ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gen z Fashion 2026: ಜೆನ್‌ ಜಿ ಹುಡುಗಿಯರ ಹೈ ಫ್ಯಾಷನ್‌ಗೆ ಸೇರಿದ ಫೇಸ್‌ಲೆಟ್ಸ್

ಗ್ಲಾಸ್‌ ಇಲ್ಲದೇ ಕೇವಲ ಫ್ರೇಮ್‌ ಇರುವಂತಹ ಫೇಸ್‌ಲೆಟ್ಸ್, ಫ್ಯಾಷನ್‌ ಪ್ರಿಯ ಜೆನ್‌ ಜಿ ಹುಡುಗಿಯರ ವದನವನ್ನು ಅಲಂಕರಿಸುತ್ತಿವೆ. ಹೈ ಫ್ಯಾಷನ್‌ ಕೆಟಗರಿಯ ಟ್ರೆಂಡ್‌ ಲಿಸ್ಟ್‌ಗೆ ಇವು ಸೇರಿವೆ. ಏನಿದು ಫೇಸ್‌ಲೆಟ್ಸ್? ಇದ್ಯಾವ ಬಗೆಯ ಆಕ್ಸೆಸರೀಸ್‌? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಅಲಂಕೃತ ಸಾಹೈ , ನಟಿ
1/5

ಫೇಸ್‌ಲೆಟ್‌ಗಳು ಜೆನ್‌ ಜಿ ಹುಡುಗಿಯರ ಹೈ ಫ್ಯಾಷನ್‌ ಟ್ರೆಂಡ್‌ ಲಿಸ್ಟ್‌ಗೆ ಸೇರಿವೆ. ಫ್ಯಾಷನ್‌ ಪ್ರಿಯ ಜೆನ್‌ ಜಿ ಹುಡುಗಿಯರ ವದನವನ್ನು ಅಲಂಕರಿಸುತ್ತಿವೆ.

2/5

ಏನಿದು ಫೇಸ್‌ಲೆಟ್ಸ್?

ಹೌದು, ಇವು ನೋಡಲು ಕನ್ನಡಕದಂತಿದ್ದರೂ ಕನ್ನಡಕ ಅಥವಾ ಸನ್‌ ಗ್ಲಾಸ್‌ ಅಲ್ಲ! ಹಾಗೆಯೇ ಕಂಡರೂ ಇವು ಅವಲ್ಲ! ಗ್ಲಾಸ್‌ ಇಲ್ಲದೇ ಕೇವಲ ಫ್ರೇಮ್‌ ಇರುವಂತವು. ಅವನ್ನು ಫೇಸ್‌ಲೆಟ್ಸ್ ಎನ್ನಲಾಗುತ್ತದೆ. ಇವು ಈ ಸೀಸನ್‌ನ ಹೈ ಫ್ಯಾಷನ್‌ ಕೆಟಗರಿಯಲ್ಲಿ ಫ್ಯಾಷನ್‌ ಪ್ರಿಯರ ಮುಖವನ್ನು ಏರಿದ್ದು, ಹೈ ಫ್ಯಾಷನ್‌ ಕೆಟಗರಿಯ ಟ್ರೆಂಡ್‌ ಲಿಸ್ಟ್‌ಗೆ ಸೇರಿವೆ.

3/5

ಜೆನ್‌ ಜಿ ಯುವತಿಯರ ನ್ಯೂ ಕ್ರೇಝ್‌

ಅಂದಹಾಗೆ, ಹೈ ಫ್ಯಾಷನ್‌ ಫಾಲೋ ಮಾಡುವ ಜೆನ್‌ ಜಿ ಯುವತಿಯರ ನ್ಯೂ ಫ್ಯಾಷನ್‌ ಕ್ರೇಝ್‌ನಲ್ಲಿ ಈ ವೈವಿಧ್ಯಮಯ ಫೇಸ್‌ಲೆಟ್ಸ್ ಸ್ಥಾನ ಪಡೆದಿವೆ. ಫೋಟೋ ಶೂಟ್ಸ್ , ಮದುವೆ, ಫ್ಯಾಮಿಲಿಯ ಗ್ರ್ಯಾಂಡ್‌ ಸಮಾರಂಭಗಳಲ್ಲಿ ಹುಡುಗಿಯರ ಮುಖಾರವಿಂದವನ್ನು ಸಿಂಗರಿಸುತ್ತಿವೆ ಎನ್ನುವ ಸ್ಟೈಲಿಸ್ಟ್ ಟೀನಾ ಪ್ರಕಾರ, ಸದ್ಯ ಇವು ಹುಡುಗಿಯರ ಕ್ರೇಝಿ ಫ್ಯಾಷನ್‌ಗೆ ಸೇರಿವೆ ಎನ್ನುತ್ತಾರೆ.

4/5

ಟ್ರೆಂಡಿಯಾಗಿರುವ ಫೇಸ್‌ಲೆಟ್ಸ್

ಗೋಲ್ಡ್, ಸಿಲ್ವರ್‌ ಹಾಗೂ ಇನ್ನಿತರೇ ಮೆಟಲ್‌ಗಳಲ್ಲಿ ಲಭ್ಯವಿರುವ ಫೇಸ್‌ಲೆಟ್ಸ್‌ಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ದೊರೆಯುತ್ತಿವೆ. ಆನ್‌ಲೈನ್‌ ಆಕ್ಸೆಸರೀಸ್‌ ಶಾಪ್‌ಗಳನ್ನು ಓಪನ್‌ ಮಾಡಿದರೇ ಸಾಕು, ಬೀಡ್ಸ್, ಪರ್ಲ್‌, ಸ್ಟೋನ್ಸ್ ಫ್ರೇಮ್‌ ಹೊಂದಿರುವ ಫೇಸ್‌ಲೆಟ್ಸ್ ಕಣ್ಣಿಗೆ ಬೀಳುತ್ತವೆ. ನಾನಾ ಬಗೆಯ ಜೆಮೆಟ್ರಿಕ್‌ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಆಕ್ಸೆಸರೀಸ್‌ ಸ್ಟೈಲಿಸ್ಟ್ ಲಿಚ್ಚಿ.

5/5

ಫೇಸ್‌ಲೆಟ್ಸ್ ವಿಶೇಷತೆ

  • ಮುಖದ ಆಕಾರಕ್ಕೆ ಹೊಂದುವ ಫೇಸ್‌ಲೆಟ್ಸ್ ಆಯ್ಕೆ ಮಾಡಿ, ಧರಿಸಿ.
  • ಮದುವೆ ಸಮಾರಂಭಗಳಲ್ಲಿ ಇವುಗಳ ಬಳಕೆ ಹೆಚ್ಚಾಗಿದೆ.
  • ಗ್ರ್ಯಾಂಡ್‌ ಉಡುಗೆಗಳ ಜೊತೆಗೆ ಸ್ಟೈಲಿಂಗ್‌ ಮಾಡಬಹುದು.
  • ಧರಿಸಿದಾಕ್ಷಣ ಮುಖದ ಲುಕ್‌ ಬದಲಾಗುತ್ತದೆ ಎಂಬುದು ನೆನಪಿರಲಿ.

ಶೀಲಾ ಸಿ ಶೆಟ್ಟಿ

View all posts by this author