ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Halloween Fashion 2026: ಹಾಲೋವೀನ್ ಸ್ಪೂಕಿ ಲುಕ್‌ಗೆ ಇಲ್ಲಿದೆ 5 ಸಿಂಪಲ್ ಟಿಪ್ಸ್

Halloween Fashion: ಹ್ಯಾಲೋವೀನ್ ಪಾರ್ಟಿಗಳಲ್ಲಿ ಸ್ಪೂಕಿ ಸ್ಟೈಲಿಂಗ್ ಮಾಡಲು ಏನೆಲ್ಲಾ ಮಾಡಬಹುದು ಹಾಗೂ ಇದಕ್ಕಾಗಿ ಹೇಗೆಲ್ಲಾ ಡ್ರೆಸ್ಸಿಂಗ್ ಮಾಡಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಿಂಪಲ್‌ ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್
1/5

ಹ್ಯಾಲೋವೀನ್ ಪಾರ್ಟಿಗಳಲ್ಲಿ ಹೇಗೆಲ್ಲಾ ಸ್ಟೈಲಿಂಗ್ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

2/5

ಹಾಲೋವಿನ್ ಭೂತದ ಲುಕ್

ಕಾಂಪ್ಲೀಕೇಟೆಡ್ ಡ್ರೆಸ್ಸಿಂಗ್ ಬದಲು ಹೆಚ್ಚು ತಲೆ ಬಿಸಿಯಿಲ್ಲದೇ ಮಾಡಬಹುದಾದ ಉಡುಗೆಗಳನ್ನು ಧರಿಸಿ. ಉದಾಹರಣೆಗೆ, ಬಿಳಿ ವರ್ಣದ ಹೊದಿಕೆಯನ್ನು ಮುಡಿಯಿಂದ ಪಾದದವರೆಗೂ ಹಾಕಿಕೊಳ್ಳಿ. ಕಣ್ಣಿನ ಜಾಗದಲ್ಲಿ ಮಾತ್ರ ತೂತು ಮಾಡಿ. ಹೆಚ್ಚು ಖರ್ಚಿಲ್ಲದೇ ಬಿಳಿ ಭೂತದ ಕಾಸ್ಟ್ಯೂಮ್ ರೆಡಿಯಾಗುವುದು.

3/5

ಭಯಾನಕ ಮೇಕಪ್

ಭಯಾನಕ ಮೇಕಪ್‌ನಿಂದಲೂ ಸ್ಪೂಕಿ ಲುಕ್ ಮಾಡಬಹುದು. ಇದು ನೋಡಲು ಎಂತಹವರನ್ನು ಭಯಬೀಳುವಂತೆ ಮಾಡುತ್ತದೆ. ಯುಟ್ಯೂಬ್‌ನಲ್ಲಿ ಈ ಕುರಿತ ಐಡಿಯಾಗಳು ಸಿಗುತ್ತವೆ.

ವಿಚಿತ್ರ ವಿಗ್‌ಗಳಿಂದಲೂ ಸ್ಪೂಕಿ ಲುಕ್

ನಿಮ್ಮ ಚಿತ್ರ-ವಿಚಿತ್ರ ಹೇರ್‌ಸ್ಟೈಲ್ ಕೂಡ ಭಯಾನಕವಾಗಿ ಕಾಣುವಂತೆ ಮಾಡುತ್ತವೆ. ಕೂದಲನ್ನು ಪ್ರಯೋಗ ಮಾಡಲು ಇಚ್ಛಿಸದವರು, ಕೃತಕ ವಿಗ್ ಧರಿಸಬಹುದು.

4/5

ಹಳೆಯ ಕಾಸ್ಟ್ಯೂಮ್ ಅದಲು-ಬದಲು ಮಾಡಿ

ಹಳೆಯ ಕಾಸ್ಟ್ಯೂಮನ್ನು ಸ್ನೇಹಿತರೊಂದಿಗೆ ಅದಲು ಬದಲು ಮಾಡಿ ಧರಿಸಿ. ಪದೇ ಪದೇ ಹೊಸದನ್ನು ಕೊಳ್ಳುವ ಬದಲು ರಿಕ್ರಿಯೇಟ್ ಮಾಡಿ.

5/5

ಸ್ಪೂಕಿ ಪಾರ್ಟಿ ಥೀಮ್ ಡ್ರೆಸ್‌ಕೋಡ್

ಕೆಲವು ಸ್ಪೂಕಿ ಪಾರ್ಟಿ ಥೀಮ್ ಹಾಗೂ ಕಾನ್ಸೆಪ್ಟ್ ಆಧಾರದ ಮೇಲೆ ನಡೆಯುತ್ತವೆ. ಅದಕ್ಕೆ ತಕ್ಕಂತೆ ಹಾರರ್ ಲುಕ್‌ನಲ್ಲಿ ಕಾಣಿಸಿಕೊಳ್ಳಬಹುದು. ಇಂತಹ ಉಡುಪುಗಳು ಬಾಡಿಗೆಗೆ ಕೂಡ ದೊರಕುತ್ತವೆ.

ಶೀಲಾ ಸಿ ಶೆಟ್ಟಿ

View all posts by this author