ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಗಿಚ್ಚಿ ಗಿಲಿಗಿಲಿʼ ಶೋನಿಂದ ಕಲ್ಯಾಣ ಮಂಟಪದವರೆಗೆ; ದಾಂಪತ್ಯ ಬದುಕಿಗೆ ಕಾಲಿಟ್ಟ ಮಾನಸಾ - ಶಿವು, ಇಲ್ಲಿವೆ ಮದುವೆ ಫೋಟೋಗಳು

ಕಲರ್ಸ್‌ ಕನ್ನಡ ವಾಹಿನಿಯ 'ಮಜಾ ಭಾರತ', 'ಗಿಚ್ಚಿ ಗಿಲಿಗಿಲಿ' ಮುಂತಾದ ಶೋಗಳ ಮೂಲಕ ಮನೆಮಾತಾಗಿದ್ದ ನಟಿ ಮಾನಸಾ ಗುರುಸ್ವಾಮಿ ಹಾಗೂ ಶಿವಕುಮಾರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಶೋನಿಂದಲೇ ಪರಿಚಿತಗೊಂಡಿದ್ದ ಮಾನಸಾ ಶಿವು, ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇದೀಗ ಕುಟುಂಬದ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ. ಇನ್ನು, ಇವರ ಮದುವೆಯ ಮುಹೂರ್ತಕ್ಕೂ ಮುನ್ನ ಗ್ರ್ಯಾಂಡ್‌ ಆಗಿ ರಿಸೆಪ್ಷನ್‌ ಕೂಡ ಜರುಗಿದೆ. ಈ ಜೋಡಿಯ ಮದುವೆಯ ಸುಂದರ ಕ್ಷಣಗಳ ಫೋಟೋಗಳು ಸೋಶಿಯ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

1/6

ಕಿರುತೆರೆಯ ಜನಪ್ರಿಯ ಜೋಡಿ ಶಿವು ಮತ್ತು ಮಾನಸಾ ಇದೀಗ ವಿವಾಹ ಜೀವನಕ್ಕೆ ಕಾಲಿಟ್ಟಿದ್ದು, ಅವರ ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

2/6

'ಮಜಾ ಭಾರತ' ಕಾರ್ಯಕ್ರಮದ ಕಾಲದಿಂದಲೂ ಪರಿಚಿತರಾಗಿದ್ದ ಈ ಜೋಡಿ, ಹಲವು ಕಾಮಿಡಿ ಸ್ಕಿಟ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ನಂತರ 'ಗಿಚ್ಚಿ ಗಿಲಿಗಿಲಿ' ಶೋನಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿದ್ದರು.

3/6

ʻಗಿಚ್ಚಿ ಗಿಲಿಗಿಲಿʼ ಕಾರ್ಯಕ್ರಮದ ಸಮಯದಲ್ಲಿ ಬೆಳೆದ ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು. ಇದೀಗ ಎರಡು ಕುಟುಂಬಗಳ ಒಪ್ಪಿಗೆಯೊಂದಿಗೆ ಮಾನಸಾ - ಶಿವು ದಾಂಪತ್ಯಕ್ಕೆ ಕಾಲಿಟ್ಟಿದೆ.

4/6

'ಗಿಚ್ಚಿ ಗಿಲಿಗಿಲಿ' ಸೀಸನ್ 1ರ ವಿಜೇತರಾಗಿದ್ದ ಶಿವು, ತಮಗೆ ಸಿಕ್ಕ ಪ್ರಶಸ್ತಿಯ ಮೊತ್ತವನ್ನು ಸ್ವಂತ ಮನೆ ಕಟ್ಟಲು ಬಳಸುವುದಾಗಿ ಅಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದರು.

5/6

ಮದುವೆಗೆ ಮುಂಚಿತವಾಗಿ ನಡೆದ ಅದ್ದೂರಿ ಮೆಹಂದಿ ಶಾಸ್ತ್ರದ ಫೋಟೋಗಳು ಗಮನ ಸೆಳೆದಿದ್ದು, ಇದರಲ್ಲಿ ಸುಷ್ಮಿತಾ ಜಗ್ಗಪ್ಪ, ಯಶಸ್ವಿನಿ ನಿರಂಜನ್, ರಾಘವೇಂದ್ರ ಸೇರಿದಂತೆ ಹಲವು ಕಿರುತೆರೆ ತಾರೆಯರು ಭಾಗವಹಿಸಿದ್ದರು.

6/6

ಇದೇ ಶೋನಲ್ಲಿ ಭಾಗವಹಿಸಿ ಪ್ರೀತಿಸಿ ಮದುವೆಯಾಗಿದ್ದ ಸುಷ್ಮಿತಾ ಮತ್ತು ಜಗಪ್ಪ ಅವರಂತೆ, ಶಿವು ಮತ್ತು ಮಾನಸಾ ಕೂಡ ಈಗ ಹಸೆಮಣೆ ಏರಿದ್ದಾರೆ.