Grace Hayden: ಖ್ಯಾತ ಕ್ರಿಕೆಟಿಗನ ಪುತ್ರಿಯ ಬಿಕಿನಿ ಫೋಟೋಸ್ ಫುಲ್ ವೈರಲ್; ನೆಟ್ಟಿಗರು ಫಿದಾ!
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅವರು ವಿಶ್ವಮಟ್ಟದಲ್ಲಿಯೇ ಬಹಳ ಪ್ರಸಿದ್ಧಿ ಪಡೆದಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬ್ಯಾಟಿಂಗ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದ ಕ್ರಿಕೆಟಿಗ ಮ್ಯಾಥ್ಯು ಹೇಡನ್ ಅವರ ಮಗಳು ಗ್ರೇಸ್ ಹೇಡನ್ ಕೂಡ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವ ಸಾಧನೆ ಮಾಡಿದ್ದಾರೆ. ತಂದೆಯ ಜೀವನದಿಂದ ಸ್ಫೂರ್ತಿ ಪಡೆದ ಗ್ರೇಸ್ ಹೇಡನ್ ಅವರು ಉದಯೋನ್ಮುಖ ಕ್ರೀಡಾ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಇವರು ಆಸ್ಟ್ರೇಲಿಯಾದ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿದ್ದು ಇವರ ಹಾಟ್ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.



ಮ್ಯಾಥ್ಯೂ ಹೇಡನ್ ಅವರ ಪುತ್ರಿ ಗ್ರೇಸ್ ಹೆಡನ್ ಅವರು ಕೇವಲ 23ವಯಸ್ಸಿಗೆ ಅಂತಾರಾಷ್ಟ್ರೀಯ ಮಟ್ಟದವರೆಗೂ ಕ್ರೀಡಾ ನಿರೂಪಕಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಗಣ್ಯರ ಸಂದರ್ಶನ, ಕ್ರಿಕೆಟ್ ಕಮೆಂಟ್ರಿ ನೀಡಿ ಜನ ಮನ ಗೆದ್ದ ಕ್ರೀಡಾ ನಿರೂಪಕಿ ಗ್ರೇಸ್ ಹೇಡನ್ ಅವರು ಇತ್ತೀಚೆಗೆ ಬಿಕಿನಿ ಧರಿಸಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು ಸದ್ಯ ಇವರ ಫೋಟೊ ಎಲ್ಲೆಡೆ ಹರಿದಾಡುತ್ತಿದೆ.

ಖ್ಯಾತ ಕ್ರಿಕೆಟಿಗರ ಮಗಳಾದ ಇವರ ಫೋಟೊ ಕಂಡು ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಬೀಚ್ ಸೈಡ್ ನಲ್ಲಿ ತಲೆಗೆ ಸನ್ ಹ್ಯಾಟ್ ಧರಿಸಿ ಬಿಕಿನಿ ತೊಟ್ಟ ಗ್ರೇಸ್ ಹೇಡನ್ ಅವರ ಫೋಟೊ ಪಡ್ಡೆ ಹುಡುಗರ ನಿದ್ದೆ ಕದಿಯುವಂತಿದೆ.

ಗ್ರೇಸ್ ಹೇಡನ್ ಅವರು ಈ ವರ್ಷದ ಐಪಿಎಲ್ ನಲ್ಲಿ ಕ್ರೀಡಾ ನಿರೂಪಕಿಯಾಗಿ ಕಾಣಿಸಿಕೊಂಡು ಪ್ರಖ್ಯಾತಿ ಪಡೆದಿದ್ದರು. ಕ್ರೀಡಾ ಕಮೆಂಟ್ರಿಯು ಯುವ ಅಭಿಮಾನಿಗಳನ್ನು ಸೆಳೆಯುವಷ್ಟು ಮೋಡಿಯಾಗಿತ್ತು. ಇದೀಗ ಅವರ ಹಳದಿ ಬಣ್ಣದ ಬಿಕಿನಿ ಲುಕ್ ಕೂಡ ಅಭಿಮಾನಿಗಳ ಮನ ಸೆಳೆಯುವಂತೆ ಮಾಡುತ್ತಿದೆ.

ಗ್ರೇಸ್ ಹೇಡನ್ ಅವರು ಇತ್ತೀಚೆಗಷ್ಟೇ ಸಚಿನ್ ತಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಆಸ್ಟ್ರೇಲಿಯಾದ ವಿವಿಧ ಸ್ಥಳಗಳಿಗೆ ತೆರಳಿದ್ದ ಫೋಟೊ ಹಂಚಿಕೊಂಡಿದ್ದು ಆ ಫೋಟೊ ಕೂಡ ವೈರಲ್ ಆಗಿತ್ತು. ಅಂತೆಯೇ ಆಸ್ಟ್ರೇಲಿಯಾ ಬೀಚ್ ನಲ್ಲಿ ವೈಟ್ ಬಿಕಿನಿ ತೊಟ್ಟ ನಿರೂಪಕಿ ಗ್ರೇಸ್ ಹೇಡನ್ ಅವರು ಸಖತ್ ಬೋಲ್ಡ್ ಆಗಿ ಕಂಡಿದ್ದಾರೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಿರೂಪಕಿ ಗ್ರೇಸ್ ಹೇಡನ್ ಅವರು ಟ್ರಾನ್ಫರೆಂಟ್ ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಕಂಡಿದ್ದಾರೆ. ಗ್ರೇಸ್ ಅವರು ಪ್ರಸ್ತುತ ಮಹೀಂದ್ರಾ ಆಸ್ಟ್ರೇಲಿಯಾದ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಗ್ರೇಸ್ ಹೇಡನ್ ಅವರು ಕ್ವೀನ್ಸ್ಲ್ಯಾಂಡ್ ನ ಕಾಟನ್ ಬಿಸಿನೆಸ್ ಮ್ಯಾನ್ ಅವರ ಮಗ ವಿಲ್ಸನ್ ಸ್ಟ್ಯಾಥಮ್ ಜೊತೆ ಲಿವ್ ಇನ್ ನಲ್ಲಿದ್ದಾರೆ ಎಂಬ ಸುದ್ದಿ ಕೂಡ ವೈರಲ್ ಆಗಿತ್ತು. ಇವರಿಬ್ಬರು ಇಟಲಿಯ ಸಿಸಿಲಿಯಲ್ಲಿ ಕಾಣಿಸಿಕೊಂಡಿದ್ದು ಲವ್ ರಿಲೇಶನ್ ನಲ್ಲಿದ್ದಾರೆ ಎಂಬ ವದಂತಿ ಕೂಡ ಹರಿದಾಡಿದೆ..