Onam Sarees 2025: ಓಣಂ ಫೆಸ್ಟಿವ್ ಸೀಸನ್ನಲ್ಲಿ ಟ್ರೆಂಡಿಯಾಗಿರುವ ಸೀರೆಗಳಿವು
Onam Sarees 2025: ಪ್ರತಿವರ್ಷದಂತೆ ಈ ವರ್ಷವೂ ಕೂಡ ಓಣಂ ಫೆಸ್ಟಿವ್ ಸೀಸನ್ನಲ್ಲಿ ನಾನಾ ಬಗೆಯ ಸೀರೆಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಅವುಗಳಲ್ಲಿ ಒಂದಿಷ್ಟು ಬಗೆಯವು ಸಖತ್ ಟ್ರೆಂಡಿಯಾಗಿವೆ. ಅವು ಯಾವುವು? ಎಂಬುದರ ಬಗ್ಗೆ ಸೀರೆ ಎಕ್ಸ್ಪರ್ಟ್ಗಳು ಇಲ್ಲಿ ತಿಳಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್


ಓಣಂ ಸೀಸನ್ನಲ್ಲಿ ಈಗಾಗಲೇ ನಾನಾ ಬಗೆಯ ಕೇರಳ ಸೀರೆಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಅವುಗಳಲ್ಲಿ ಒಂದಿಷ್ಟು ಸೀರೆಗಳು ಟ್ರೆಂಡಿಯಾಗಿವೆ.

ಸೀಸನ್ಗೆ ಕಾಲಿಟ್ಟ ಓಣಂ ಸೀರೆಗಳು
ಮೊದಲಿನಂತೆ ಇದೀಗ ಕೇವಲ ಕೇರಳದ ಮಹಿಳೆಯರು ಮಾತ್ರವಲ್ಲ, ಇತರೇ ಸಮುದಾಯದ ಮಹಿಳೆಯರು ಹಾಗೂ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರು ಕೂಡ ಈ ಸೀರೆಗಳನ್ನು ಆಯ್ಕೆ ಮಾಡುತ್ತಿರುವುದರಿಂದ ಆ ಶೈಲಿಯ ಸೀರೆಗಳಿಗೆ ಬೇಡಿಕೆ ಮೊದಲಿಗಿಂತ ಹೆಚ್ಚಾಗಿದೆ ಎನ್ನುತ್ತಾರೆ ಮಾರಾಟಗಾರರು.

ಕೇರಳದ ಸೀರೆಗಳಿಗೆ ಡಿಮ್ಯಾಂಡ್
ಕೇರಳದ ಈ ಹಬ್ಬಗಳಲ್ಲಿ ಶ್ವೇತವರ್ಣದ ಸೀರೆಗೆ ಹೆಚ್ಚು ಮಹತ್ವ. ಅಲ್ಲಿನ ಸಾಂಪ್ರದಾಯಿಕ ಸೀರೆಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅವುಗಳಲ್ಲಿ ಬಿಳಿ ಬಣ್ಣದ ಸೀರೆಗಳು ಗೋಲ್ಡನ್ ಕಲರ್ ಝರಿಗಳಲ್ಲಿ ಮಿನುಗುತ್ತಿವೆ.
ಅವುಗಳಲ್ಲಿ ಕಲರ್ ಝರಿ ಪ್ರಿಂಟ್ ಸೀರೆ, ಕಸವು ಸೀರೆ ವಿತ್ ವೆನ್ನಕೃಷ್ಣನ್ ಎಂಬ್ರಾಯ್ಡರಿ, ಕೇರಳ ಸಿಂಪಲ್ ಝರಿ ಕಸವು, ಪಿಕಾಕ್ ಎಂಬ್ರಾಯ್ಡರಿ ಕಸವು, ಫ್ಯಾಬ್ರಿಕ್ ಪ್ರಿಂಟ್ ಡಿಸೈನ್ ಕಸವು, ಸಿಲ್ವರ್ ಎಂಬ್ರೋಸ್, ಕಸವು ಫುಲ್ ಟಿಶ್ಯೂ ಎಂಬೋಸಿಂಗ್, ವಲ್ಲಿಪ್ರಿಂಟ್, ಎಂಬ್ರಾಯಿಡರಿ ಫ್ಲೀಟ್ ಸೀರೆ, ಫ್ಲವರ್ ಪ್ರಿಂಟ್, ರಾಧಾ ಕೃಷ್ಣ ಪ್ರಿಂಟ್, ಸಿಲ್ವರ್ ಕಸವು ಡಿಸೈನರ್ ಸೀರೆಗಳು ಸೇರಿದಂತೆ ನಾನಾ ಬಗೆಯವು ಬೇಡಿಕೆ ಸೃಷ್ಟಿಸಿಕೊಂಡಿವೆ.

ಟ್ರೆಡಿಷನಲ್ ಲುಕ್ ಸೀರೆಯಿದು
ಕೇರಳದ ಟ್ರೆಡಿಷನಲ್ ಸೀರೆಗಳಲ್ಲಿಒಂದು ಮುಂಡುಂ ನೆರಿಯುಟ್ಟುಮ್. ಈ ಶೈಲಿಯ ಸೀರೆಗೂ ಕೂಡ ಇದೀಗ ಆನ್ಲೈನ್ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆಯಂತೆ. ಇದನ್ನು ಹೇಳುವ ಡಿಸೈನರ್ ರಿಚಾ ಪ್ರಕಾರ, ಈ ಟು ಪೀಸ್ ಸೀರೆ ಉಡುವ ರೀತಿ ಕೊಂಚ ವಿಭಿನ್ನವಾಗಿದೆ. ಇದೀಗ ರೆಡಿಮೇಡ್ನಲ್ಲೂ ಇವು ದೊರೆಯುತ್ತಿವೆ ಎನ್ನುತ್ತಾರೆ.

ಕಾಟನ್ ಶ್ವೇತ ವರ್ಣದ ಝರಿ ಬಾರ್ಡರ್ ಸೀರೆ
ಇನ್ನು, ತೀರಾ ಟ್ರೆಡಿಷನಲ್ ಸೀರೆಗಳಲ್ಲಿ ಕಾಣಿಸಿಕೊಳ್ಳಲು ಇಷ್ಟವಿಲ್ಲ, ಟ್ರೆಂಡಿಯಾಗಿಯೂ ಇರಬೇಕು ಹಾಗೂ ಪದೇ ಪದೇ ಉಡುವಂತಿರಬೇಕು ಎನ್ನುವವರು ಇದೀಗ ಕಾಟನ್ ಹಾಗೂ ಸಿಲ್ಕ್ ಮಿಕ್ಸ್ ಕಾಟನ್ನ ಝರಿ ಬಾರ್ಡರ್ನ ಸೀರೆಗಳನ್ನು ಖರೀದಿಸತೊಡಗುತ್ತಿದ್ದಾರೆ. ಇವುಗಳಲ್ಲಿ ಓಣಂ ಲುಕ್ ನೀಡುವ ಸೀರೆಗಳು ಹೆಚ್ಚು ಟ್ರೆಂಡಿಯಾಗಿವೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ರಿಚಾ.