ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Photos: ಗುಬ್ಬಿ ಶಾಸಕ ಶ್ರೀನಿವಾಸ್ ಪುತ್ರ, ನಟ ದುಷ್ಯಂತ್ - ರಚನಾ ಮದುವೆ ಆರತಕ್ಷತೆಯಲ್ಲಿ ಸಿದ್ದರಾಮಯ್ಯ ಭಾಗಿ; ನವಜೋಡಿಗೆ ಸಿಎಂ ಶುಭ ಹಾರೈಕೆ

ಗುಬ್ಬಿ ಕ್ಷೇತ್ರದ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ಪುತ್ರ, ಹಾಗೂ ʻಗತವೈಭವʼ ಚಿತ್ರದ ನಟ ದುಷ್ಯಂತ್‌ ಅವರು ಫೆ.26ರಂದು ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡ ಅವರ ಪುತ್ರಿ ರಚನಾ ಜೊತೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು. ಎರಡು ರಾಜಕೀಯ ಕುಟುಂಬಗಳ ನಡುವೆ ನಡೆದ ಈ ಮದುವೆಯು ಬಹಳ ಅದ್ದೂರಿಯಾಗಿ ನಡೆದಿತ್ತು. ಇಂದು (ಮಾ.1) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಆರತಕ್ಷತೆಯು ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದರು. ಜೊತೆಗೆ ಅನೇಕ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದ ಗಣ್ಯರು ಆರತಕ್ಷತೆಯಲ್ಲಿ ಭಾಗವಹಿಸಿ, ನವಜೋಡಿಗೆ ಶುಭ ಹಾರೈಸಿದರು. ಈ ಜೋಡಿಯ ಮದುವೆ ಆರತಕ್ಷತೆಯ ಫೋಟೋಗಳು ಇಲ್ಲಿವೆ ನೋಡಿ.

1/6

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಆರತಕ್ಷತೆ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ

2/6

ಫೆಬ್ರವರಿ 26ರಂದು ಹಸೆಮಣೆ ಏರಿದ್ದ ದುಷ್ಯಂತ್ ಮತ್ತು ರಚನಾ ಜೋಡಿಯಿಂದ ಇಂದು (ಮಾ.1) ಅದ್ದೂರಿ ಆರತಕ್ಷತೆ

3/6

ರಿಸೆಪ್ಷನ್‌ನಲ್ಲಿ ನವಜೋಡಿಗೆ ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

4/6

ದುಷ್ಯಂತ್‌ ಮತ್ತು ರಚನಾ ದಂಪತಿಗೆ ಶುಭ ಹಾರೈಸಿದ ಮಾಜಿ ಸಂಸದ ಡಿ ಕೆ ಸುರೇಶ್

5/6

ಶಾಸಕ ಎಸ್. ಆರ್. ಶ್ರೀನಿವಾಸ್ ಮತ್ತು ಎಸ್.ಪಿ. ಮುದ್ದಹನುಮೇಗೌಡ ಅವರ ಕುಟುಂಬಸ್ಥರಿಂದ ಗಣ್ಯರಿಗೆ ಸ್ವಾಗತ

6/6

'ಗತವೈಭವ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ದುಷ್ಯಂತ್‌ ಮದುವೆಗೆ ಬಂದ ತಾರೆಯರು