Photos: ಎಂಗೇಜ್ ಆದ ನಟ ದೇವರಾಜ್ ಪುತ್ರ ಪ್ರಣಾಮ್; ನಮಿತಾ ಜೊತೆ ಅದ್ದೂರಿಯಾಗಿ ನಡೆದ ನಿಶ್ಚಿತಾರ್ಥ ಸಮಾರಂಭ
ʻಡೈನಾಮಿಕ್ ಹೀರೋʼ ದೇವರಾಜ್ ಪುತ್ರ ಹಾಗೂ ನಟ ಪ್ರಜ್ವಲ್ ದೇವರಾಜ್ ಅವರ ಸಹೋದರ ಪ್ರಣಮ್ ದೇವರಾಜ್ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ತಮ್ಮ ದೀರ್ಘಕಾಲದ ಗೆಳತಿ ನಮಿತಾ ಗೋಪಾಲ್ ಅವರೊಂದಿಗೆ ಪ್ರಣಮ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಶುಭ ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಪಾಲ್ಗೊಂಡಿದ್ದರು. ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಸೇರಿದಂತೆ ಇಡೀ ಕುಟುಂಬ ಸಡಗರ-ಸಂಭ್ರಮದಿಂದ ಭಾಗಿಯಾಗಿ ನೂತನ ಜೋಡಿಗೆ ಶುಭ ಹಾರೈಸಿತು. ಪ್ರಣಮ್ ದೇವರಾಜ್ ಹಾಗೂ ನಮಿತಾ ಗೋಪಾಲ್ ನಿಶ್ಚಿತಾರ್ಥದ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ ನೋಡಿ.
ನಟ ಪ್ರಣಮ್ ದೇವರಾಜ್ ಹಾಗೂ ನಮಿತಾ ಗೋಪಾಲ್ ಅವರ ನಿಶ್ಚಿತಾರ್ಥವು ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು.
ಆಗಸ್ಟ್ 26 ರಂದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಿತು.
ಪರಸ್ಪರ ಪ್ರೀತಿಸುತ್ತಿದ್ದ ಪ್ರಣಮ್ ಹಾಗೂ ನಮಿತಾ, ಇದೀಗ ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಗೆಳತಿ ನಮಿತಾ ಗೋಪಾಲ್ ಅವರಿಗೆ ಪ್ರಣಮ್ ದೇವರಾಜ್ ಪ್ರೀತಿಯಿಂದ ಮಂಡಿಯೂರಿ ಉಂಗುರ ತೊಡಿಸುವ ಮೂಲಕ ಪರಸ್ಪರ ನಿಶ್ಚಿತಾರ್ಥ ಮಾಡಿಕೊಂಡರು.
ಕಿರಿಯ ಮಗನ ನಿಶ್ಚಿತಾರ್ಥದ ಖುಷಿಯಲ್ಲಿ 'ಡೈನಾಮಿಕ್ ಸ್ಟಾರ್' ದೇವರಾಜ್ ಹಾಗೂ ಪತ್ನಿ ಭಾಗಿಯಾಗಿದ್ದರು.
ತಮ್ಮನ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಟ ಪ್ರಜ್ವಲ್ ದೇವರಾಜ್ ಹಾಗೂ ನಟಿ ರಾಗಿಣಿ ಚಂದ್ರನ್ ಜೋಡಿ ಮುಂಚೂಣಿಯಲ್ಲಿ ನಿಂತು ಸಂಭ್ರಮಿಸಿತು.
ಭಾವಿ ಓರಗಿತ್ತಿ ನಮಿತಾ ಗೋಪಾಲ್ ಅವರನ್ನು ರಾಗಿಣಿ ಚಂದ್ರನ್ ಆತ್ಮೀಯವಾಗಿ ಕುಟುಂಬಕ್ಕೆ ಬರಮಾಡಿಕೊಂಡರು.
ಪ್ರಣಮ್ ದೇವರಾಜ್ ಅವರು ‘ಕುಮಾರಿ 21 ಎಫ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಪ್ರವೇಶ ಪಡೆದಿದ್ದರು.
ದೇವರಾಜ್ ಕುಟುಂಬ ಮತ್ತು ಆಪ್ತ ವಲಯದಲ್ಲಿ ಪ್ರಣಮ್ ದೇವರಾಜ್ ಅವರನ್ನು ಪ್ರೀತಿಯಿಂದ ‘ಚೋಟು’ ಎಂದು ಕರೆಯಲಾಗುತ್ತದೆ.