ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೆದರ್‌ಲ್ಯಾಂಡ್ಸ್‌ನಲ್ಲಿ ಭಾರತೀಯ ಸಂಸ್ಕೃತಿಯ ಝಲಕ್: ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ

PM Modi Netherlands visit: ಪ್ರಧಾನಮಂತ್ರಿ ನರೇಂದ್ರ ಮೋದಿ ಡಚ್ ನಾಯಕರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಲು ನೆದರ್‌ಲ್ಯಾಂಡ್ಸ್‌ ತಲುಪಿದ್ದಾರೆ. ಪ್ರಧಾನಿ ಮೋದಿ ಮಾತನಾಡಲು ಸಿದ್ಧರಾಗುತ್ತಿದ್ದಂತೆ, ಭಾರತೀಯ ಮೂಲದ ಯಶಸ್ಸಿನ ಕಥೆಯೊಂದರ ಕಡೆಗೆ ಎಲ್ಲರ ಚಿತ್ತ ನೆಟ್ಟಿತು. ದಿ ಹೇಗ್ ನಗರವನ್ನು ಭಾರತೀಯ ಸ್ನೇಹದ ಜೀವಂತ ಸಂಕೇತ ಎಂದು ಮೋದಿ ಬಣ್ಣಿಸಿದರು.

ಪ್ರಧಾನಿ ಮೋದಿಗೆ ನೆದರ್‌ಲ್ಯಾಂಡ್ಸ್‌ನಲ್ಲಿ ಅದ್ಧೂರಿ ಸ್ವಾಗತ
1/8

ಉನ್ನತ ಮಟ್ಟದ ಮಾತುಕತೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಡಚ್ ನಾಯಕರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಲು ನೆದರ್‌ಲ್ಯಾಂಡ್ಸ್‌ ತಲುಪಿದ್ದಾರೆ. ನೆದರ್‌ಲ್ಯಾಂಡ್ಸ್‌ ಪ್ರವಾಸದ ವೇಳೆ ಭಾರತೀಯ ವಲಸಿಗರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದಿ ಹೇಗ್ ನಗರವನ್ನು ಭಾರತೀಯ ಸ್ನೇಹದ ಜೀವಂತ ಸಂಕೇತ ಎಂದು ಬಣ್ಣಿಸಿದರು.

2/8

ಭಾರತ್ ಮಾತಾ ಕಿ ಜೈ ಘೋಷಣೆ

ಭಾರತ್ ಮಾತಾ ಕಿ ಜೈ ಘೋಷಣೆಗಳೊಂದಿಗೆ ತಮ್ಮ ಭಾಷಣವನ್ನು ಆರಂಭಿಸಿದ ಪ್ರಧಾನಿ ಮೋದಿ, ''ನಾನು ಸ್ವಲ್ಪ ಸಮಯದವರೆಗೆ ನೆದರ್‌ಲ್ಯಾಂಡ್ಸ್‌ನಲ್ಲಿದ್ದೇನೆ ಎಂಬುದನ್ನು ಮರೆತಿದ್ದೆ. ಭಾರತದಲ್ಲಿಯೇ ಒಂದು ಹಬ್ಬ ನಡೆಯುತ್ತಿರುವಂತೆ ಭಾಸವಾಗುತ್ತಿದೆ'' ಎಂದು ಬಣ್ಣಿಸಿದರು.

3/8

ಸ್ನೇಹದ ಜೀವಂತ ಸಂಕೇತ

ಡಚ್ ನಗರದ ಮಹತ್ವವನ್ನು ಉಲ್ಲೇಖಿಸಿದ ಅವರು, ʼʼದಿ ಹೇಗ್ ನಗರವನ್ನು ಶಾಂತಿ ಮತ್ತು ನ್ಯಾಯದ ನಗರಿ ಎಂದು ಕರೆಯಲಾಗುತ್ತದೆʼʼ ಎಂದರು. ಈ ಕಾರ್ಯಕ್ರಮದಲ್ಲಿ ನೆದರ್‌ಲ್ಯಾಂಡ್ಸ್‌ನಲ್ಲಿ ನೆಲೆಸಿರುವ ಪ್ರಭಾವಿ 'ಸುರಿನಾಮಿ-ಹಿಂದೂಸ್ತಾನಿ' ಸಮುದಾಯದವರೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅವರ ಆತಿಥ್ಯ ಮತ್ತು ಪ್ರೀತಿಯನ್ನು ಕಂಡು ಪ್ರಧಾನಿ, ʼʼದಿ ಹೇಗ್ ನಗರವನ್ನು ಭಾರತೀಯ ಸ್ನೇಹದ ಜೀವಂತ ಸಂಕೇತವಾಗಿ ಮಾರ್ಪಟ್ಟಂತೆ ತೋರುತ್ತಿದೆʼʼ ಎಂದು ಹೇಳಿದರು.

4/8

ಭಾರತೀಯ ಮೂಲದ ಯಶಸ್ಸಿನ ಕಥೆ

ಪ್ರಧಾನಿ ಮೋದಿ ಮಾತನಾಡಲು ಸಿದ್ಧರಾಗುತ್ತಿದ್ದಂತೆ, ಭಾರತೀಯ ಮೂಲದ ಯಶಸ್ಸಿನ ಕಥೆಯೊಂದರ ಕಡೆಗೆ ಎಲ್ಲರ ಚಿತ್ತ ನೆಟ್ಟಿತು. ಅದೇ 'ಸುರಿನಾಮಿ-ಹಿಂದೂಸ್ತಾನಿ ಡಯಾಸ್ಪೊರಾ' (ಸುರಿನಾಮಿ-ಭಾರತೀಯ ವಲಸಿಗ ಸಮುದಾಯ). ಇವರು ಎರಡು ಖಂಡಗಳು, ಎರಡು ಭಾಷೆಗಳು ಮತ್ತು ಎರಡು ತಾಯ್ನಾಡುಗಳನ್ನು ದಾಟಿ ಬಂದು, 153 ವರ್ಷಗಳಿಂದ ಭಾರತವನ್ನು ತಮ್ಮ ಹೃದಯದಲ್ಲಿ ಜೀವಂತವಾಗಿರಿಸಿಕೊಂಡಿರುವ ಎರಡು ಬಾರಿ ವಲಸೆ ಹೋದವರು.

5/8

ನಿಕಟ ಸಂಪರ್ಕ

ʼʼನಾನು ಈ ಹಿಂದೆ ಹಲವು ಬಾರಿ ನೆದರ್‌ಲ್ಯಾಂಡ್ಸ್‌ಗೆ ಭೇಟಿ ನೀಡಿದ್ದೇನೆ. ಇಲ್ಲಿ ವಾಸಿಸುವ ಭಾರತೀಯರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೇನೆ. ಇಂದು ಇಲ್ಲಿ ಕುಳಿತಿರುವ ಕುಟುಂಬಗಳ ಕಥೆಯು ಕೇವಲ ವಲಸೆಯ ಕಥೆಯಲ್ಲ. ಬದಲಿಗೆ ಎಲ್ಲ ಸವಾಲುಗಳು ಮತ್ತು ಸಂಕಷ್ಟಗಳ ನಡುವೆಯೂ ತಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಸಾಧಿಸಿದ ಪ್ರಗತಿಯ ಕಥೆ. ಅಂದಿನ ದಿನಗಳಲ್ಲಿ, ಎರಡು ಮಹಾಸಾಗರಗಳನ್ನು ದಾಟಿದ ನಂತರವೂ ಭಾರತೀಯರ ಗುರುತು ಮತ್ತು ಅಸ್ತಿತ್ವ ಹೀಗೆ ಜೀವಂತವಾಗಿ ಉಳಿಯುತ್ತದೆ ಎಂದು ಯಾರೂ ಯೋಚಿಸಿರಲಿಕ್ಕಿಲ್ಲʼʼ ಎಂದು ಮೋದಿ ಹೇಳಿದರು.

6/8

ಅತ್ಯಂತ ದೊಡ್ಡ ಭಾರತೀಯ ಮೂಲದ ಸಮುದಾಯ

ʼʼಇಂದು ಸರಿಸುಮಾರು 2,00,000 (ಎರಡು ಲಕ್ಷ) ಸಂಖ್ಯೆಯಲ್ಲಿರುವ ಸುರಿನಾಮಿ-ಹಿಂದೂಸ್ತಾನಿಗಳು ಯುರೋಪ್ ಖಂಡದಲ್ಲೇ ಅತ್ಯಂತ ದೊಡ್ಡ ಮತ್ತು ಅತ್ಯಂತ ಹಳೆಯ ಭಾರತೀಯ ಮೂಲದ ಸಮುದಾಯವಾಗಿದ್ದಾರೆ. ಇವರು ಇತ್ತೀಚಿನ ದಿನಗಳಲ್ಲಿ ಭಾರತದಿಂದ ನೇರವಾಗಿ ವಲಸೆ ಬಂದಿರುವ ಸುಮಾರು 90,000 ಹೊಸ ವಲಸಿಗರಿಗಿಂತ ಭಿನ್ನವಾಗಿದ್ದರೂ, ಅವರೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆʼʼ ಎಂದರು.

7/8

ಸರ್ನಾಮಿ-ಭೋಜಪುರಿ ಗೀತ್

ಭೋಜಪುರಿ ಪ್ರದೇಶದ ಜಾನಪದ ಮತ್ತು ಭಕ್ತಿ ಸಂಗೀತ ಶೈಲಿಯಾದ ಶತಮಾನಗಳಷ್ಟು ಹಳೆಯದಾದ 'ಬೈಠಕ್ ಗಾನಾ' ಸಂಪ್ರದಾಯವು, ನೆದರ್‌ಲ್ಯಾಂಡ್ಸ್‌ನಲ್ಲಿ ವಿಶಿಷ್ಟವಾದ 'ಸರ್ನಾಮಿ-ಭೋಜಪುರಿ ಗೀತ್' ಶೈಲಿಯಾಗಿ ವಿಕಸನಗೊಂಡಿದೆ.

8/8

ಭಾರತೀಯ ಮೌಲ್ಯಗಳ ಸಂರಕ್ಷಣೆಯ ಮಹತ್ವ

ʼʼವಿದೇಶಗಳಲ್ಲಿ ಭಾರತೀಯ ಮೌಲ್ಯಗಳ ಸಂರಕ್ಷಣೆಯ ಮಹತ್ವ ಎತ್ತಿ ಹಿಡಿದ ಪ್ರಧಾನಿ ಮೋದಿ, ನೆದರ್‌ಲ್ಯಾಂಡ್ಸ್‌ನಲ್ಲಿ ವಾಸಿಸುತ್ತಿರುವ ಭಾರತೀಯರ ಪೂರ್ವಜರು ತಮ್ಮ ತಾಯ್ನಾಡನ್ನು ಭೌತಿಕವಾಗಿ ತೊರೆದಿರಬಹುದು. ಆದರೆ ಅವರು ತಮ್ಮ ಸಂಪ್ರದಾಯಗಳು, ನೆನಪುಗಳು ಮತ್ತು ಮೌಲ್ಯಗಳನ್ನು ತಮ್ಮೊಂದಿಗೆ ಹೊತ್ತು ತಂದಿದ್ದಾರೆʼʼ ಎಂದು ಹೇಳಿದರು.