Hairstyle Trend: ಮನಮೋಹಕ ಕೂದಲ ವಿನ್ಯಾಸಕ್ಕೆ ಬಿಗ್ ರಿಂಗ್ಲೆಟ್ಸ್ ಸಾಥ್
Big Ringlets Curl Hairstyle: ನ್ಯಾಚುರಲ್ ಲುಕ್ ನೀಡುವ ಸಾಫ್ಟ್ ಬಿಗ್ ರಿಂಗ್ಲೆಟ್ಸ್ ಕರ್ಲ್ ಹೇರ್ ಸ್ಟೈಲ್ ಇತ್ತೀಚೆಗೆ ಮಾನಿನಿಯರಿಗೆ ಪ್ರಿಯವಾಗತೊಡಗಿದೆ. ಅತ್ಯಾಕರ್ಷಕ ಲುಕ್ ನೀಡುವ ಈ ಹೇರ್‌ಸ್ಟೈಲ್ ಸ್ಪೆಷಾಲಿಟಿ ಏನು? ಇಲ್ಲಿದೆ ಡಿಟೇಲ್ಸ್.
ಇದೀಗ ಬಿಗ್ ರಿಂಗ್ಲೆಟ್ಸ್ ಹೇರ್‌ಸ್ಟೈಲ್ ಕಾಲ! ಹೌದು, ಈ ಮೊದಲು ಕರ್ಲ್ ಮಾಡಿಕೊಳ್ಳುವ ಸ್ಟೈಲ್‌ನಲ್ಲಿ ಹೆಚ್ಚಾಗಿ ಕ್ರೌಡಿ ಕರ್ಲ್, ಟೈಟ್ ರಿಂಗಲ್ಸ್, ಲೂಸ್ ಕರ್ಲ್ಸ್, ಸ್ಟೆಪ್ ಬೈ ಸ್ಟೆಪ್ ಕರ್ಲ್ಸ್ ಹೆಚ್ಚು ಟ್ರೆಂಡಿಯಾಗಿದ್ದವು. ಇದೀಗ ಹೆಚ್ಚು ಕರ್ಲ್ ಆಗಿರದೇ ನ್ಯಾಚುರಲ್ ಲುಕ್ ನೀಡುವ ಸಾಫ್ಟ್ ಬಿಗ್ ರಿಂಗ್ಲೆಟ್ಸ್ ಕರ್ಲ್ ಹೇರ್ ಸ್ಟೈಲ್ ಫ್ಯಾಷನ್‌ನಲ್ಲಿ ಕಾಣಿಸಿಕೊಳ್ಳತೊಡಗಿದೆ.
ಏನಿದು ಬಿಗ್ ರಿಂಗ್ಲೆಟ್ಸ್!
ಸಿಂಪಲ್ ಆಗಿ ಹೇಳುವುದಾದಲ್ಲಿ, ಇತ್ತ ಸ್ಪ್ರೇಟ್ ಆಗಿಯೂ ಕಾಣಿಸದು. ಅತ್ತ ಸಂಪೂರ್ಣ ಗುಂಗುರಾಗಿಯೂ ಕಾಣದು. ಮೇಲಿನಿಂದ ಕತ್ತಿನ ಕೊಂಚ ಮೇಲ್ಭಾಗದವರೆಗೂ ಸ್ಪ್ರೇಟಾಗಿ ಕಂಡರೂ, ಕೆಳಭಾಗದಲ್ಲಿ ದೂರ ದೂರಕ್ಕೆ ಕರ್ಲಿ ಹೇರ್ ರೀತಿಯಲ್ಲಿ ಕಾಣಿಸುತ್ತದೆ. ಒಂದೊಂದು ಸ್ಟೆಪ್‌ಗೂ ಸುರಳಿ ಸುತ್ತಿಕೊಂಡಂತೆ ಕಾಣುತ್ತದೆ.ಇದನ್ನೇ ಬಿಗ್ ರಿಂಗ್ಲೇಟ್ಸ್ ಸ್ಟೈಲ್ ಎನ್ನಬಹುದು ಎಂದು ವಿವರಿಸುತ್ತಾರೆ ಹೇರ್‌ಸ್ಟೈಲಿಸ್ಟ್ ರಾಘವ್.
ಮನೆಯಲ್ಲೆ ಈ ಹೇರ್‌ಸ್ಟೈಲ್ ಟ್ರೈ ಮಾಡಿ
ಕೂದಲಿಗೆ ಬಿಗ್ ರಿಂಗ್ಲೆಟ್ಸನ್ನು ನೀವು ಮನೆಯಲ್ಲೆ ಮಾಡಿಕೊಳ್ಳಬಹುದು. ಆದರೆ, ಇದಕ್ಕಾಗಿ ನಿಮ್ಮ ಕೂದಲು ಉದ್ದವಾಗಿರಬೇಕಾದ್ದು ಅಗತ್ಯ. ಇಲ್ಲವಾದಲ್ಲಿ ಇದು ಸಾಧ್ಯವಾಗದ ಮಾತು. ಮುಖ ಅಗಲವಾಗಿದ್ದಲ್ಲಿ, ಲಾಂಗ್ ಹೇರ್‌ಕಟ್ ಇದ್ದಲ್ಲಿ ನೋಡಲು ಸೂಪರ್ಬ್ ಲುಕ್ ನೀಡುತ್ತದೆ ಎನ್ನುವ ಹೇರ್‌ಸ್ಟೈಲಿಸ್ಟ್ ಜಿಯಾ ಪ್ರಕಾರ, ಈ ಕುರಿತಂತೆ ಟ್ರೈನಿಂಗ್ ನೀಡುವ ನಾನಾ ವಿಡಿಯೋ ಕ್ಲಿಪ್‌ಗಳು ಯುಟ್ಯೂಬ್‌ನಲ್ಲಿ ಲಭ್ಯ ಎನ್ನುತ್ತಾರೆ.
ರಿಂಗ್ಲೆಟ್ಸ್ ಕ್ಲಿಪ್ಸ್ ಬಳಸಿ ಹೇರ್‌ಸ್ಟೈಲ್ ಮಾಡಿ
ಕನಿಷ್ಠ ನೂರಿನ್ನೂರು ರೂಪಾಯಿಗಳಿಗೆ ದೊರಕುವ ರಿಂಗ್ಲೆಟ್ಸ್ ಮಾಡುವಂತಹ ಪ್ಲಾಸ್ಟಿಕ್ ಅಥವಾ ಫೈಬರ್ ಮೆಟಿರಿಯಲ್‌ನ ಕ್ಲಿಪ್‌ಗೆ ನಿಮ್ಮ ಕೂದಲ ಅಂಚನ್ನು ಸುರಳಿಯಂತೆ ಸುತ್ತಿ. ನಂತರ ಒಂದಿಷ್ಟು ಗಂಟೆಗಳ ಕಾಲ ಹಾಗೆಯೇ ಬಿಟ್ಟರಾಯಿತು. ರಾತ್ರಿ ವೇಳೆ ಕೂದಲಿಗೆ ಹಾಕಿ ಮಲಗಿದರೇ ಬೆಸ್ಟ್, ಬೆಳಗ್ಗೆ ಹೊತ್ತಿಗೆ ಕೂದಲು ಸುರಳಿಯ ರೂಪ ಪಡೆದಿರುತ್ತವೆ.
ಶಾರ್ಟ್ ಹೇರ್‌ಕಟ್‌ಗೆ ಬಾರ್ಬಿ ಲುಕ್
ಇನ್ನು, ಚಿಕ್ಕ ಲೆಂತ್ ಇರುವ ಕೂದಲಿನವರಿಗೆ ಸ್ಟೆಪ್‌ವೈಸ್ ರಿಂಗ್ಲೆಟ್ಸ್ ಮಾಡಲು ಸಾಧ್ಯವಾಗುವುದಿಲ್ಲ. ಈ ಹೇರ್‌ಕಟ್‌ಗೆ ಒಂದೇ ಲೇಯರ್‌ನಲ್ಲಿ ನಾಲ್ಕೈದು ರಿಂಗ್ಲೆಟ್ಸ್ ಮಾಡುವ ಕ್ಲಿಪ್ ಹಾಕಿದರೇ, ಕೆಳಗಿನ ಕೂದಲ ಅಂಚು ಮೇಲ್ಭಾಗಕ್ಕೆ ಸುರಳಿಯಂತೆ ಸುತ್ತಿಹಾಕಿಕೊಳ್ಳುತ್ತದೆ. ಇದು ನೋಡಲು ಥೇಟ್ ಬಾರ್ಬಿ ಹೇರ್‌ಸ್ಟೈಲ್‌ನಂತೆ ಕಾಣಿಸುತ್ತದೆ. ಉದ್ದ ಹಾಗೂ ಅಗಲ ಮುಖವಿರುವವರಿಗೆ ಬಿಗ್ ರಿಂಗ್ಲೆಟ್ಸ್ ಹೇರ್‌ಸ್ಟೈಲ್ ಬೆಸ್ಟ್. ಏಕೆಂದರೇ, ಮುಖದ ಬಹುತೇಕ ಭಾಗವನ್ನು ಇವು ಆವರಿಸುತ್ತವೆ. ಇನ್ನು ಚಿಕ್ಕ ಮುಖದವರಿಗೆ ಈ ಹೇರ್‌ಸ್ಟೈಲ್ ಬೇಡ. ತೀರಾ ದಪ್ಪಗಿರುವವರಿಗೂ ಒಪ್ಪದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಬಾಬೂ.
ಅವರ ಪ್ರಕಾರ, ಇದಕ್ಕಾಗಿ ನೀವು ಹಾಟ್ ರೋಲರ್ಸ್ ಬಳಸಬಹುದು. ದೊಡ್ಡ ದೊಡ್ಡ ಸುರಳಿಯಂತೆ ಬೇಕಾದಲ್ಲಿ ಸ್ಟೈಲಿಂಗ್ ಜೆಲ್ ಬಳಸಬಹುದು. ಬಿಗ್ ರಿಂಗ್ಲೆಟ್ಸ್‌ಗೆ ಕರ್ಲಿಂಗ್ ಐರನ್ ಮಾಡಿಸಬಹುದು.
ರಿಂಗ್ಲೆಟ್ಸ್ ಸ್ಟೈಲ್ ಪ್ರಿಯರು
ಬಾಲಿವುಡ್ ತಾರೆಯರಾದ ಕಾಜೋಲ್, ಮಾಧುರಿ, ದಿಶಾ ಪಟಾನಿ, ಸೋನಾಕ್ಷಿ ಸಿನ್ಹಾ, ತಾಪ್ಸಿ ಸೇರಿದಂತೆ ಹಲವರು ಬಿಗ್ ರಿಂಗ್ಲೆಟ್ಸ್ ಪ್ರಿಯರು.
ಬಿಗ್ ರಿಂಗ್ಲೆಟ್ಸ್ ಪ್ರಿಯರಿಗೆ ಒಂದಿಷ್ಟು ಸಲಹೆಗಳು
- ತಲೆ ಸ್ನಾನ ಮಾಡಿದ ನಂತರ ಕೂದಲು ಸ್ಪ್ರೇಟ್ ಆಗುವುದು.
- ಜಿಡ್ಡಿನಾಂಶ ಇರುವ ಕೂದಲಿಗೆ ಬಿಗ್ ರಿಂಗ್ಲೆಟ್ಸ್ ಬೇಡ.
- ಈ ಹೇರ್‌ಸ್ಟೈಲ್‌ಗೆ ಸೈಡ್ ಕ್ಲಿಪ್ಸ್ ಫಂಕಿ ಲುಕ್ ನೀಡುತ್ತದೆ.
- ಕೂದಲು ದಪ್ಪವಾಗಿದ್ದಲ್ಲಿ ಈ ಸ್ಟೈಲ್ ಆದಷ್ಟೂ ಅವಾಯ್ಡ್ ಮಾಡಿ.