Photos: ʻಸ್ಯಾಂಡಲ್‌ವುಡ್ ಸಿಂಡ್ರೆಲಾʼ ರಾಧಿಕಾ ಪಂಡಿತ್ ಬರ್ತ್‌ಡೇ ಸಂಭ್ರಮ; ಪತ್ನಿಗಾಗಿ ಯಶ್ ಆಯೋಜಿಸಿದ್ದ ಪಾರ್ಟಿ ಹೇಗಿತ್ತು ನೋಡಿ
ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರು ತಮ್ಮ ಹುಟ್ಟುಹಬ್ಬವನ್ನು (ಮಾ.7) ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಅವರ ಹುಟ್ಟುಹಬ್ಬದ ದಿನವನ್ನು ಯಶ್ ಸಖತ್ ಕಲರ್‌ಫುಲ್ ಆಗಿಸಿದ್ದರು. ಹುಟ್ಟುಹಬ್ಬದ ಪಾರ್ಟಿಗೂ ಮುನ್ನ ರಾಧಿಕಾ ಅವರು ಫ್ಯಾನ್ಸ್‌ನ ಮೀಟ್ ಆಗಿದ್ದರು. ಬೆಳಗ್ಗೆಯಿಂದಲೇ ರಾಧಿಕಾ ಅವರ ಮನೆ ಬಳಿ ಬಂದಿದ್ದ ಫ್ಯಾನ್ಸ್, ವಿವಿಧ ರೀತಿಯ ಉಡುಗೊರೆಗಳನ್ನು ನೀಡಿದರು. ಬಹಳ ದಿನಗಳ ನಂತರ ಫ್ಯಾನ್ಸ್ ಜೊತೆಗೆ ಸಮಯ ಕಳೆದ ರಾಧಿಕಾ ಕೂಡ ಖುಷಿಯಾದರು. ನಂತರ ಮಾರ್ಚ್ 7ರ ಸಂಜೆ ಪತ್ನಿಗಾಗಿ ಯಶ್ ಗ್ರ್ಯಾಂಡ್ ಸೆಲೆಬ್ರೇಷನ್ ಆಯೋಜಿಸಿದ್ದರು. ಇಲ್ಲಿವೆ ನೋಡಿ ಆ ಸಂದರ್ಭದ ಫೋಟೋಗಳು.
1/7
ಮುಂಬೈನಿಂದ ಮಾರ್ಚ್ 6ರಂದೇ ಬೆಂಗಳೂರಿಗೆ ಬಂದಿದ್ದ ಯಶ್ ರಾಧಿಕಾ ಪಂಡಿತ್
2/7
ಸಿನಿಮಾ ಕೆಲಸಗಳಿಗಾಗಿ ಮುಂಬೈನಲ್ಲಿದ್ದ ಯಶ್ & ರಾಧಿಕಾ, ಹುಟ್ಟುಹಬ್ಬಕ್ಕಾಗಿ ಬೆಂಗಳೂರಿಗೆ ಆಗಮನ
3/7
ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ರಾಧಿಕಾ ಪಂಡಿತ್
4/7
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ರಾಧಿಕಾ ಪಂಡಿತ್ ಅವರ ಗ್ರ್ಯಾಂಡ್ ಬರ್ತ್‌ಡೇ ಪಾರ್ಟಿಯನ್ನ ಆಯೋಜಿಸಿದ್ದ ಯಶ್
5/7
ಯಶ್ ನಟನೆಯ ಟಾಕ್ಸಿಕ್ ಸಿನಿಮಾವು ಜೂನ್ 4ರಂದು ತೆರೆಗೆ ಬರಲಿದೆ.
6/7
ಉದ್ದನೆಯ ಕೂದಲು ಮತ್ತು ಗಡ್ಡಕ್ಕೆ ಕತ್ತರಿ ಹಾಕಿ, ಹೊಸ ಲುಕ್‌ನಲ್ಲಿ ಮಿಂಚುತ್ತಿರುವ ಯಶ್
7/7
ಪ್ರೀತಿಯ ಅತ್ತಿಗೆಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ ಯಶ್ ಸಹೋದರಿ ನಂದಿನಿ