Gen Z Fashion 2026: ಹೈ ಫ್ಯಾಷನ್‌ಗೆ ಸೇರಿದ ಫ್ರಿಂಝ್ ಪ್ಯಾಂಟ್; ಏನಿದರ ವೈಶಿಷ್ಟ್ಯ?
Fringe Pants: ಹೈ ಫ್ಯಾಷನ್ ಫಾಲೋ ಮಾಡುವಂತಹ ಅಲ್ಟ್ರಾ ಮಾಡರ್ನ್ ಜೆನ್ ಝೀ ಹುಡುಗಿಯರ ಲಿಸ್ಟ್‌ನಲ್ಲಿ ಇದೀಗ ಫ್ರಿಂಝ್ ಪ್ಯಾಂಟ್‌ಗಳು ನುಸುಳಿವೆ. ಸದ್ಯ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳಾಗಿ ಬದಲಾಗಿವೆ. ಫ್ರಿಂಝ್ ಪ್ಯಾಂಟ್ ಹೇಗಿರುತ್ತವೆ? ಯಾವ ರೀತಿ ರೆಡಿಯಾಗಬೇಕು? ಮುಂತಾದ ವಿವರ ಇಲ್ಲಿದೆ.
ಜೆನ್ ಝೀ ಹುಡುಗಿಯರ ಆಕರ್ಷಣೆ
ಹೈ ಫ್ಯಾಷನ್ ಫಾಲೋ ಮಾಡುವಂತಹ ಅಲ್ಟ್ರಾ ಮಾಡರ್ನ್ ಜೆನ್ ಝೀ ಹುಡುಗಿಯರ ಲಿಸ್ಟ್‌ನಲ್ಲಿ ಇದೀಗ ಫ್ರಿಂಝ್ ಪ್ಯಾಂಟ್‌ಗಳು ನುಸುಳಿವೆ. ಸದ್ಯ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳಾಗಿ ಬದಲಾಗಿವೆ.
ಹುಡುಗಿಯರ ವಾರ್ಡ್‌ರೋಬ್ ಸೇರಿದ ಪ್ಯಾಂಟ್
ಫ್ರಿಂಝ್ ಜಾಕೆಟ್ ಗೊತ್ತು, ಫ್ರಿಂಝ್ ಟಾಪ್ ಗೊತ್ತು! ಇದೇನಿದು ಫ್ರಿಂಝ್ ಪ್ಯಾಂಟ್ ಎಂದು ಹುಬ್ಬೇರಿಸುತ್ತಿದ್ದೀರಾ! ಹೌದು, ಈ ಸ್ಟೈಲ್‌ನ ಪ್ಯಾಂಟ್ ಇದೀಗ ಹೈ ಫ್ಯಾಷನ್ ಹುಡುಗಿಯರ ವಾರ್ಡ್‌ರೋಬ್‌ಗೆ ಎಂಟ್ರಿ ಕೊಟ್ಟಿದೆ. ಡಿಫರೆಂಟ್ ಲುಕ್ ಬಯಸುವ ಹುಡುಗಿಯರನ್ನು ಆವರಿಸಿಕೊಂಡಿದೆ.
ಕೌಶಾನಿ ಮುಖರ್ಜಿಯ ಫ್ರಿಂಝ್ ಪ್ಯಾಂಟ್
ಕೌಶಾನಿ ಮುಖರ್ಜಿ ಇತ್ತೀಚೆಗೆ ತಮ್ಮ ಫೋಟೋಶೂಟ್ ಒಂದರಲ್ಲಿ ಧರಿಸಿದ್ದ ಫೇಕ್ ಲೆದರ್‌ನ ಫ್ರಿಂಝ್ ಪ್ಯಾಂಟ್ ಫ್ಯಾಷನೆಬಲ್ ಹುಡುಗಿಯರ ಗಮನ ಸೆಳೆದಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೊ ಕಾಣಿಸಿಕೊಂಡ ನಂತರವಂತೂ ಆನ್‌ಲೈನ್‌ನಲ್ಲೂ ಈ ಪ್ಯಾಂಟ್‌ಗಳನ್ನು ಹುಡುಕುವವರ ಸಂಖ್ಯೆಯೂ ಹೆಚ್ಚಾಗಿತ್ತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ರಿಚಾ.
ಫ್ರಿಂಝ್ ಪ್ಯಾಂಟ್ ವಿನ್ಯಾಸ
ನೋಡಲು ಮಾಮೂಲಿ ಪ್ಯಾಂಟ್ ಡಿಸೈನ್ ಹೊಂದಿರುವ ಈ ಪ್ಯಾಂಟ್‌ಗಳು ಹಿಂದಿನ ಭಾಗದಲ್ಲಿ ಲೇಯರ್ ಲುಕ್ ನೀಡುವಂತೆ ಪ್ರಿಂಝ್ ಹೊಂದಿರುತ್ತವೆ. ಕ್ಯಾಮೆರಾಗೆ ಪೋಸ್ ನೀಡುವಾಗ ಹೈಲೈಟಾಗುತ್ತವೆ.
ಫ್ರಿಂಝ್ ಪ್ಯಾಂಟ್ ಸ್ಟೈಲಿಂಗ್ ಹೇಗೆ?
- ಅಂದಹಾಗೆ, ಈ ಪ್ಯಾಂಟ್ ಮಾಡರ್ನ್ ಲುಕ್‌ಗೆ ಮ್ಯಾಚ್ ಆಗುತ್ತದೆ. ಹಾಗಾಗಿ ಟ್ರೆಂಡಿಯಾಗಿರುವ ಕಾನ್ಸೆಪ್ಟ್ ಪ್ರಕಾರ ಮಿಕ್ಸ್ ಮ್ಯಾಚ್ ಮಾಡಿ.
- ಮಾನೋಕ್ರೋಮ್ ಮ್ಯಾಚಿಂಗ್ ಟ್ರೈ ಮಾಡಿ, ನೋಡಿ.
- ಫಂಕಿ ಲುಕ್ ನೀಡುವುದು ಬೆಸ್ಟ್.