Photos: ಅರಮನೆ ಮೈದಾನದಲ್ಲಿ ʻಗತ ವೈಭವʼ ಹೀರೋ ದುಷ್ಯಂತ್ - ರಚನಾ ಕಲ್ಯಾಣ: ರಾಜಕೀಯ-ಸಿನಿ ಗಣ್ಯರ ಸಮ್ಮುಖದಲ್ಲಿ ಅದ್ದೂರಿ ಮದುವೆ
ʻಗತ ವೈಭವʼ ಸಿನಿಮಾದ ನಟ ದುಷ್ಯಂತ್ ಅವರು ಇಂದು (ಫೆ.26) ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಮಾಜಿ ಸಂಸದ ಮುದ್ದಹನುಮೇಗೌಡ ಅವರ ಪುತ್ರಿ ರಚನಾ ಅವರೊಂದಿಗೆ ದುಷ್ಯಂತ್ ಸಪ್ತಪದಿ ತುಳಿದಿದ್ದಾರೆ. ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅವರ ಪುತ್ರನಾಗಿರುವ ದುಷ್ಯಂತ್ ಅವರು ಕಳೆದ ವರ್ಷ ತೆರೆಕಂಡ ಗತವೈಭವ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಟರಾಗಿ ಕಾಲಿಟ್ಟಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈ ಮದುವೆಯಲ್ಲಿ ರಾಜಕೀಯ ಮತ್ತು ಸಿನಿಮಾರಂಗದ ಅನೇಕರು ಆಗಮಿಸಿ, ನೂತನ ವಧು - ವರರಿಗೆ ಶುಭ ಹಾರೈಸಿದ್ದಾರೆ. ಈ ಮದುವೆಯ ಫೋಟೋಗಳು ಇಲ್ಲಿವೆ ನೋಡಿ.
1/11
ವಧು-ವರರಿಗೆ ಶುಭ ಹಾರೈಸಿದ ಮಾಜಿ ಸಚಿವ ಕೆ ಎನ್ ರಾಜಣ್ಣ ಮತ್ತು ಸಚಿವ ಎಂ ಸಿ ಸುಧಾಕರ್
2/11
ದುಷ್ಯಂತ್ ರಚನಾ ದಂಪತಿಗೆ ಶುಭ ಹಾರೈಸಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್
3/11
ಮದುವೆಗೆ ಬಂದ ʻಗತವೈಭವʼ ಸಿನಿಮಾದಲ್ಲಿ ದುಷ್ಯಂತ್ ಜೊತೆ ನಟಿಸಿದ್ದ ಕಿಶನ್ ಬಿಳಗಲಿ
4/11
ದುಷ್ಯಂತ್ ರಚನಾ ಮದುವೆಗೆ ಬಂದ ಕಾಂಗ್ರೆಸ್ ಪಕ್ಷದ ಮುಖಂಡರಾದ ಕುಸುಮಾ
5/11
ದುಷ್ಯಂತ್ ಮದುವೆಯಲ್ಲಿ ಮಿಂಚಿದ ನಟ ಡಾಲಿ ಧನಂಜಯ್
6/11
ನವ ವಧು-ವರರಿಗೆ ಶುಭ ಹಾರೈಸಿದ ಇಂಧನ ಸಚಿವ ಕೆ ಜೆ ಜಾರ್ಜ್
7/11
ರಚನಾ ಜೊತೆ ನೂತನ ಪಯಣ ಕಾಲಿಟ್ಟ ನಟ ದುಷ್ಯಂತ್
8/11
ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ದುಷ್ಯಂತ್ ರಚನಾ ಮದುವೆ
9/11
ಶಾಸಕ ಎಸ್ ಆರ್ ಶ್ರೀನಿವಾಸ್ ಪುತ್ರ ದುಷ್ಯಂತ್ ಮದುವೆಗೆ ಬಂದ ರಾಜಕೀಯ ನಾಯಕರು
10/11
ದುಷ್ಯಂತ್ ಮತ್ತು ರಚನಾಗೆ ಆಶೀರ್ವದಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದಂಪತಿ
11/11
ದುಷ್ಯಂತ್ ಮದುವೆಯಲ್ಲಿ ಬಿಜೆಪಿ ಶಾಸಕ ಡಾ. ಸಿ. ಎನ್. ಅಶ್ವತ್ಥನಾರಾಯಣ