ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IMDb: 2026ರ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿವೀಲ್; ಮೊದಲ ಸ್ಥಾನ ಯಾರಿಗೆ? ಈ ಲಿಸ್ಟ್‌ನಲ್ಲಿ ಕನ್ನಡದ ಯಾವ ಚಿತ್ರವಿದೆ?

ವಿಶ್ವಾದ್ಯಂತ 250 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಕರು IMDb ವೆಬ್‌ ಸೈಟ್‌ಗೆ ಭೇಟಿ ನೀಡಿದ ಆಧಾರದ ಮೇಲೆ 2026ರ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಸಾಲಿನಲ್ಲಿ ಶಾರುಖ್‌ ಖಾನ್‌ ಅವರ ಕಿಂಗ್‌ ಸಿನಿಮಾವು ಮೊದಲ ಸ್ಥಾನದಲ್ಲಿದ್ದರೆ, ಯಶ್‌ ನಟಿಸಿ, ನಿರ್ಮಾಣ ಮಾಡುತ್ತಿರುವ ರಾಮಾಯಣ: ಭಾಗ 1 ಮತ್ತು ಟಾಕ್ಸಿಕ್‌ ಸಿನಿಮಾಗಳು ಕ್ರಮವಾಗಿ ಎರಡನೇ ಮತ್ತು ಐದನೇ ಸ್ಥಾನ ಪಡೆದುಕೊಂಡಿದೆ. ಮಿಕ್ಕಂತೆ ಯಾವೆಲ್ಲಾ ಸಿನಿಮಾಗಳಿವೆ? ಇಲ್ಲಿದೆ ನೋಡಿ ಫುಲ್‌ ಲಿಸ್ಟ್‌.

1/20

1.ಕಿಂಗ್ (King) - ಹಿಂದಿ

ಶಾರುಖ್ ಖಾನ್, ಸುಹಾನಾ ಖಾನ್, ಅಭಿಷೇಕ್ ಬಚ್ಚನ್ ನಟನೆಯ ಈ ಸಿನಿಮಾವನ್ನು ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದರೆ. ರಿಲೀಸ್‌ ಡೇಟ್‌ ಇನ್ನೂ ಘೋಷಣೆ ಆಗಿಲ್ಲ.

2/20

2.ರಾಮಾಯಣ: ಭಾಗ 1 (Ramayana: Part 1) - ಹಿಂದಿ/ಪ್ಯಾನ್-ಇಂಡಿಯಾ

ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್ ಮುಂತಾದವರು ನಟಿಸಿರುವ ಈ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ದೀಪಾವಳಿ ಹಬ್ಬಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.

3/20

3.ಜನ ನಾಯಗನ್ (Jana Nayagan) - ತಮಿಳು

ದಳಪತಿ ವಿಜಯ್ ಅವರು ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ನಟಿಸಲಿರುವ ಕೊನೆಯ ಚಿತ್ರ ಇದಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಯಿದೆ. ಸೆನ್ಸಾರ್‌ ಸಮಸ್ಯೆಯಿಂದ ಬಿಡುಗಡೆ ತಡವಾಗುತ್ತಿದೆ.

4/20

4.ಸ್ಪಿರಿಟ್ (Spirit) - ತೆಲುಗು/ಪ್ಯಾನ್-ಇಂಡಿಯಾ

'ಅನಿಮಲ್' ಚಿತ್ರದ ಯಶಸ್ಸಿನ ನಂತರ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಪ್ರಭಾಸ್ ಅವರೊಂದಿಗೆ ಕೈಜೋಡಿಸಿರುವ ಪೊಲೀಸ್ ಡ್ರಾಮಾ ಇದು. ನಟಿ ತೃಪ್ತಿ ಡಿಮ್ರಿ ನಾಯಕಿಯಾಗಿದ್ದಾರೆ.

5/20

5.ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ (Toxic) - ಕನ್ನಡ/ಪ್ಯಾನ್-ಇಂಡಿಯಾ

ಕೆ.ಜಿ.ಎಫ್: ಚಾಪ್ಟರ್ 2 ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರವಿದು. ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್‌ ಮುಂತಾದವರು ನಟಿಸಿದ್ದಾರೆ.

6/20

6.ಬ್ಯಾಟಲ್ ಆಫ್ ಗಲ್ವಾನ್ (Battle of Galwan): ಹಿಂದಿ

2020ರ ಗಲ್ವಾನ್ ಕಣಿವೆ ಸಂಘರ್ಷವನ್ನು ಆಧರಿಸಿದ ಈ ಸಿನಿಮಾದಲಿ ಸಲ್ಮಾನ್ ಖಾನ್ ಹೀರೋ ಆಗಿದ್ದು, ಇದೊಂದು ವಾರ್ ಡ್ರಾಮಾವಾಗಿದೆ.

7/20

7.ಆಲ್ಫಾ (Alpha): ಹಿಂದಿ

ಆಲಿಯಾ ಭಟ್ ಮತ್ತು ಶಾರ್ವರಿ ವಾಘ್ ಮುಖ್ಯ ಪಾತ್ರದಲ್ಲಿರುವ ಸ್ಪೈ-ಯೂನಿವರ್ಸ್ ಥ್ರಿಲ್ಲರ್ ಆಲ್ಫಾ ಕೂಡ ನಿರೀಕ್ಷೆ ಮೂಡಿಸಿದೆ.

8/20

8.ಧುರಂಧರ್ 2 (Dhurandhar 2): ಹಿಂದಿ

ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಮುಂಬರುವ ಚಿತ್ರವು ಮಾ.19ರಂದು ತೆರೆಗೆ ಬರಲಿದೆ.

9/20

9.ಬಾರ್ಡರ್ 2 (Border 2): ಹಿಂದಿ

1997ರ ಕಲ್ಟ್ ಕ್ಲಾಸಿಕ್ ಯುದ್ಧದ ಸಿನಿಮಾದ ಮುಂದುವರಿದ ಭಾಗವಾಗಿರುವ ಬಾರ್ಡರ್‌ 2 ಸಿನಿಮಾದಲ್ಲಿ ಸನ್ನಿ ಡಿಯೋಲ್ ಮತ್ತು ವರುಣ್ ಧವನ್ ನಟಿಸುತ್ತಿದ್ದು, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

10/20

10.ಎಲ್.ಐ.ಕೆ (L.I.K - Love Insurance Kompany): ತಮಿಳು

ವಿಘ್ನೇಶ್ ಶಿವನ್ ನಿರ್ದೇಶನದ, ಪ್ರದೀಪ್ ರಂಗನಾಥನ್ ನಟನೆಯ ತಮಿಳು ಸೈನ್ಸ್-ಫಿಕ್ಷನ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಇದಾಗಿದ್ದು, ಫೆಬ್ರವರಿಯಲಿ ತೆರೆಗೆ ಬರಲಿದೆ.

11/20

11.ಫೌಜಿ (Fauji) ತೆಲುಗು

ಹನು ರಾಘವಪುಡಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು 1940ರ ಕಾಲಘಟ್ಟದ ಹಿನ್ನೆಲೆಯುಳ್ಳ ಐತಿಹಾಸಿಕ ರೊಮ್ಯಾಂಟಿಕ್ ಆಕ್ಷನ್ ಡ್ರಾಮಾ ಎಂದು ಹೇಳಲಾಗುತ್ತಿದೆ.

12/20

12.ದಿ ಪ್ಯಾರಡೈಸ್ (The Paradise) ತೆಲುಗು

'ದಸರಾ' ಖ್ಯಾತಿಯ ಶ್ರೀಕಾಂತ್ ಒಡೆಲಾ ಮತ್ತು ನಾನಿ ಮತ್ತೆ ಒಂದಾಗುತ್ತಿರುವ ಚಿತ್ರವಿದು. ಸಿಕಂದರಾಬಾದ್ ಹಿನ್ನೆಲೆಯಲ್ಲಿ ನಡೆಯುವ, ಹಿಂಸೆ ಮತ್ತು ರಾಜಕೀಯದ ಎಳೆ ಇರುವ ಪಕ್ಕಾ ರಾ ಆಕ್ಷನ್ ಸಿನಿಮಾ ಇದಾಗಿರಲಿದೆ.

13/20

13.ಪೆದ್ದಿ (Peddi) ತೆಲುಗು

ರಾಮ್ ಚರಣ್ ಮತ್ತು 'ಉಪ್ಪೇನ' ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸಾನಾ ಕಾಂಬಿನೇಷನ್‌ನ ಪೆದ್ದಿ ಚಿತ್ರವು ಉತ್ತರ ಆಂಧ್ರದ ಹಿನ್ನೆಲೆಯಲ್ಲಿ ನಡೆಯುವ ಕಥೆ ಹೊಂದಿದೆ. ಈ ಚಿತ್ರದಲ್ಲಿ ರಾಮ್ ಚರಣ್‌ಗೆ ಜೋಡಿಯಾಗಿ ಜಾನ್ವಿ ಕಪೂರ್‌ ಇದ್ದಾರೆ.

14/20

14.ಡ್ರ್ಯಾಗನ್ (Dragon) ತೆಲುಗು

ಇದು ಪ್ರಶಾಂತ್ ನೀಲ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಅವರ ಈ ಬಹುನಿರೀಕ್ಷಿತ (NTR 31) ಚಿತ್ರಕ್ಕೆ ಇನ್ನೂ ಟೈಟಲ್‌ ಫಿಕ್ಸ್‌ ಆಗಿಲ್ಲ. ಕೆಜಿಎಫ್, ಸಲಾರ್ ನಂತರ ಪ್ರಶಾಂತ್ ನೀಲ್ ಮತ್ತೊಂದು ಹೈ-ವೋಲ್ಟೇಜ್ ಸಿನಿಮಾ ಮಾಡಲಿದ್ದಾರೆ.

15/20

15.ಲವ್ ಆಂಡ್ ವಾರ್ (Love and War) ಹಿಂದಿ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಅದ್ಧೂರಿ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಒಟ್ಟಿಗೆ ನಟಿಸುತ್ತಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ಯುದ್ಧದ ಹಿನ್ನೆಲೆಯಲ್ಲಿ ನಡೆಯುವ ಸಿನಿಮಾವಾಗಿದೆ.

16/20

16.ಭೂತ್ ಬಂಗ್ಲಾ (Bhooth Bangla) ಹಿಂದಿ

14 ವರ್ಷಗಳ ನಂತರ ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಒಂದಾಗುತ್ತಿರುವ ಹಾರರ್-ಕಾಮಿಡಿ ಚಿತ್ರವಿದು. 'ಭೂಲ್ ಭುಲೈಯಾ' ಮತ್ತು 'ಹೇರಾ ಫೇರಿ'ಯಂತಹ ಕ್ಲಾಸಿಕ್‌ಗಳನ್ನು ನೀಡಿದ ಈ ಜೋಡಿಯಿಂದ ಮತ್ತೊಂದು ಕಾಮಿಡಿ ಸಿನಿಮಾವನ್ನು ನಿರೀಕ್ಷೆ ಮಾಡಲಾಗಿದೆ.

17/20

17.ಪೇಟ್ರಿಯಟ್ (Patriot) ಮಲಯಾಳಂ

ಮಮ್ಮುಟ್ಟಿ ಮತ್ತು ಮೋಹನ್‌ಲಾಲ್‌ ಮುಂತಾದವರು ನಟಿಸುತ್ತಿರುವ ದೇಶಪ್ರೇಮದ ಕಥೆಯ ಎಳೆ ಇರುವ ಪೇಟ್ರಿಯಟ್ ಸಿನಿಮಾದ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

18/20

18.ಶಕ್ತಿ ಶಾಲಿನಿ (Shakti Shalini) ಹಿಂದಿ

ಸೈಯಾರ ಖ್ಯಾತಿಯ ಅನೀತ್ ಪಡ್డా ಮುಖ್ಯ ಭೂಮಿಕೆಯಲ್ಲಿರುವ ಈ ಮಹಿಳಾ ಪ್ರಧಾನ ಸಿನಿಮಾವು IMDb ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ.

19/20

19.ಬೆನ್ಜ್ (Benz) ತಮಿಳು

ಲೋಕೇಶ್ ಕನಗರಾಜ್ ಅವರ ನಿರ್ಮಾಣ ಸಂಸ್ಥೆಯಡಿ (G Squad) ತಯಾರಾಗುತ್ತಿರುವ ಈ ಚಿತ್ರದಲ್ಲಿ ರಾಘವ ಲಾರೆನ್ಸ್‌ ನಾಯಕ. ಇದೊಂದು ಥ್ರಿಲ್ಲರ್ ಜಾನರ್‌ನ ಸಿನಿಮಾವಾಗಿದ್ದು, ಎಲ್‌ಸಿಯು ಅಡಿಯಲ್ಲಿ ಈ ಚಿತ್ರ ಮೂಡಿಬರಲಿದೆ.

20/20

20.ಓ ರೋಮಿಯೋ (O'Romeo) ಹಿಂದಿ

ಶಾಹಿದ್ ಕಪೂರ್ ನಟನೆಯ ಈ ಚಿತ್ರವು ವಿಭಿನ್ನ ಪ್ರೇಮಕಥೆಯನ್ನು ಹೊಂದಿರುವ ಸಾಧ್ಯತೆ ಇದೆ. ಈ ಸಿನಿಮಾದ ಮೂಲಕ ಆಕ್ಷನ್ ಸಿನಿಮಾಗಳ ನಂತರ ಶಾಹಿದ್ ಮತ್ತೆ ಲವರ್ ಬಾಯ್ ಇಮೇಜ್ ಅಥವಾ ಇಂಟೆನ್ಸ್ ರೊಮ್ಯಾಂಟಿಕ್ ಪಾತ್ರಕ್ಕೆ ಮರಳುವ ನಿರೀಕ್ಷೆಯಿದೆ.