ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gown Fashion 2025: ಸೆಲೆಬ್ರೆಟಿ ಲುಕ್‌ಗಾಗಿ ಟ್ರೆಂಡಿಯಾದ ಫ್ರಿಲ್ ಫ್ಲೇರ್ ಗೌನ್

Gown Fashion 2025: ಈ ಸೀಸನ್‌ನಲ್ಲಿ ಸೆಲೆಬ್ರೆಟಿ ಲುಕ್ ನೀಡುವ ನಾನಾ ಬಗೆಯ ಗೌನ್‌ಗಳಲ್ಲಿ, ಇಂದು ಅತಿ ಹೆಚ್ಚಾಗಿ ಫ್ರಿಲ್ ಫ್ಲೇರ್ ಡಿಸೈನ್ ಇರುವಂತಹ ವೆರೈಟಿ ವಿನ್ಯಾಸದ ಗೌನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇವುಗಳಲ್ಲಿ ಯಾವ್ಯಾವ ಡಿಸೈನ್ನವು ಪ್ರಚಲಿತದಲ್ಲಿವೆ? ಎಂಬುದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್
1/5

ಸೆಲೆಬ್ರೆಟಿ ಲುಕ್ ನೀಡುವ ನಾನಾ ಬಗೆಯ ಫ್ರಿಲ್ ಫ್ಲೇರ್ ಗೌನ್‌ಗಳು ಈ ಸೀಸನ್‌ನ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಅಲ್ಲದೇ, ಯಂಗ್ ಲುಕ್ ನೀಡುವಂತಹ ಪಾಸ್ಟೆಲ್‌ ಹಾಗೂ ತಿಳಿ ವರ್ಣದವು ಕೂಡ ಪ್ರಚಲಿತದಲ್ಲಿವೆ. ಯಂಗ್ ಲುಕ್ ನೀಡುವ ಶೈಲಿಯ ಗೌನ್‌ಗಳಿಗೆ ಎಲ್ಲಾ ವರ್ಗದ ಮಹಿಳೆಯರು ಮನ ಸೋತಿದ್ದಾರೆ. ಸೆಲೆಬ್ರೆಟಿಗಳನ್ನು ಅನುಸರಿಸುತ್ತಿದ್ದಾರೆ. ಈ ಮೊದಲು ಚಾಲ್ತಿಯಲ್ಲಿದ್ದ ಫ್ಲೋರಲ್, ಟ್ರಾಪಿಕಲ್, ನೇಚರ್, ಜಮೆಟ್ರಿಕ್ ಹೀಗೆ ನಾನಾ ಪ್ರಿಂಟ್ಟ್‌ನ ಫ್ರಿಲ್ ಫ್ಲೇರ್ ಗೌನ್‌ಗಳು ಸದ್ಯ ಸೈಡಿಗೆ ಸರಿದಿವೆ. ತಿಳಿ ಬಣ್ಣದ ಫ್ಲೀಟ್ಸ್, ಫ್ರಿಲ್ಸ್, ವೇವ್ಸ್ ವಿನ್ಯಾಸದ ಗೌನ್‌ಗಳು ಚಾಲ್ತಿಯಲ್ಲಿವೆ. ಇನ್ನು, ನೋಡಲು ಮನಮೋಹಕವಾಗಿರುವ ಉದ್ದನೆಯ ಬಳುಕಾಡುವ ಸಿಂಡ್ರೆಲಾ ಫ್ರಾಕ್‌ನಂತೆ ಕಾಣುವಂತವು ಕೂಡ ಪ್ರಚಲಿತದಲ್ಲಿವೆ. ಕೆಲವಂತೂ ಯಂಗ್‌ ಲುಕ್‌ ನೀಡುತ್ತವೆ ಎಂಬ ಕಾರಣದಿಂದಾಗಿ ಟ್ರೆಂಡಿಯಾಗಿವೆ ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್ ರಾಶಿ.

2/5

ಮಾನೊಕ್ರೋಮ್ ನೆಟ್ಟೆಡ್ ಗೌನ್

ಪಾರ್ಟಿಗಳಿಗೆ ಹೊಂದುವಂತಹ ಒಂದೇ ಬಗೆಯ ಬಣ್ಣಗಳಲ್ಲಿ ಲಭ್ಯವಿರುವ ಮೃದುವಾದ ಪರದೆಯಂತಿರುವ ನೆಟ್ಟೆಡ್ ಗೌನ್‌ಗಳು ಮಾಡೆಲಿಂಗ್ ಲೋಕದ ರೂಪದರ್ಶಿಯರನ್ನು ಮಾತ್ರವಲ್ಲ, ಫ್ಯಾಷನ್ಪ್ರಿಯ ಯುವತಿಯರನ್ನು ಸೆಳೆದಿವೆ. ಇವು ನೋಡಲು ಲಾಂಗ್‌ ಫ್ರಾಕ್‌ನಂತೆ ಬಿಂಬಿಸುತ್ತವೆ.

3/5

ಮಲ್ಟಿ ಲೇಯರ್ ಫ್ರಿಲ್ ಫ್ಲೇರ್ ಗೌನ್

ಒಂದರ ಮೇಲೊಂದರಂತೆ ಜೋಡಿಸಿರುವ ನೆರಿಗೆಯಂತೆ ಕಾಣುವ ಮಲ್ಟಿ ಲೇಯರ್‌ ಫ್ರಿಲ್ ಇಲ್ಲವೇ ಪಕ್ಷಿಗಳ ರೆಕ್ಕೆ ಪುಕ್ಕದಂತೆ ಕಾಣುವ ಫ್ಲೀಟ್ಸ್ ಅಥವಾ ಫ್ಲೇರ್ ಶೈಲಿಯ ಈ ಗೌನ್‌ಗಳು ಕೂಡ ಬೇಡಿಕೆ ಪಡೆದುಕೊಂಡಿವೆ. ಈ ಗೌನ್ ಧರಿಸಲು ಬಾಡಿ ಮಾಸ್ ಇಂಡೆಕ್ಸ್ ಪರ್ಫೆಕ್ಟ್ ಆಗಿರಬೇಕಾಗಿಲ್ಲ.

4/5

ಬಳುಕಾಡುವ ಮ್ಯಾಕ್ಸಿ ಸ್ಟೈಲ್ ಫ್ಲೀಟ್ಸ್ ಗೌನ್

ಬಳುಕಾಡುವ ಫ್ಲೋಟಿ ಮ್ಯಾಕ್ಸಿ ಸ್ಟೈಲ್ ಫ್ಲೀಟ್ಸ್ ಗೌನ್ ಹೆಚ್ಚಾಗಿ ಪ್ಲಂಪಿಯಾಗಿರುವವರಿಗೆ ಚೆನ್ನಾಗಿ ಕಾಣುತ್ತವೆ. ಇಂದು ಇದು ಯಾವ ಮಟ್ಟಿಗೆ ಟ್ರೆಂಡಿಯಾಗಿದೆ ಎಂದರೇ, ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರು ಮಾತ್ರವಲ್ಲ, ಎಲ್ಲಾ ವರ್ಗದವರೂ ಕೂಡ ಇವೆಂಟ್‌ಗಳಲ್ಲಿ ಧರಿಸಲಾರಂಭಿಸಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ಗೌನ್‌ ಪ್ರಿಯರಿಗೆ ಸ್ಟೈಲಿಸ್ಟ್ ಅಮಿತ್ ಪಾಂಡ್ಯ ಸಲಹೆ

  • ಪಾಸ್ಟೆಲ್‌ ವರ್ಣದ ಗೌನ್ ಆಯ್ಕೆ ಮಾಡುವಾಗ ನಿಮ್ಮ ಸ್ಕಿನ್‌ಟೋನ್‌ಗೆ ಸೂಟ್ ಆಗುವುದೇ ಎಂಬುದನ್ನು ಗಮನಿಸಿ.
  • ಯಾವುದೇ ಗೌನ್ ಜತೆಗೆ ಹೈ ಹೀಲ್ಸ್ ಶೂ ಧರಿಸುವುದು ಉತ್ತಮ.
  • ಟ್ರೆಡಿಷನಲ್ ಜುವೆಲರಿ ಬಳಕೆ ಬೇಡ.
  • ವೈಬ್ರೆಂಟ್ ನೇಲ್ ಆರ್ಟ್ ಮ್ಯಾಚ್ ಆಗುತ್ತದೆ.
  • ನೆಕ್‌ಲೈನ್‌ಗೆ ತಕ್ಕಂತೆ ಹೇರ್‌ಸ್ಟೈಲ್ ಮ್ಯಾಚ್ ಮಾಡುವುದು ಅಗತ್ಯ.

ಶೀಲಾ ಸಿ ಶೆಟ್ಟಿ

View all posts by this author