ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೋಮ್‌ನಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ ವಿಜಯ್‌ ದೇವರಕೊಂಡ - ರಶ್ಮಿಕಾ ಮಂದಣ್ಣ; ಫೋಟೋ ಹಂಚಿಕೊಂಡು ಸಿಕ್ಕಿಬಿದ್ದ ಜೋಡಿ!

ನಟಿ ರಶ್ಮಿಕಾ ಮಂದಣ್ಣ ಈಚೆಗೆ ರೋಮ್‌ಗೆ ಹೋಗಿದ್ದರು. ಅಲ್ಲಿನ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದೀಗ ಅದೇ ಊರಿಗೆ ಭೇಟಿ ನೀಡಿ, ಅಲ್ಲಿನ ಫೋಟೋಗಳನ್ನು ವಿಜಯ್ ದೇವರಕೊಂಡ ಕೂಡ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಐತಿಹಾಸಿಕ 'ಕೊಲೋಸಿಯಮ್' ಮುಂದೆ ಪೋಸ್ ವಿಜಯ್ ದೇವರಕೊಂಡ, ನೀಡಿದ್ದರೆ, ಮತ್ತೊಂದು ಚಿತ್ರದಲ್ಲಿ ಅವರ ಭುಜದ ಮೇಲೆ ಮಹಿಳೆಯೊಬ್ಬರು ತಲೆ ಇಟ್ಟಿರುವುದು ಕಂಡುಬಂದಿದೆ. ಆ ಚಿತ್ರದಲ್ಲಿ ಮಹಿಳೆಯ ಮುಖ ಕಾಣಿಸುತ್ತಿಲ್ಲವಾದರೂ, ಅವರು ರಶ್ಮಿಕಾ ಮಂದಣ್ಣ ಅವರೇ ಇರಬಹುದು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ. ಈ ಮೂಲಕ ಇಬ್ಬರು ರೋಮ್‌ನಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ ಎಂಬುದಕ್ಕೆ ಸಾಕ್ಷಿ ಪುರಾವೆ ಸಿಕ್ಕಿವೆ.

1/6

ರಶ್ಮಿಕಾ ಮಂದಣ್ಣ ಇತ್ತೀಚೆಗೆ ರೋಮ್‌ನ ಸುಂದರ ತಾಣಗಳ ಫೋಟೋ ಹಂಚಿಕೊಂಡಿದ್ದರು

2/6

ವಿಜಯ್ ದೇವರಕೊಂಡ ಕೂಡ ಅದೇ ಸ್ಥಳದಿಂದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

3/6

ಒಂದು ಫೋಟೋದಲ್ಲಿ ವಿಜಯ್ ಹಿಂದೆ ಮಹಿಳೆಯೊಬ್ಬರ ಮುಖವಿದೆ. ಅದು ರಶ್ಮಿಕಾ ಎಂದೇ ಹೇಳಲಾಗುತ್ತಿದೆ

4/6

"ನನ್ನ ಪ್ರೀತಿಯ ಸ್ನೇಹಿತರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು" ಎಂದ ವಿಜಯ್‌ ದೇವರಕೊಂಡ

5/6

ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ಅವರು ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂಬ ವದಂತಿ ಇದೆ

6/6

ಐತಿಹಾಸಿಕ ಕೊಲೋಸಿಯಮ್ ಮುಂದೆ ಈ ಜೋಡಿ ಒಟ್ಟಿಗೆ ಕಾಲ ಕಳೆದಿರುವ ಪುರಾವೆ ಸಿಕ್ಕಿದೆ