ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gen Z Fashion 2026: ಜೆನ್‌ ಜಿ ಬೆಡಗಿಯರ ಡ್ರೇಪ್‌ ಗೌನ್‌ ಲವ್

Short Draped Gown: ಉದ್ದುದ್ದದ ಗೌನ್‌ಗಳನ್ನು ಬಿಟ್ಟು ಜೆನ್‌ ಜಿಗಳು ಇದೀಗ ಶಾರ್ಟ್ ಇರುವಂತಹ ಡ್ರೇಪ್‌ ಗೌನ್‌ಗಳತ್ತ ವಾಲತೊಡಗಿದ್ದಾರೆ. ಗ್ಲಾಮರಸ್‌ ಲುಕ್‌ ನೀಡುವ ಈ ಗೌನ್‌ಗಳ ಸ್ಪೆಷಾಲಿಟಿಯಾದರೂ ಏನು? ಈ ಕುರಿತ ವಿವರ ಇಲ್ಲಿದೆ.

ಚಿತ್ರಗಳು: ಹೆಲೈ ಶಾ, ನಟಿ, ಚಿತ್ರಕೃಪೆ: ದೀಪಕ್‌ ದಾಸ್‌ ಪೋಟೋಗ್ರಫಿ.
1/5

ಜೆನ್‌ ಜಿ ಹುಡುಗಿಯರು ಗ್ಲಾಮರಸ್‌ ಲುಕ್‌ ನೀಡುವ ಶಾರ್ಟ್ ಡ್ರೇಪ್‌ ಗೌನ್‌ಗಳತ್ತ ಮುಖಮಾಡಿದ್ದಾರೆ.

2/5

ಗ್ಲಾಮರಸ್ ಲುಕ್‌ ನೀಡುವ ಗೌನ್‌ಗಳಿವು

ಎಲ್ಲರಿಗೂ ಗೌನ್‌ ಫ್ಯಾಷನ್‌ ಎಂದಾಕ್ಷಣಾ ಕಣ್ಮುಂದೆ ಬರುವುದು ಮುಡಿಯಿಂದ ಪಾದದವರೆಗೂ ಇರುವ ಉದ್ದುದ್ದದ ಗೌನ್‌ಗಳು. ಆದರೆ, ಜೆನ್‌ ಜಿಯವರ ಮನೋಭಿಲಾಷೆಗೆ ತಕ್ಕಂತೆ ಇದೀಗ ಈ ಗೌನ್‌ಗಳಿಗೂ ಕತ್ತರಿ ಬಿದ್ದಿದೆ. ಇತ್ತ ಫ್ರಾಕೂ ಅಲ್ಲ, ಅತ್ತ ಮ್ಯಾಕ್ಸಿಯೂ ಅಲ್ಲದ ಶೈಲಿಯಲ್ಲಿ ಈ ಗೌನ್‌ಗಳು ಆಗಮಿಸಿವೆ. ಅವುಗಳಲ್ಲಿ ಇದೀಗ ಡ್ರೇಪ್‌ ಗೌನ್‌ಗಳು ಎಂಟ್ರಿ ನೀಡಿವೆ. ವಿಶೇಷವಾಗಿ ಮಾಡರ್ನ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

3/5

ಹೆಲೈ ಶಾ ಡ್ರೇಪ್‌ ಗೌನ್‌

ನಟಿ ಹೆಲೈ ಶಾ ಇತ್ತೀಚೆಗೆ ಆಫ್‌ ಶೋಲ್ಡರ್‌ನ ಬ್ಲ್ಯಾಕ್‌ & ವೈಟ್‌ ಶೇಡ್‌ ಇರುವಂತಹ ಡ್ರೇಪ್‌ ಗೌನ್‌ ಧರಿಸಿದ್ದರು. ಅವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಅಪ್‌ಲೋಡ್‌ ಮಾಡಿದ್ದೇ ತಡ ಜೆನ್‌ ಜಿ ಫ್ಯಾಷನ್‌ ಪ್ರಿಯರು ಇದೇ ರೀತಿಯ ಗೌನ್‌ಗಳಿಗೆ ಆನ್‌ಲೈನ್‌ ಶಾಪ್‌ಗಳಿಗೆ ಮುಗಿಬಿದ್ದರು. ಅದರಲ್ಲೂ ಶಾರ್ಟ್ ಗೌನ್‌ಗಳನ್ನು ತಡಕಾಡತೊಡಗಿದರು ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು

4/5

ಇದ್ಯಾವ ಬಗೆಯ ಡ್ರೇಪ್‌ ಗೌನ್‌?

ಸೊಂಟದ ಕೆಳಗೆ ನೆರಿಗೆಯನ್ನು ಕೂಡಿಸಿದಂತೆ ವಿನ್ಯಾಸಗೊಳಿಸಲಾದ ಎರಡು ಭಾಗ ವಿನ್ಯಾಸ ಮಾಡಿರುವಂತೆ ಕಾಣಿಸುವ ಗೌನ್‌ ಇದು. ವಿಶೇಷವೆಂದರೇ ಈ ಗೌನ್‌ ಗಿಡ್ಡನಾಗಿರುತ್ತವೆ. ಪಾದ ಮುಟ್ಟುವುದಿಲ್ಲ! ಇನ್ನು ಕೆಲವು ನೋಡಲು ಆಫ್‌ ಶೋಲ್ಡರ್‌ ಗೌನ್‌ನಂತೆ ಕಂಡರೂ ಟ್ರಾನ್ಸಪರೆಂಟ್‌ ಸ್ಟ್ರಾಪ್‌ ಮೂಲಕ ದೇಹವನ್ನು ಹಿಡಿದಿಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

5/5

ಜೆನ್‌ ಜಿ ಗೌನ್‌ ಪ್ರಿಯರಿಗೆ ಸಲಹೆ

  • ಆದಷ್ಟೂ ವೇಸ್ಟ್‌ಲೈನ್‌ನಲ್ಲಿ ಫಿಟ್‌ ಆಗುವಂತವನ್ನೇ ಆಯ್ಕೆ ಮಾಡಿ ಧರಿಸಿ.
  • ಗ್ಲಾಮರಸ್‌ ಲುಕ್‌ ನೀಡುತ್ತವೆ. ಸಿಂಪಲ್‌ ಮೆಕೋವರ್‌ ಮಾಡಿ.
  • ಬ್ಯಾಕ್‌ಲೆಸ್‌ ಗೌನ್‌ನಂತೆಯೂ ಕಾಣಿಸುವುದು.

ಶೀಲಾ ಸಿ ಶೆಟ್ಟಿ

View all posts by this author