ಗೆ ಇಲ್ಲಿದೆ ಒಂದಿಷ್ಟು ಡಿಟೇಲ್ಸ್.
1/5
ಬೆಲ್ ಬಾಟಮ್ ಜೀನ್ಸ್ ಪ್ಯಾಂಟ್ ಹವಾ
ಬೆಲ್ ಬಾಟಮ್ ಜೀನ್ಸ್ ಪ್ಯಾಂಟ್‌ಗಳು ಫ್ಯಾಷನ್‌ಗೆ ಮರಳಿದ್ದು, ಜೆನ್ ಝೀ ಯುವತಿಯರನ್ನು ಸವಾರಿ ಮಾಡತೊಡಗಿವೆ.
2/5
ಡೆನಿಮ್ ಜೀನ್ಸ್ ಹಂಗಾಮ
ಹೌದು. ಇದುವರೆಗೂ ಕೇವಲ ಫಾರ್ಮಲ್ ಮೆನ್ಸ್ ಪ್ಯಾಂಟ್‌ಗೆ ಸೀಮಿತವಾಗಿದ್ದ ಈ ಬೆಲ್ ಬಾಟಮ್ ಡೆನಿಮ್ ಜೀನ್ಸ್ ಹಂಗಾಮ ಎಬ್ಬಿಸಿವೆ. ಅದರಲ್ಲೂ ಕಾಲೇಜು ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
3/5
ಹುಡುಗಿಯರ ಬೆಲ್ ಬಾಟಮ್ ಜೀನ್ಸ್ ಪ್ಯಾಂಟ್ ಕ್ರೇಝ್
ಈ ಮೊದಲು ಬೆಲ್ ಬಾಟಮ್ ಸ್ಟೈಲ್‌ನ ಫಾರ್ಮಲ್ ಪ್ಯಾಂಟ್‌ಗಳು ರೆಟ್ರೋ ಫ್ಯಾಷನ್‌ನಲ್ಲಿ ಅತಿ ಹೆಚ್ಚು ಟ್ರೆಂಡ್‌ನಲ್ಲಿದ್ದವು. ಆದರೆ, ಹುಡುಗಿಯರು ಇವನ್ನು ಇಷ್ಟಪಡಲಿಲ್ಲ! ಬದಲಿಗೆ ಡೆನಿಮ್ ಜೀನ್ಸ್ ಬೆಲ್ ಬಾಟಮ್ ಪ್ಯಾಂಟ್‌ಗಳನ್ನು ಆಯ್ಕೆ ಮಾಡಿ ಕೊಂಡರು. ಇದರ ಜತೆಗೆ ಬಾಲಿವುಡ್ ಸಿನಿಮಾ ತಾರೆಯರು ಇತ್ತೀಚೆಗೆ ಇವನ್ನು ಧರಿಸತೊಡಗಿರುವುದು ಹುಡುಗಿಯರನ್ನು ಸೆಳೆಯಲು ಕಾರಣವಾಯಿತು ಎನ್ನುತ್ತಾರೆ ಸ್ಟೈಲಿಸ್ಟ್ ರಿಂಕು.
4/5
ಬೆಲ್ ಬಾಟಮ್ ಜೀನ್ಸ್ ಪ್ಯಾಂಟ್ ಆಯ್ಕೆ ಹೇಗೆ?
ಎತ್ತರವಾಗಿರುವವರಿಗೆ ಈ ಪ್ಯಾಂಟ್ ಚೆನ್ನಾಗಿ ಹೊಂದುತ್ತವೆ. ಕುಳ್ಳಗಿರುವವರು ಹಾಗೂ ಪ್ಲಂಪಿಯಾಗಿರುವವರು ಆದಷ್ಟೂ ಇವನ್ನು ಅವಾಯ್ಡ್ ಮಾಡುವುದು ಉತ್ತಮ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
5/5
ಬೆಲ್ ಬಾಟಮ್ ಜೀನ್ಸ್ ಪ್ಯಾಂಟ್ ಸ್ಟೈಲಿಂಗ್ ಟಿಪ್ಸ್
- ಕ್ರಾಪ್ ಟಾಪ್, ಜಾಕೆಟ್‌ನೊಂದಿಗೂ ಧರಿಸಬಹುದು.
- ಲಾಂಗ್ ಕೋಟ್ಸ್ ಜಾಕೆಟ್‌ನೊಂದಿಗೆ ಮ್ಯಾಚ್ ಮಾಡುವುದು ಬೇಡ.
- ಉದ್ದಗಿರುವವರಿಗೆ ಆಕರ್ಷಕವಾಗಿ ಕಾಣುತ್ತವೆ.
- ಹೈ ಹೀಲ್ಸ್, ಶೂಗಳನ್ನು ಇದರೊಂದಿಗೆ ಧರಿಸಬಹುದು.
- ವೆಸ್ಟರ್ನ್ ಲುಕ್ ನೀಡುವುದು ಗ್ಯಾರಂಟಿ.
- ಲಾಂಗ್ ಟಾಪ್‌ನೊಂದಿಗೆ ಧರಿಸುವುದು ಬೇಡ.
- ಬಿಂದಾಸ್ ಲುಕ್‌ಗೆ ಸಾಥ್ ನೀಡುತ್ತವೆ.