ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

33 ವರ್ಷಗಳ ಸಿನಿ ಪಯಣಕ್ಕೆ ನಟ ವಿಜಯ್‌ ವಿದಾಯ; ದಳಪತಿಯ ಕೊನೇ ಸಿನಿಮಾದ ಆಡಿಯೋ ಲಾಂಚ್‌ ಹೇಗಿತ್ತು? ಇಲ್ಲಿವೆ ಕಲರ್‌ಫುಲ್‌ ಫೋಟೋಗಳು

ಮಲೇಷ್ಯಾದಲ್ಲಿ ಡಿಸೆಂಬರ್‌ 27ರಂದು ನಡೆದ ದಳಪತಿ ವಿಜಯ್‌ ಅವರ ಕೊನೆಯ ಸಿನಿಮಾದ ‘ಜನನಾಯಗನ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಿದೆ. ಈ ಅದ್ಭುತ ಕಾರ್ಯಕ್ರಮವು ಮಲೇಷ್ಯಾದಲ್ಲಿ ಅತಿ ಹೆಚ್ಚು ಜನರು ಭಾಗವಹಿಸಿದ ಆಡಿಯೋ ಬಿಡುಗಡೆ ಸಮಾರಂಭ ಎಂಬ ಹೆಗ್ಗಳಿಕೆಯೊಂದಿಗೆ ಅಧಿಕೃತವಾಗಿ 'ಮಲೇಷಿಯನ್ ಬುಕ್ ಆಫ್ ರೆಕಾರ್ಡ್ಸ್'ಗೆ ಸೇರ್ಪಡೆಯಾಗಿದೆ. 'ಜನ ನಾಯಗನ್' ಚಿತ್ರವು ಜನವರಿ 9 ರಂದು ಬಿಡುಗಡೆಯಾಗಲು ಸಿದ್ಧವಾಗಿದ್ದು, ಈ ಐತಿಹಾಸಿಕ ಆಡಿಯೋ ಲಾಂಚ್ ವಿಜಯ್ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

1/7

ದಳಪತಿ ವಿಜಯ್ ಅವರ ತಾಯಿ ಕಾರ್ಯಕ್ರಮದ ಆರಂಭದಲ್ಲಿ ನೀಡಿದ ವಿಶೇಷ ಪ್ರದರ್ಶನವು ಪ್ರೇಕ್ಷಕರನ್ನು ಭಾವುಕರನ್ನಾಗಿಸಿತು. ವಿಜಯ್ ಅವರು ವೇದಿಕೆಯ ಮೇಲೆ ಓಡಿಹೋಗಿ ತಮ್ಮ ತಂದೆಯನ್ನು ಆಲಂಗಿಸಿಕೊಂಡ ಕ್ಷಣವು ಇಡೀ ಕ್ರೀಡಾಂಗಣದಲ್ಲಿ ಚಪ್ಪಾಳೆ ಮತ್ತು ಹರ್ಷೋದ್ಗಾರಗಳನ್ನು ಮೊಳಗಿಸಿತು.

2/7

ಇದು ನೂರಕ್ಕೆ ನೂರರಷ್ಟು ದಳಪತಿ ವಿಜಯ್ ಅವರ ಸಿನಿಮಾ ಹಾಗೂ ಅವರ ಸಿದ್ಧಾಂತ ಮತ್ತು ಅಭಿಮಾನಿಗಳೊಂದಿಗಿನ ಬಾಂಧವ್ಯದ ಆಚರಣೆಯಾಗಿದೆ ಎಂದು ಜನ ನಾಯಗನ್‌ ನಿರ್ದೇಶಕ ಎಚ್ ವಿನೋದ್ ಹೇಳಿದ್ದಾರೆ.

3/7

ವಿಜಯ್ ಅವರ ಕೊನೆಯ ಸಿನಿಮಾವನ್ನು ಸೆಲೆಬ್ರೇಟ್‌ ಮಾಡಲು ನಿರ್ದೇಶಕ ಅಟ್ಲಿ, ಲೋಕೇಶ್ ಕನಕರಾಜ್ ನೆಲ್ಸನ್ ದಿಲೀಪ್‌ಕುಮಾರ್ ಅವರು ಆಗಮಿಸಿದ್ದು ವಿಶೇಷವಾಗಿತ್ತು.

4/7

ನಟ ಪ್ರಭುದೇವ ಅವರು 'ಪೋಕ್ಕಿರಿ' ಸಿನಿಮಾದ ಸ್ಟೆಪ್ ಹಾಕಿ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು 'ಯಾರು ಪೆಟ್ರ ಮಗನೋ' ಹಾಡಿನ ಮೂಲಕ ಸಮಾರಂಭದ ಮೆರುಗು ಹೆಚ್ಚಿಸಿದರು.‌ ನಟಿ ಮಮಿತಾ ಬೈಜು ಕೂಡ ವಿಜಯ್ ಅವರಿಗಾಗಿ ವಿಶೇಷ ನೃತ್ಯ ಪ್ರದರ್ಶನ ನೀಡಿದರು.

5/7

"ಇದು ತಮ್ಮ ಕೊನೆಯ ಸಿನಿಮಾ. ನಿಮ್ಮ ಪ್ರೀತಿಗೆ ಧನ್ಯವಾದ. ನೀವು ಏನು ಮಾಡಿದರೂ ನಾನು ಭಾಷಣದ ವೇಳೆ ಅಳುವುದಿಲ್ಲ" ಎಂದು ಹೇಳಿದ ವಿಜಯ್‌ , ನಂತರ ಅಭಿಮಾನಿಗಳಿಗಾಗಿ ಹಾಡುಗಳನ್ನು ಹಾಡಿ ಡ್ಯಾನ್ಸ್ ಮಾಡಿದರು.

6/7

ಹಿರಿಯ ನಟ ನಾಸರ್ ಅವರು ವಿಜಯ್ ಸಿನಿಮಾ ರಂಗದಲ್ಲಿ ಮುಂದುವರಿಯಬೇಕೆಂದು ಮನವಿ ಮಾಡಿದರು. ತೆಲುಗು ನಟ ಸುನಿಲ್ ಅವರು ತಮ್ಮ 25 ವರ್ಷಗಳ ವೃತ್ತಿಜೀವನದಲ್ಲಿ ಇಷ್ಟು ದೊಡ್ಡ ಜನಸಾಗರವನ್ನು ಎಂದೂ ನೋಡಿಲ್ಲವೆಂದು ಆಶ್ಚರ್ಯ ವ್ಯಕ್ತಪಡಿಸಿದರು.

7/7

ಜನ ನಾಯಗನ್‌ ಸಿನಿಮಾವು ಜನವರಿ 9ರಂದು ಬಿಡುಗಡೆ ಆಗುತ್ತಿದೆ. ಕನ್ನಡದ ಕೆವಿಎನ್‌ ಪ್ರೊಡಕ್ಷನ್ಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.