Nail Art Awareness 2025: ಅಕ್ರಾಲಿಕ್ ನೇಲ್ ಆರ್ಟ್ ಪ್ರಿಯರೇ ಜಾಗೃತರಾಗಿ!
Nail Art Awareness 2025: ನೇಲ್ ಆರ್ಟ್ ಪ್ರಿಯರೇ, ಪದೇ ಪದೇ ಅಕ್ರಾಲಿಕ್ ನೇಲ್ ಆರ್ಟ್ ಮಾಡಿಸುವುದನ್ನು ಆದಷ್ಟೂ ಕಡಿಮೆ ಮಾಡಿ. ಜಾಗೃತರಾಗಿ. ಇಲ್ಲವಾದಲ್ಲಿ, ಮುಂದೊಮ್ಮೆ ಈ ಕ್ರೇಝ್ ಸ್ಕಿನ್ ಕ್ಯಾನ್ಸರ್ಗೆ ದಾರಿ ಮಾಡಕೊಡಬಹುದು ಎನ್ನುತ್ತಿದ್ದಾರೆ ವೈದ್ಯರು. ಈ ಕುರಿತಂತೆ ಅವರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್


ಅಕ್ರಾಲಿಕ್ ನೇಲ್ ಆರ್ಟ್ ಪ್ರಿಯರೇ ಜಾಗೃತಗೊಳ್ಳಿ! ಹಾಗೆನ್ನುತ್ತಿದ್ದಾರೆ ವೈದ್ಯರು. ಹೌದು, ಇದಕ್ಕೆ ಪೂರಕ ಎಂಬಂತೆ, ಇತ್ತೀಚಿನ ವಿದೇಶಿ ವರದಿಯೊಂದು ಈ ರೀತಿ ವರದಿ ಮಾಡಿದೆ. ಪದೇ ಪದೇ ಉಗುರುಗಳಿಗೆ ಅಕ್ರಾಲಿಕ್ ನೇಲ್ ಆರ್ಟ್ ಮಾಡಿಸುವವರಿಗೆ ಸ್ಕಿನ್ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು ಎಂದಿದೆ. ಈ ವರದಿ ಬ್ಯೂಟಿ ಪ್ರಿಯ ನೇಲ್ ಆರ್ಟ್ ಪ್ರಿಯರನ್ನು ಬೆಚ್ಚಿ ಬಿಳಿಸಿದೆ.

ವರದಿಯಲ್ಲಿ ಏನಿದೆ?
ವರದಿಯನ್ನು ಸಿಂಪಲ್ ಆಗಿ ವಿವರಿಸುವುದಾದಲ್ಲಿ, ಒಂದು ದಿನವೂ ಅಂದರೇ ಕೊಂಚವೂ ಗ್ಯಾಪ್ ಕೊಡದೇ ಸದಾ ಉಗುರುಗಳ ಮೇಲೆ ಅಕ್ರಾಲಿಕ್ ನೇಲ್ ಆರ್ಟ್ ಮಾಡಿಸುವವರಿಗೆ ಮಾತ್ರ ಸ್ಕಿನ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಂತೆ.

ಇದಕ್ಕೆ ನಿಖರ ಕಾರಣವೇನು?
ನೈಜ ಉಗುರಿನ ಮೇಲೆ ಒಂದು ಸ್ವಲ್ಪ ದಿನವೂ ಗ್ಯಾಪ್ ಕೊಡದೇ, ಅಕ್ರಾಲಿಕ್ ನೇಲ್ ಉಗುರುಗಳನ್ನು ಕೆಮಿಕಲ್ ಬಳಸಿ ಅಂಟಿಸುವುದು, ಎಂತಹವರ ಉಗುರನ್ನು ಕೂಡ ನಿಸ್ತೇಜ ಮಾಡಬಹುದು. ಇನ್ನು, ಎಲ್ಲದಕ್ಕಿಂತ ಹೆಚ್ಚಾಗಿ, ಈ ಉಗುರುಗಳಿಗೆ ನೇಲ್ ಆರ್ಟ್ ಮಾಡಿ, ಅಂಟಿಸಿದಾಗ ಬಿದ್ದು ಹೋಗದಿರುವಂತೆ ಪರ್ಮನೆಂಟ್ ಆಗಿ ಸ್ಟಿಕ್ ಮಾಡುವುದಕ್ಕೊಸ್ಕರ, ಬೆರಳುಗಳನ್ನು ಬಾಕ್ಸ್ನಂತಹ ಮೆಷಿನೊಳಗೆ ಇರಿಸಿ, ಉಗುರುಗಳಿಗೆ ಯುವಿಎ ಲೈಟ್ ಕಿರಣಗಳನ್ನು ಹಾಯಿಸುವುದಿದೇಯಲ್ಲ! ಅದು ತುಂಬಾ ಅಪಾಯಕಾರಿ ಎಂಬುದು ಸಾಬೀತಾಗಿದೆ ಎನ್ನುತ್ತಾರೆ ವೈದ್ಯರು.

ನೇಲ್ ಆರ್ಟ್ ಕ್ರೇಝ್ ಹೆಚ್ಚಾದಲ್ಲಿ ಅಪಾಯ ಖಂಡಿತಾ
ಈ ನೇಲ್ ಆರ್ಟ್ ರುಟಿನ್ಗೆ ಪದೇ ಪದೇ ಒಳಗಾದಾಗ ಯುವಿಎ ಕಿರಣಗಳು ಹಾಯ್ದಾಗ ಚರ್ಮದಲ್ಲಿನ ಡಿಎನ್ಎ ಸ್ಕಿನ್ ಜೀವಕೋಶಗಳು ಡ್ಯಾಮೇಜ್ ಆಗಬಹುದು. ಪರಿಣಾಮ, ಮುಂದೊಮ್ಮೆ ಇದು ಸ್ಕಿನ್ ಕ್ಯಾನ್ಸರ್ಗೆ ನಾಂದಿಯಾಡಬಹುದು ಎನ್ನುತ್ತಾರೆ ಚರ್ಮ ವೈದ್ಯರು.

ಪರ್ಯಾಯವಾಗಿ ನೇಲ್ ಆರ್ಟ್ ಪ್ರಿಯರು ಮಾಡಬೇಕಾದ್ದೇನು?
- ಆದಷ್ಟೂ ನೈಜ ಉಗುರುಗಳನ್ನು ಕಾಯ್ಡುಕೊಳ್ಳಿ.
- ನೇಲ್ ಪಾಲಿಶ್ ಬಳಸಿ, ನೇಲ್ ಆರ್ಟ್ ಮಾಡಿಸಿ.
- ಅಗತ್ಯವಿದ್ದಾಗ ಮಾತ್ರ ಪ್ರೊಫೆಷನಲ್ ನೇಲ್ಆರ್ಟ್ ಮಾಡಿಸಿ.
- ಕಳಪೆ ಗುಣಮಟ್ಟದ ನೇಲ್ ಸ್ಟಿಕ್ಕರ್ಸ್ ಬಳಸಬೇಡಿ.
- ಪದೇ ಪದೇ ನೇಲ್ ಆರ್ಟ್ ಮಾಡಿಸುವುದನ್ನು ಅವಾಯ್ಡ್ ಮಾಡಿ.