ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gown Fashion 2026: ಅಸ್ಸೆಮ್ಮೆಟ್ರಿಕಲ್‌ ಜಾರ್ಜೆಟ್‌ ಗೌನ್‌ಗಳ ಜಾದೂ

Asymmetrical Georgette Gowns: ನಾನಾ ಡಿಸೈನ್‌ನ ಅಸ್ಸೆಮ್ಮೆಟ್ರಿಕಲ್‌ ಜಾರ್ಜೆಟ್‌ ಗೌನ್‌ಗಳು ಈ ಸೀಸನ್‌ನಲ್ಲಿ ಲಗ್ಗೆ ಇಟ್ಟಿವೆ. ಇದ್ಯಾವ ಬಗೆಯ ಗೌನ್‌? ವಿಶೇಷತೆಯೇನು? ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಯಾರಿಗೆ ಸೂಕ್ತ? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಶ್ರೀ ಮುಖಿ, ನಟಿ
1/5

ಅಸ್ಸೆಮ್ಮೆಟ್ರಿಕಲ್‌ ಜಾರ್ಜೆಟ್‌ ಗೌನ್‌ಗಳು ಈ ಸೀಸನ್‌ನಲ್ಲಿ ನಯಾ ಡಿಸೈನ್‌ಗಳಲ್ಲಿ ಲಗ್ಗೆ ಇಟ್ಟಿವೆ. ನಾನಾ ವಿನ್ಯಾಸದಲ್ಲಿ ಕಾಣ ಸಿಗುವ ಈ ಗೌನ್‌ಗಳು ಧರಿಸಿದಾಗ ಲೈಟ್‌ವೈಟ್‌ ಎಂದೆನಿಸುವುದು ಮಾತ್ರವಲ್ಲ, ದೇಹದ ಮೇಲೆ ಹಾಗೆಯೇ ಫ್ಲೋ ಆಗುತ್ತವೆ.

2/5

ಶ್ರೀಮುಖಿ ಧರಿಸಿದ್ಧ ಲ್ಯಾವೆಂಡರ್‌ ಗೌನ್‌

ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ನಟಿ ಶ್ರೀ ಮುಖಿ ಧರಿಸಿದ್ಧ ಲ್ಯಾವೆಂಡರ್‌/ಲೈಲಾಕ್‌ ಅಸ್ಸೆಮ್ಮಿಟ್ರಿಕಲ್‌ ಗೌನ್‌ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಗೌನ್‌ ಪ್ರಿಯರ ಗಮನ ಸೆಳೆದಿತ್ತು. ಅಲ್ಲದೇ, ಗೌನ್‌ ಎಂದರೇ ಸಾಕು, ಭಾರ ಎನ್ನುವವರಿಗೆ ವಾವ್ಹ್‌ ಎನ್ನುವಷ್ಟರ ಮಟ್ಟಿಗೆ ಆಕರ್ಷಿಸಿತ್ತು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ವಿದ್ಯಾ. ಅವರ ಪ್ರಕಾರ, ಅಸ್ಸೆಮ್ಮಿಟ್ರಿಕಲ್‌ ಜಾರ್ಜೆಟ್‌ ಗೌನ್‌ಗಳು ಹರಡದಂತೆ ನಿರಾಯಾಸವಾಗಿ ಧರಿಸಬಹುದಾದ ಉಡುಗೆ ಎಂದರೂ ತಪ್ಪಾಗಲಾರದು ಎನ್ನುತ್ತಾರೆ.

3/5

ಬಗೆಬಗೆಯ ಅಸ್ಸೆಮ್ಮೆಟ್ರಿಕಲ್‌ ಗೌನ್‌ಗಳು

ಅಸ್ಸೆಮ್ಮಿಟ್ರಿಕಲ್‌ ಗೌನ್‌ಗಳೆಂದಾಕ್ಷಣಾ ಸೊಟ್ಟ ಸೊಟ್ಟವಾದ ಡಿಸೈನ್‌ ಇರುತ್ತವೆ ಎಂದಲ್ಲ! ಬದಲಿಗೆ ಎರಡು, ಮೂರು ಲೇಯರ್‌ ಹೊಂದಿರುತ್ತವೆ. ಅದು ಗೌನ್‌ನ ಮೇಲ್ಗಡೆ ಕೇಪ್‌ನಂತಿರಬಹುದು, ಇಲ್ಲವೇ ಸೆಂಟರ್‌ ಕಟೌಟ್‌ನಂತಿರಬಹುದು ಅಥವಾ ಫ್ರಿಲ್‌ನಂತೆ ಸ್ಟೆಪ್‌ ಬೈ ಸ್ಟೆಪ್‌ ಕಾಣಿಸವಂತಿರಬಹುದು ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ ಜೋಸೆಫ್‌.

4/5

ಪ್ಲಂಪಿಯಾಗಿರುವವರಿಗೆ ಬೆಸ್ಟ್ ಗೌನ್‌

ಸ್ಲಿಮ್‌ ಆಗಿರುವವರಿಗಿಂತ ಪ್ಲಂಪಿಯಾಗಿರುವವರಿಗೆ ಈ ಬಗೆಯ ಗೌನ್‌ಗಳು ಅಂದವಾಗಿ ಕಾಣಿಸುತ್ತವೆ. ಉತ್ತಮ ಬಾಡಿ ಮಾಸ್‌ ಇಂಡೆಕ್ಸ್ ನನಗಿಲ್ಲ, ಬಾಡಿ ಶೇಪ್‌ನಲ್ಲಿಲ್ಲ ಎನ್ನುವವರಿಗೆ ಈ ಗೌನ್‌ಗಳು ಇಲ್ಯೂಷನ್‌ ಕ್ರಿಯೇಟ್‌ ಮಾಡುತ್ತವೆ. ಆಕಾರವನ್ನು ಹೈಲೈಟ್‌ ಮಾಡುವುದಿಲ್ಲ, ಬದಲಿಗೆ ಗೌನನ್ನೇ ಹೈಲೈಟ್‌ ಮಾಡುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಫ್ಲೋ ಆಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ಅಸ್ಸೆಮ್ಮಿಟ್ರಿಕಲ್‌ ಗೌನ್‌ ಪ್ರಿಯರಿಗೆ ಟಿಪ್ಸ್

  • ಟ್ರಯಲ್‌ ನೋಡಿ ಖರೀದಿಸಿ.
  • ಹೆಚ್ಚು ಆಕ್ಸೆಸರೀಸ್‌ ಧರಿಸುವುದು ಬೇಡ. ಮೆಸ್ಸಿಯಾಗಿ ಕಾಣಬಹುದು.
  • ಪಾಸ್ಟೆಲ್‌ ಹಾಗೂ ಡಾರ್ಕ್‌ ಶೇಡ್‌ ಈ ಎರಡು ಕಲರ್‌ಗಳು ಟ್ರೆಂಡ್‌ನಲ್ಲಿವೆ.
  • ಇಂಡೋ-ವೆಸ್ಟರ್ನ್‌ ಲುಕ್‌ಗೆ ಈ ಗೌನ್‌ ಸಹಕಾರಿ.

ಶೀಲಾ ಸಿ ಶೆಟ್ಟಿ

View all posts by this author