ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2025ರ ಅತ್ಯುತ್ತಮ ಸಿನಿಮಾ 'ಕಾಂತಾರ ಚಾಪ್ಟರ್ 1'; ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಪ್ರಶಸ್ತಿ ಪ್ರದಾನ ಸಮಾರಂಭದ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ

7ನೇ ವರ್ಷದ ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಅದ್ದೂರಿಯಾಗಿ ಬೆಂಗಳೂರಿನಲ್ಲಿ ನಡೆದಿದೆ. 'ಕಾಂತಾರ: ಚಾಪ್ಟರ್ 1' ಚಿತ್ರವು ಒಟ್ಟು 9 ಪ್ರಶಸ್ತಿಗಳನ್ನು ಗೆದ್ದಿದ್ದು ವಿಶೇಷವಾಗಿತ್ತು. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 'ಕಾಂತಾರ: ಚಾಪ್ಟರ್ 1' ಚಿತ್ರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದರೆ, 'ಗತ ವೈಭವ' ಚಿತ್ರಕ್ಕಾಗಿ ಆಶಿಕಾ ರಂಗನಾಥ್‌ ಅವರು ಅತ್ಯುತ್ತಮ ನಟಿ ಗೌರವಕ್ಕೆ ಪಾತ್ರವಾದರು. ಉಳಿದಂತೆ ಯಾರಿಗೆಲ್ಲಾ ಪ್ರಶಸ್ತಿ ಸಿಕ್ಕಿದೆ ಎಂಬುದರ ಮಾಹಿತಿ ಜೊತೆಗೆ ಸಮಾರಂಭದ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ.

1/11

ಕಾಂತಾರ ಚಾಪ್ಟರ್ 1 ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ

2/11

50 ವರ್ಷ ಸಿನಿಮಾ ನಿರ್ದೇಶಕರಾಗಿ ಕೆಲಸ ಮಾಡಿರುವ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರಿಗೆ ʻಜೀವಮಾನ ಸಾಧನೆ ಪ್ರಶಸ್ತಿʼ ಪ್ರದಾನ

3/11

ʻಗತ ವೈಭವʼ ಚಿತ್ರದ ನಟನೆಗಾಗಿ ಆಶಿಕಾ ರಂಗನಾಥ್ ಅವರಿಗೆ ʻಅತ್ಯುತ್ತಮ ನಟಿ ಪ್ರಶಸ್ತಿʼ

4/11

ʻಫೈರ್ ಪ್ಲೈʼ ಚಿತ್ರದ ನಿರ್ಮಾಣಕ್ಕಾಗಿ ʻಅತ್ಯುತ್ತಮ ಚೊಚ್ಚಲ ನಿರ್ಮಾಣʼ ಪ್ರಶಸ್ತಿ ಪಡೆದ ನಿವೇದಿತಾ ಶಿವರಾಜ್ ಕುಮಾರ್

5/11

ʻಜ್ಯೂನಿಯರ್ʼ ಚಿತ್ರದ ನಟನೆಗಾಗಿ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ ಪಡೆದ ಕಿರಿಟಿ ರೆಡ್ಡಿ

6/11

ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಗೆ ಭಾಜನರಾದ ರಿಷಬ್‌ ಶೆಟ್ಟಿ ಮತ್ತು ಆಶಿಕಾ ರಂಗನಾಥ್‌

7/11

ನಿರ್ಮಾಣ ಮಾಡಿದ ಮೊದಲ ಚಿತ್ರಕ್ಕೇ (ಫೈರ್‌ಫ್ಲೈ) ಪ್ರಶಸ್ತಿ ಪಡೆದ ಖುಷಿಯಲ್ಲಿ ನಿವೇದಿತಾ ಶಿವರಾಜ್‌ಕುಮಾರ್‌

8/11

ʻಮಾರ್ಕ್ʼ ಚಿತ್ರದ ಮಸ್ತ್‌ ಮಲೈಕಾ ಸಾಂಗ್‌ ಹಾಡಿಗಾಗಿ ಅತ್ಯುತ್ತಮ ಗಾಯಕಿ ಪ್ರಶಸ್ತಿ ಪಡೆದ ಸಾನ್ವಿ ಸುದೀಪ್

9/11

ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಚಿತ್ರ ಸೇರಿದಂತೆ ಒಟ್ಟು 9 ವಿಭಾಗಗಳಲ್ಲಿ ಪ್ರಶಸ್ತಿ ʻಕಾಂತಾರ ಚಾಪ್ಟರ್ 1ʼ ಸಿನಿಮಾ

10/11

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ವಿ ಸುದೀಪ್‌ ಅವರ ಕುಟುಂಬದವರು

11/11

ʻಗತ ವೈಭವʼ ಸಿನಿಮಾದ ನಟನೆಗಾಗಿ ʻಅತ್ಯುತ್ತಮ ಚೊಚ್ಚಲ ನಟʼ ಪ್ರಶಸ್ತಿಯನ್ನು ದುಷ್ಯಂತ್‌ ಪಡೆದುಕೊಂಡರು.