ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hair Spa 2026: ಹೇರ್ ಸ್ಪಾ ಬಗ್ಗೆ ನಿಮಗೆ ತಿಳಿದಿರಬೇಕಾದ ಸಂಗತಿಗಳು

ಸಲೂನ್ ಹಾಗೂ ಬ್ಯೂಟಿ ಪಾರ್ಲರ್‌ಗಳಲ್ಲಿನ ಹೇರ್ ಸ್ಪಾ ಆರೈಕೆ ಏನೆಲ್ಲಾ ಒಳಗೊಂಡಿರುತ್ತದೆ? ಹೇರ್ ಸ್ಪಾ ಮಾಡಿಸಿದಾಕ್ಷಣ ನಿಮ್ಮ ಕೂದಲ ಸೌಂದರ್ಯ ಹೆಚ್ಚುವುದೇಕೆ? ನಿಸ್ತೇಜವಾಗಿದ್ದ ಕೂದಲು ಕೂಡ ಫಳಫಳ ಹೊಳೆಯುವುದೇಕೆ? ಇದಕ್ಕೆ ಕಾರಣ, ಹೇರ್ ಸ್ಪಾದಲ್ಲಿ ಕೈಗೊಳ್ಳುವ ಕ್ರಮಗಳು ಎನ್ನುತ್ತಾರೆ ಹೇರ್ ಸ್ಪೆಷಲಿಸ್ಟ್‌ಗಳು. ಈ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್
1/5

ಹೇರ್ ಸ್ಪಾ ಮಾಡಿಸಿದಾಕ್ಷಣ ನಿಮ್ಮ ಕೂದಲ ಸೌಂದರ್ಯ ಹೆಚ್ಚುವುದೇಕೆ? ನಿಸ್ತೇಜವಾಗಿದ್ದ ಕೂದಲು ಕೂಡ ಫಳಫಳ ಹೊಳೆಯುವುದೇಕೆ? ಇದಕ್ಕೆ ಕಾರಣ, ಹೇರ್ ಸ್ಪಾದಲ್ಲಿ ಕೈಗೊಳ್ಳುವ ಕ್ರಮಗಳು ಎನ್ನುತ್ತಾರೆ ಹೇರ್ ಸ್ಪೆಷಲಿಸ್ಟ್‌ಗಳು. ಸಲೂನ್ ಹಾಗೂ ಬ್ಯೂಟಿ ಪಾರ್ಲರ್‌ಗಳಲ್ಲಿ ಮಾಡುವ ಹೇರ್‌ ಸ್ಪಾ ಟ್ರೀಟ್‌ಮೆಂಟ್ ಏನೆಲ್ಲಾ ಒಳಗೊಂಡಿರುತ್ತದೆ! ಎಂಬುದರ ಬಗ್ಗೆ ಇಲ್ಲಿ ತಿಳಿಸಿದ್ದಾರೆ.

2/5

ಮೊದಲಿಗೆ ಕೂದಲಿನ ವಾಷಿಂಗ್

ಮೊದಲಿಗೆ ಕೂದಲಿನ ಬುಡದಲ್ಲಿ ಅಡಗಿರುವ ಕೊಳೆಯನ್ನು ಶ್ಯಾಂಪೂವಿನಿಂದ ತೊಳೆದು ತೆಗೆಯಲಾಗುತ್ತದೆ. ನಂತರ ಕೂದಲಿಗೆ ಕಂಡೀಷನಿಂಗ್ ಹಚ್ಚಿ, ಒಂದೈದು ನಿಮಿಷದ ನಂತರ ವಾಶ್‌ ಮಾಡಲಾಗುತ್ತದೆ.

ಹೇರ್ ಮಾಸ್ಕ್ ಆರೈಕೆ

ಆಯಾ ಕೂದಲಿನ ಸಮಸ್ಯೆ ತಿಳಿದುಕೊಂಡು ಅದಕ್ಕೆ ಹೊಂದುವಂತಹ ಹೇರ್‌ ಮಾಸ್ಕನ್ನು ತಲೆಕೂದಲಿಗೆ ಹಚ್ಚಲಾಗುತ್ತದೆ. ನಿಗದಿತ ಸಮಯಕ್ಕೆ ಬೆಚ್ಚಗಿನ ನೀರಿನಲ್ಲಿ ವಾಶ್ ಮಾಡಲಾಗುತ್ತದೆ. ಇದು ಕೂದಲಿನ ಬಿರುಕು, ಕೂದಲು ಉದುರುವಿಕೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ.

3/5

ಹೇರ್ ಮಸಾಜ್ ಪ್ರಯೋಜನ

ತಲೆಬುರುಡೆಗೆ ತಾಗುವಂತೆ ಕೊಬ್ಬರಿ ಎಣ್ಣೆ ಅಥವಾ ಯಾವುದೇ ಕಸ್ಟಮೈಸ್ಡ್‌ ತೈಲವನ್ನು ಹಚ್ಚಿ ಒಂದಿಪ್ಪತ್ತು ನಿಮಿಷ ತಲೆಯನ್ನು ಮಸಾಜ್‌ ಮಾಡಲಾಗುತ್ತದೆ. ಇದು ರಕ್ತ ಸಂಚಾರಕ್ಕೆ ಎಡೆಮಾಡಿಕೊಡುತ್ತದೆ. ಅಲ್ಲದೇ, ಇದು ಕೂದಲ ಬೆಳವಣಿಗೆಗೂ ಸಹಕಾರಿ.

4/5

ಸ್ಟೀಮಿಂಗ್‌ನಿಂದ ಕ್ಲೆನ್ಸಿಂಗ್

ಆಯಾ ವ್ಯಕ್ತಿಯ ಕೂದಲಿನ ಆರೋಗ್ಯದ ಆಧಾರದ ಮೇಲೆ ಬಿಸಿ ನೀರಿನ ಆವಿಯನ್ನು ಕೂದಲಿಗೆ ನೀಡಲಾಗುತ್ತದೆ. ಇದರಿಂದ ನಿಸ್ತೇಜವಾದ ಕೂದಲು ರಿಫ್ರೆಶ್ ಆಗುತ್ತದೆ. ಕೂದಲಿಗೆ ಕ್ಲೆನ್ಸಿಂಗ್ ಮಾಡಿದಂತಾಗುತ್ತದೆ.

ಕೊನೆಯಲ್ಲಿ ರಿನ್ಸಿಂಗ್

ಇನ್ನು ಕೊನೆಯಲ್ಲಿ ಕೂದಲನ್ನು ರಿನ್ಸ್ ಮಾಡಿ, ಕಂಪ್ಲೀಟ್ ಮತ್ತೊಮ್ಮೆ ವಾಶ್ ಮಾಡಲಾಗುತ್ತದೆ. ನಂತರ ಬಟ್ಟೆಯಲ್ಲಿ ಒರೆಸಿ, ಒಣಗಿಸಿ, ಹೇರ್ ಕಟ್ ಮಾಡಲಾಗುತ್ತದೆ. ಈ ಮೇಲಿನ ವಿಧಾನಗಳು ಬಹುತೇಕ ಹೇರ್‌ ಸ್ಪಾಗಳಲ್ಲಿ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್‌ಗಳು.

5/5

ಹೇರ್ ಸ್ಪಾ ಪ್ರಯೋಜನಗಳು

  • ಕೂದಲಿನ ಉದುರುವಿಕೆ ನಿಲ್ಲುತ್ತದೆ.
  • ಹೇರ್‌ ಸ್ಪಾ ಎಫೆಕ್ಟ್ 15-20 ದಿನಗಳವರೆಗೂ ಇರುತ್ತದೆ.
  • ಪದೇ ಪದೇ ಸ್ಟೀಮಿಂಗ್ ಮಾಡಿಸಬಾರದು.
  • ಕೂದಲಿನ ಟೆಕ್ಸ್‌ಚರ್‌ಗೆ ತಕ್ಕಂತೆ ಆರೈಕೆಗೆ ಒಳಗಾಗಬೇಕು.
  • ತಿಂಗಳಿಗೊಮ್ಮೆ ಹೇರ್ ಸ್ಪಾ ಸಾಕು. ಹೆಚ್ಚಾಗಿ ಬೇಡ.

ಶೀಲಾ ಸಿ ಶೆಟ್ಟಿ

View all posts by this author