ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Photos: ದಾಂಪತ್ಯ ಬದುಕಿಗೆ ಕಾಲಿಟ್ಟ ನಟಿ ಮೆಹ್ರೀನ್ ಪಿರ್ಝಾದಾ; ಹಿಮಾಚಲ ಪ್ರದೇಶದಲ್ಲಿ ಅರ್ಷ್‌ ಔಲಕ್ ಜೊತೆ ಅದ್ದೂರಿಯಾಗಿ ನಡೆದ ವಿವಾಹ

ಬಹುಭಾಷಾ ನಟಿ ಮೆಹ್ರೀನ್ ಪಿರ್ಝಾದಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ (ಏಪ್ರಿಲ್ 26) ಅರ್ಷ್‌ ಔಲಕ್‌ ಅವರನ್ನು ಮೆಹ್ರೀನ್ ವರಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಿದೆ. ಈ ಹಿಂದೆ ಕಾಂಗ್ರೆಸ್ ಯುವ ನಾಯಕ ಭವ್ಯ ಬಿಷ್ಣೋಯ್ ಅವರೊಂದಿಗೆ ಮೆಹ್ರೀನ್ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ಮದುವೆ‌ ಆಗಬೇಕು ಎನ್ನುವಷ್ಟರಲ್ಲಿ ನಿಶ್ಚಿತಾರ್ಥ ರದ್ದಾಗಿತ್ತು. ಆದಾಗಿ 4 ವರ್ಷಗಳ ನಂತರ, ಮೆಹ್ರೀನ್ ಅವರು ತಮ್ಮ ಪ್ರಿಯಕರ ಅರ್ಷ್‌ ಔಲಖ್‌ ಅವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮದುವೆಯ ಸುಂದರ ಕ್ಷಣಗಳನ್ನು ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಳ್ಳುವ ಮೂಲಕ ಹೊಸ ಜೀವನದ ಆರಂಭವನ್ನು ಘೋಷಿಸಿದ್ದಾರೆ. ಮೆಹ್ರೀನ್ ತಮ್ಮ ಪ್ರಿ-ವೆಡ್ಡಿಂಗ್ ಸಂಭ್ರಮದ ಫೋಟೋಗಳು ಮತ್ತು ವಿಡಿಯೋಗಳನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಈ ಸಂದರ್ಭದಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಮೆಹ್ರೀನ್‌ಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

1/10

ಮೆಹ್ರೀನ್ ಪಿರ್ಝಾದಾ ಅವರ ಮದುವೆಯು ಏಪ್ರಿಲ್ 26 ರಂದು ಹಿಮಾಚಲ ಪ್ರದೇಶದ ಚೈಲ್ ಎಂಬಲ್ಲಿ ನೆರವೇರಿತು.

2/10

ಕೇವಲ ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಈ ಮದುವೆ ನಡೆದಿದೆ.

3/10

ಸಾಂಪ್ರದಾಯಿಕ 'ಆನಂದ್ ಕಾರಜ್' ವಿಧಿವಿಧಾನದ ಮೂಲಕ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

4/10

ಮೆಹ್ರೀನ್ ಪಿರ್ಝಾದಾ ಅವರು ತಮ್ಮ ಮದುವೆಗಾಗಿ 'ಪಿಂಕ್ ಮತ್ತು ವೈಟ್' (ಗುಲಾಬಿ ಮತ್ತು ಬಿಳಿ) ಬಣ್ಣದ ವಿಶೇಷ ಥೀಮ್ ಆಯ್ಕೆ ಮಾಡಿಕೊಂಡಿದ್ದರು.

5/10

ಲೇಯರ್ಡ್ ಪೋಲ್ಕಿ ನೆಕ್ ಸೆಟ್, ಮಾಂಗ್ ಟಿಕಾ ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಬೆಳ್ಳಿಯ ಕಲೀರಾಗಳು ಮೆಹ್ರೀನ್ ಪಿರ್ಝಾದಾ ಅವರ ಸೌಂದರ್ಯಕ್ಕೆ ಮೆರುಗು ನೀಡಿದ್ದವು.

6/10

ವರ ಅರ್ಶ್ ಅವರು ಗುಲಾಬಿ ಬಣ್ಣದ ಶೇರ್ವಾನಿ, ಪೇಟ, ಪೋಲ್ಕಿ ನೆಕ್ಲೇಸ್ ಹಾಗೂ ವಜ್ರದ ಕಲಂಗಿ ಧರಿಸಿದ್ದರು.

7/10

ಮೆಹ್ರೀನ್ ಅವರು ತೆಲುಗು, ತಮಿಳು, ಹಿಂದಿ ಮತ್ತು ಪಂಜಾಬಿ ಚಿತ್ರರಂಗದಲ್ಲಿ ಜನಪ್ರಿಯತೆಯನ್ನು ಗಳಿಸಿದ್ಧಾರೆ. ಇವರು ನಟ ಗುರುಫತೇಹ್ ಪಿರ್ಝಾದಾ ಸಹೋದರಿ.

8/10

ಮೆಹ್ರೀನ್ ಪಿರ್ಝಾದಾ ಅವರು 'ಪಂಥಂ', 'ಕವಚಂ' ಮತ್ತು 'F2: ಫನ್ ಅಂಡ್ ಫ್ರಸ್ಟ್ರೇಷನ್'. ʻF3ʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

9/10

ಮೆಹ್ರೀನ್ ಪಿರ್ಝಾದಾ ಅವರು 2023ರಲ್ಲಿ 'ಸುಲ್ತಾನ್ ಆಫ್ ಡೆಲ್ಲಿ' ಎಂಬ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯಲ್ಲೂ ನಟಿಸಿದ್ದರು.

10/10

‌ಶಿವರಾಜ್‌ಕುಮಾರ್‌ ನಟನೆಯ 'ನೀ ಸಿಗುವವರೆಗೂ' ಚಿತ್ರದ ಮೂಲಕ ಮೆಹ್ರೀನ್ ಪಿರ್ಝಾದಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಆ ಚಿತ್ರದ ಬಗ್ಗೆ ಸದ್ಯ ಯಾವುದೇ ಅಪ್ಡೇಟ್‌ ಇಲ್ಲ.