ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Holi Fashion 2026: ಹೋಳಿ ಸೆಲೆಬ್ರೇಷನ್‌ಗೆ ಸಾಥ್‌ ನೀಡಲು ಬಂದ ಔಟ್‌ಫಿಟ್ಸ್

ಹೋಳಿ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಈಗಾಗಲೇ ನಾನಾ ಬಗೆಯ ಔಟ್‌ಫಿಟ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಯಾವ್ಯಾವ ಬಗೆಯವು ಈ ಸೆಲೆಬ್ರೇಷನ್‌ಗೆ ಸಾಥ್‌ ನೀಡಲಿವೆ? ಈ ಬಗ್ಗೆ ಸ್ಟೈಲಿಸ್ಟ್ ರಿಚಾ ವಿವರಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್‌
1/5

ಹೋಳಿ ಹಬ್ಬದ ಸಂಭ್ರಮಕ್ಕೆ ಈಗಾಗಲೇ ನಾನಾ ಬಗೆಯ ಔಟ್‌ಫಿಟ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಯಾವ್ಯಾವ ಬಗೆಯವು ಈ ಸೆಲೆಬ್ರೇಷನ್‌ಗೆ ಸಾಥ್‌ ನೀಡಲಿವೆ? ಯಾವುದಕ್ಕೆ ಬೇಡಿಕೆ ಹೆಚ್ಚಿದೆ? ಈ ಎಲ್ಲದರ ಕುರಿತಂತೆ ಸ್ಟೈಲಿಸ್ಟ್ ರಿಚಾ ಸಂಕ್ಷೀಪ್ತವಾಗಿ ವಿವರಿಸಿದ್ದಾರೆ.

2/5

ಬೇಡಿಕೆ ಹೆಚ್ಚಿಸಿಕೊಂಡ ಶ್ವೇತ ವರ್ಣದ ಔಟ್‌ಫಿಟ್ಸ್

ಹೋಳಿ ಹಬ್ಬದಂದು ರಂಗನ್ನು ಹೈಲೈಟ್‌ ಮಾಡುವಂತಹ ಲೆಕ್ಕವಿಲ್ಲದಷ್ಟು ಬಗೆಯ ಶ್ವೇತ ವರ್ಣದ ಕುರ್ತಾ, ಲೆಹೆಂಗಾ, ಗಾಗ್ರಾ, ಶರಾರ, ಧೋತಿ ಸೆಟ್‌, ಕೋ ಆರ್ಡ್ ಸೆಟ್‌ಗಳು ಈಗಾಗಲೇ ನಾನಾ ವಿನ್ಯಾಸದಲ್ಲಿ ಕಾಲಿಟ್ಟಿವೆ. ಬಣ್ಣ ಎರಚಿದಾಗ ನೋಡಲು ರಂಗುರಂಗಾಗುವಂತಹ ಈ ಲೈಟ್‌ ವರ್ಣದವು ಬೇಡಿಕೆ ಹೆಚ್ಚಿಸಿಕೊಂಡಿವೆ.

3/5

ಇಂಡೋ-ವೆಸ್ಟರ್ನ್‌ ಲುಕ್‌ ನೀಡುವ ಕೋ ಆರ್ಡ್ ಸೆಟ್ಸ್

ಟೀನೇಜ್‌ ಹಾಗೂ ಜೆನ್‌ ಜಿ ಯುವತಿಯರಿಗೆಂದೇ ಇತ್ತ ಟ್ರೆಡಿಷನಲ್‌ ಅಲ್ಲ, ಅತ್ತ ತೀರಾ ಮಾಡರ್ನ್‌ ಅಲ್ಲದ ಇಂಡೋ-ವೆಸ್ಟರ್ನ್‌ ಶೈಲಿಯ ನಾನಾ ವಿನ್ಯಾಸದ ಕೋ ಆರ್ಡ್ ಸೆಟ್‌ಗಳು ಹೋಳಿಯ ಫ್ಯಾಷನ್‌ನಲ್ಲಿ ಬಂದಿವೆ.

4/5

ನಿಯಾನ್‌ ಹಾಗೂ ವೈಬ್ರೆಂಟ್‌ ಮಾನೋಕ್ರೋಮ್‌ ಶೇಡ್‌ನವು ಸ್ಕರ್ಟ್ ಕೋ ಆರ್ಡ್ ಸೆಟ್‌, ಕುರ್ತಾ ಕೋ ಆರ್ಡ್, ಕ್ರಾಪ್‌ ಟಾಪ್‌ ಸ್ಕರ್ಟ್ –ಪ್ಯಾಂಟ್‌ ವಿನ್ಯಾಸದವು ಹೆಚ್ಚು ಮಾರಾಟವಾಗುತ್ತಿವೆ.

5/5

ಇಕೋ ಫ್ರೆಂಡ್ಲಿ ಫ್ಯಾಷನ್‌ವೇರ್ಸ್

ಹೋಳಿಯ ಫೆಸ್ಟಿವ್‌ ಸೀಸನ್‌ನಲ್ಲಿ ಸಾಕಷ್ಟು ಮಂದಿ ರಿಸೈಕಲ್‌ ಮಾಡಿರುವಂತಹ ಫ್ಯಾಷನ್‌ವೇರ್‌ಗಳನ್ನು ಧರಿಸಲು ಇಚ್ಛಿಸುತ್ತಾರೆ. ಇನ್ನು, ಕೆಲವರು ಪರಿಸರ ಸ್ನೇಹಿ ಫ್ಯಾಬ್ರಿಕ್‌ನವನ್ನು ಧರಿಸಲು ಬಯಸುತ್ತಾರೆ. ಅಂತಹವರಿಗೆಂದೇ ಫ್ಯಾಷನ್‌ ಲೋಕದಲ್ಲಿ ಅದರಲ್ಲೂ ಆನ್‌ಲೈನ್‌ ಶಾಪಿಂಗ್‌ ಸೆಂಟರ್‌ಗಳಲ್ಲಿ ಥ್ರಿಫ್ಟ್‌ ಹಾಗೂ ಇಕೋ ಫ್ರೆಂಡ್ಲಿ ಫ್ಯಾಷನ್‌ವೇರ್‌ಗಳು ಇತ್ತೀಚೆಗೆ ಹೆಚ್ಚಾಗಿ ದೊರೆಯುತ್ತಿವೆ.

ಶೀಲಾ ಸಿ ಶೆಟ್ಟಿ

View all posts by this author