ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Handsfree Saree 2026: ಗಮನ ಸೆಳೆದ ರಸಿಕಾ ಹ್ಯಾಂಡ್ಸ್ ಫ್ರೀ ಸೀರೆ; ಇದ್ಯಾವ ಬಗೆಯ ಸ್ಯಾರಿ?

Handsfree Saree: ಹ್ಯಾಂಡ್ಸ್ ಫ್ರೀ ಸೀರೆಗಳು ಈಗಾಗಲೇ ಸೀರೆಲೋಕದಲ್ಲಿ ಬಿಡುಗಡೆಗೊಂಡು ಬಹಳಷ್ಟು ಕಾಲ ಸರಿದಿದ್ದರೂ ಇವು ಅಷ್ಟಾಗಿ ಪ್ರಚಲಿತಕ್ಕೆ ಬಂದಿಲ್ಲ! ಇದಕ್ಕೆ ಕಾರಣವೇನು? ಇದ್ಯಾವ ಬಗೆಯ ಸೀರೆ? ಈ ಎಲ್ಲದರ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ರಸಿಕಾ ದುಗಾಲ್‌, ನಟಿ
1/5

ನಿಮಗೆ ಗೊತ್ತೇ! ಹ್ಯಾಂಡ್ಸ್ ಫ್ರೀ ಸೀರೆಗಳು ಸೀರೆ ಲೋಕದಲ್ಲಿ ಬಿಡುಗಡೆಗೊಂಡು ಸಾಕಷ್ಟು ಕಾಲ ಸರಿದಿದ್ದರೂ ಇಂದಿಗೂ ಸಾಕಷ್ಟು ಮಹಿಳೆಯರಿಗೂ ಇವುಗಳ ಅರಿವಿಲ್ಲ ಹಾಗೂ ಆಸಕ್ತಿಯಿಲ್ಲ! ಹಾಗೆನ್ನುತ್ತದೆ ಸೀರೆ ತಯಾರಕರ ಸಂಘದ ಸಮೀಕ್ಷೆಯೊಂದು. ಹೌದು, ಇದುವರೆಗೂ ಆಯ್ದ ಕೆಲವು ಸೆಲೆಬ್ರೆಟಿಗಳು ಹಾಗೂ ಪ್ರಯೋಗಾತ್ಮಕ ಸೀರೆಗಳನ್ನು ಉಟ್ಟು ಸಂಭ್ರಮಿಸುವವರು ಮಾತ್ರ ಈ ಶೈಲಿಯ ಸೀರೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ ಎಂಬುದು ಫ್ಯಾಷನ್‌ ಎಕ್ಸ್‌ಪರ್ಟ್ಸ್ ಅಭಿಪ್ರಾಯ.

2/5

ಗಮನ ಸೆಳೆದ ರಸಿಕಾ ಹ್ಯಾಂಡ್ಸ್ ಫ್ರೀ ಸೀರೆ

ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ಸ್ಟುಡಿಯೋ ಮಿಡಿಯಂ ಬ್ರಾಂಡ್‌ನ ದುಬಾರಿ ಬೆಲೆಯ ಹ್ಯಾಂಡ್ಸ್ ಫ್ರೀ ಸೀರೆಯಲ್ಲಿ ನಟಿ ರಸಿಕಾ ದುಗಲ್‌ ಕಾಣಿಸಿಕೊಂಡಿದ್ದರು. ಈ ಸಮ್ಮರ್‌ ಸೀಸನ್‌ನಲ್ಲಿ ಅವರು ಉಟ್ಟಿದ್ದ ಮೆಟಾಲಿಕ್ ಹಸಿರು ವರ್ಣದ ಈ ಹ್ಯಾಂಡ್ಸ್ ಫ್ರೀ ಸೀರೆ ಸೀರೆ ಪ್ರಿಯರ ಗಮನ ಸೆಳೆಯಿತು. ಪರಿಣಾಮ, ಈ ಸೀಸನ್‌ನಲ್ಲಿ ಈ ಬಗೆಯ ಸೀರೆಗಳು ಟ್ರೆಂಡಿಯಾಗಬಹುದಾದ ಒಂದಿಷ್ಟು ಲಕ್ಷಣಗಳನ್ನು ತೋರ್ಪಡಿಸಿತು ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್‌ಗಳು.

3/5

ಏನಿದು ಹ್ಯಾಂಡ್ಸ್ ಫ್ರೀ ಸೀರೆ?

ಸಿಂಪಲ್‌ ಆಗಿ ಹೇಳುವುದಾದಲ್ಲಿ ಪಲ್ಲುವಿನಲ್ಲಿ ಕೈಗಳನ್ನು ಹಾಕಬಹುದಾದ ವಿನ್ಯಾಸಗೊಳಿಸಿದ ರೆಡಿಮೇಡ್‌ ಅಥವಾ ಪಲ್ಲುವಿನಲ್ಲಿ ದೊಡ್ಡ ರೌಂಡ್‌ ಡಿಸೈನ್‌ನ ಕಟೌಟ್‌ ಹೋಲ್‌ ಇರುವ ಸೀರೆಯಿದು. ಡಿಸೈನರ್‌ಗಳ ಪ್ರಕಾರ, ಇದು ಸೆರಗನ್ನು ಕಂಟ್ರೋಲ್‌ನಲ್ಲಿಡಲು ಸಹಕರಿಸುತ್ತದಂತೆ. ಇದು ಶಿಬೋರಿ ಪ್ರಿಂಟ್ಸ್ ಅಥವಾ ಇನ್ಯಾವುದೇ ಡಿಸೈನ್‌ ಮಾಡಿದ ರೌಂಡ್‌ ಶೇಪ್‌ನ ಕಟೌಟ್‌ ವಿನ್ಯಾಸದ್ದಾಗಬಹುದು ಎಂದು ವಿವರಿಸುತ್ತಾರೆ ಫ್ಯಾಷನಿಸ್ಟಾಗಳು.

4/5

ಹ್ಯಾಂಡ್ಸ್ ಫ್ರೀ ಸೀರೆಗಳ್ಯಾಕೆ ಇನ್ನೂ ಟ್ರೆಂಡಿಯಾಗಲಿಲ್ಲ!

ತಕ್ಷಣಕ್ಕೆ ನೋಡಲು ಕಫ್ತಾನ್‌ನಂತೆ ಕಾಣಿಸುವ ಈ ವಿನ್ಯಾಸದ ಸೀರೆಗಳು ಆರಂಭದಲ್ಲಿ ಮಾನಿನಿಯರನ್ನು ಸೆಳೆದವಾದರೂ ಇವನ್ನು ಸ್ಟೈಲಿಂಗ್‌ ಮಾಡುವ ವಿಧಾನ ಕೊಂಚ ವಿಭಿನ್ನವಾಗಿರುವುದರಿಂದಲೋ ಏನೋ ಮಹಿಳೆಯರು ಅಷ್ಟಾಗಿ ತಮ್ಮ ವಾರ್ಡ್ರೋಬ್‌ಗೆ ಸೇರಿಸಿಕೊಳ್ಳಲಿಲ್ಲ! ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್‌ಗಳು.

5/5

ಆನ್‌ಲೈನ್‌ನಲ್ಲಿ ಲಭ್ಯ

ಸೀರೆ ಅಂಗಡಿಗಳಿಗಿಂತಲೂ ಆನ್‌ಲೈನ್‌ ಶಾಪ್‌ಗಳಲ್ಲಿ ಹ್ಯಾಂಡ್ಸ್ ಫ್ರೀ ಸೀರೆಗಳು ನಾನಾ ವಿನ್ಯಾಸದಲ್ಲಿ ಲಭ್ಯ. ಆಪ್ಷನ್ಸ್ ಹೆಚ್ಚು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಶೀಲಾ ಸಿ ಶೆಟ್ಟಿ

View all posts by this author