ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯʼ; ರಿಷಬ್‌ ಶೆಟ್ಟಿ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ

ಕಾಂತಾರ ಸ್ಟಾರ್‌ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಾಂಪತ್ಯಕ್ಕೆ ಈಗ 9 ವರ್ಷ ತುಂಬಿದೆ. ಹೌದು, 2017ರ ಫೆಬ್ರವರಿ 9 ರಂದು ನಡೆಯಿತು. ಇಂದು ಈ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಆ ಹಿನ್ನೆಲೆಯಲ್ಲಿ ರಿಷಬ್‌ ಶೆಟ್ಟಿ ಫೋಟೋಗಳನ್ನು ಹಂಚಿಕೊಂಡು, ಮಡದಿಗೆ ಪ್ರೀತಿಯಿಂದ ವಿಶ್‌ ಮಾಡಿದ್ದಾರೆ. "ಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯಕ್ಕಿಂದು ಒಂಭತ್ತು ತುಂಬಿದೆ. ಹಿಂದೆ ನೋಡಿದರೆ ಜೊತೆ ಕಳೆದ ಪ್ರತಿ ಗಳಿಗೆಯೂ ಸಿಹಿ ನೆನಪಿನ ನಿಕ್ಷೇಪಗಳಾಗಿವೆ. ಅಲ್ಲಿ ನಲಿವಿದೆ, ನೋವಿದೆ, ನಗುವಿದೆ, ಸರಸವಿರಸಗಳಿವೆ.. ಎಲ್ಲವನ್ನು ತೂಗುವ ಸಮರಸವಿದೆ.. ಎಲ್ಲಕ್ಕೂ ಮಿಗಿಲಾಗಿ ಕೊನೆಯಾಗದ ಒಲವಿದೆ.. ಅ ಒಲವು ಬೀರಿದ ಬೆಳಕು, ತಂದ ನೆಮ್ಮದಿ, ತುಂಬಿದ ಆತ್ಮವಿಶ್ವಾಸಗಳೇ ಇಂದು ನನ್ನನ್ನು ನಾನಾಗಿಸಿದೆ" ಎಂದು ಹೇಳಿದ್ದಾರೆ. ಇಲ್ಲಿವೆ ನೋಡಿ ಫೋಟೋಗಳು

1/6

ಕುಂದಾಪುರ ಸಮೀಪದ ಕೋಟೇಶ್ವರದಲ್ಲಿರುವ ಸಹನಾ ಕನ್ವೆನ್ಷನ್ ಸೆಂಟರ್‌ನಲ್ಲಿ ರಿಷಬ್‌ ಶೆಟ್ಟಿ ಮತ್ತು ಪ್ರಗತಿ ಅವರ ವಿವಾಹ ಮಹೋತ್ಸವ ನಡೆದಿತ್ತು.

2/6

ತಮ್ಮ ಹುಟ್ಟೂರಾದ ಕುಂದಾಪುರದಲ್ಲಿಯೇ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಪ್ರಗತಿಗೆ ತಾಳಿ ಕಟ್ಟಿದ್ದರು ರಿಷಬ್‌ ಶೆಟ್ಟಿ

3/6

ಮಡದಿ ಪ್ರಗತಿ ಶೆಟ್ಟಿ ಅವರಿಗೆ ಪ್ರೀತಿಯಿಂದ ಮದುವೆ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿರುವ ರಿಷಬ್‌ ಶೆಟ್ಟಿ

4/6

ನನ್ನ ಸತಿಯಾಗಿ, ಸೌಭಾಗ್ಯ ದೇವತೆಯಾಗಿ, ಸಾಥಿಯಾಗಿ ಬಂದು, ಹಿಡಿಯಷ್ಟಿದ್ದ ನನ್ನ ಬದುಕನ್ನು ಕಡಲಷ್ಟು ಅಗಾಧವಾಗಿಸಿದ ನಿನಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು ಎಂದಿದ್ದಾರೆ ರಿಷಬ್.

5/6

ನನ್ನನ್ನು ಮುನ್ನಡೆಸುವ ಚಾಲಕ ಶಕ್ತಿಗೆ, ನಾನು ಸದಾ ನಂಬಿರುವ ನನ್ನ ಬೆಂಬಲಕ್ಕೆ... ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.‌ ನೀನು ನನ್ನ ಕೈ ಹಿಡಿದು ಜೊತೆಗಿದ್ದಾಗ ಈ ಬದುಕು ಇನ್ನಷ್ಟು ಸುಂದರವೆನಿಸುತ್ತದೆ. ಹ್ಯಾಪಿ ವೆಡ್ಡಿಂಗ್ ಆನಿವರ್ಸರಿ ಎಂದಿದ್ದಾರೆ ರಿಷಬ್ ಶೆಟ್ಟಿ.

6/6

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ಕಾಂತಾರ ಚಾಪ್ಟರ್‌ 2 ಸಿನಿಮಾ ದೊಡ್ಡ ಯಶಸ್ಸನ್ನು ಪಡೆದುಕೊಂಡಿದೆ