ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Independence Day Nailart 2026: ಸೀಸನ್‌ನಲ್ಲಿ ಅರಳಿದ ದೇಶ ಪ್ರೇಮ ಬಿಂಬಿಸುವ ನೇಲ್ ಆರ್ಟ್ಸ್

Independence Day Nailart: ಮುಂಬರುವ ಸ್ವಾತಂತ್ರ್ಯ ದಿನಾಚಾರಣೆ ಅಂಗವಾಗಿ ನಾನಾ ಬಗೆಯ ನೇಲ್ ಆರ್ಟ್ ಡಿಸೈನ್‌ಗಳು ಆಗಮಿಸಿವೆ. ಯಾವ್ಯಾವ ಬಗೆಯವು ಬಂದಿವೆ? ಈ ವಿನ್ಯಾಸಗಳನ್ನು ಹೇಗೆಲ್ಲಾ ಚಿತ್ರಿಸಬಹುದು ಎಂಬುದನ್ನು ನೇಲ್ ಡಿಸೈನರ್‌ಗಳು ಇಲ್ಲಿ ತಿಳಿಸಿದ್ದಾರೆ.

ಚಿತ್ರಕೃಪೆ: ಇನ್ಸ್ಟಾಗ್ರಾಮ್
1/5

ಸ್ವಾತಂತ್ರ್ಯ ದಿನಾಚಾರಣೆ ಅಂಗವಾಗಿ ನಾನಾ ಬಗೆಯ ನೇಲ್ ಆರ್ಟ್ ಡಿಸೈನ್‌ಗಳು ಟ್ರೆಂಡಿಯಾಗಿವೆ. ಈ ಸಂಭ್ರಮಕ್ಕೆ ಸಾಥ್ ನೀಡುತ್ತಿವೆ.

2/5

ಟ್ರೆಂಡಿಯಾಗಿರುವ ತಿರಂಗಾ ಶೇಡ್ಸ್

ಅಂದಹಾಗೆ, ಈ ಸಂಭ್ರಮಕ್ಕೆ ಜತೆಯಾಗುವಂತಹ ತಿರಂಗಾ ಶೇಡ್ಸ್ ಇರುವಂತಹ ನಾನಾ ಬಗೆಯ ತ್ರಿವರ್ಣದ ಬಾವುಟದ ಡಿಸೈನ್‌ಗಳು, ಪೋಲ್ಕಾ ಡಾಟ್ಸ್, ಪಟ್ಟೆ ಪಟ್ಟೆ ಬಿಡಿಸಬಹುದಾದ ಸ್ಟ್ರೈಪ್ಸ್ ವಿನ್ಯಾಸದವು, ಕೋಲಾಜ್ ಶೇಡ್ಸ್, ಅಬ್ಸ್ಟ್ರಾಕ್ಟ್ ಪೇಂಟಿಂಗ್‌ನಂತವು, ಸಿಂಪಲ್ ಜೈ ಹಿಂದ್, ಐ ಲವ್ ಇಂಡಿಯಾದಂತಹ ಅಕ್ಷರಗಳನ್ನು ಬರೆದಿರುವಂತಹ ಡಿಸೈನ್‌ನವು ಈ ಸೀಸನ್‌ನಲ್ಲಿ ಹೆಚ್ಚು ಟ್ರೆಂಡ್‌ನಲ್ಲಿವೆ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ರಂಜಿತಾ.

3/5

ಸೋಷಿಯಲ್ ಮೀಡಿಯಾದಲ್ಲಿ ನೇಲ್ ಆರ್ಟ್ ಅಬ್ಬರ

ಇನ್ನು, ಸೋಷಿಯಲ್ ಮೀಡಿಯಾದ ಬ್ಯೂಟಿ ಬ್ಲಾಗ್‌ಗಳು ಈಗಾಗಲೇ ಇದಕ್ಕೆ ವೇದಿಕೆ ಕಲ್ಪಿಸಿದ್ದು, ಸದ್ಯಕ್ಕೆ ಬಗೆಬಗೆಯ ತಿರಂಗಾ ನೇಲ್ ಆರ್ಟ್ ವಿನ್ಯಾಸ ಟ್ರೆಂಡ್‌ನ ಟಾಪ್ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ ನೇಲ್ ಡಿಸೈನರ್ ರೀಟಾ. ಅವರ ಪ್ರಕಾರ, ಆಯಾ ಸೀಸನ್ ಹಾಗೂ ಸಂದರ್ಭಕ್ಕೆ ತಕ್ಕಂತೆ ನೇಲ್ ಆರ್ಟ್ ಬಿಡುಗಡೆಗೊಳ್ಳುತ್ತವೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಕ್ರಿಯೇಟಿವಿಟಿಗೆ ತಕ್ಕಂತೆ ಕಲರ್‌ಫುಲ್ ತಿರಂಗಾ ಡಿಸೈನ್‌ಗಳು ಅನಾವರಣಗೊಂಡಿವೆ ಎನ್ನುತ್ತಾರೆ ಅವರು.

4/5

ನಿಮ್ಮ ಕ್ರಿಯೇಟಿವಿಟಿ ಪ್ರದರ್ಶಿಸಿ

ಹಣ ಖರ್ಚು ಮಾಡಿ ತಿರಂಗಾ ನೇಲ್ ಆರ್ಟ್ ಮಾಡಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ತಲೆ ಕೆಡಿಸಿಕೊಳ್ಳಬೇಡಿ. ನೀವೇ ಮನೆಯಲ್ಲೂ ಈ ಚಿತ್ತಾರ ಮೂಡಿಸಿಕೊಳ್ಳಬಹುದು. ಇದಕ್ಕಾಗಿ ಒಂದಿಷ್ಟು ತಾಳ್ಮೆ ಜತೆಗೆ ಕ್ರಿಯಾತ್ಮಕ ಮನಸ್ಸಿರಬೇಕಷ್ಟೇ ಎನ್ನುತ್ತಾರೆ ನೇಲ್ ಡಿಸೈನರ್ ರಾಜಿ.

5/5

ನೇಲ್ ಆರ್ಟ್ ಪ್ರಿಯರಿಗೆ ಟಿಪ್ಸ್

  • ರೆಡಿ ನೇಲ್ ಕಿಟ್ ಇದ್ದಲ್ಲಿ ಖುದ್ದು ನೀವೇ ನೇಲ್ ಆರ್ಟ್ ಮಾಡಬಹುದು.
  • ಫ್ಯಾನ್ಸಿ ಸ್ಟೋರ್‌ಗಳಲ್ಲಿ ನೇಲ್ ಕಿಟ್ ದೊರೆಯುತ್ತದೆ. ಖರೀದಿಸಿ. ಉಪಯೋಗಿಸಿ.
  • ಕೇಸರಿ, ಬಿಳೀ, ಹಸಿರು ಬೇಸಿಕ್ ಶೇಡ್‌ಗಳು ಈ ಶೈಲಿಯ ನೇಲ್ ಆರ್ಟ್‌ಗೆ ಅತ್ಯಗತ್ಯ.
  • ಮೊದಲಿಗೆ ಮೆನಿಕ್ಯೂರ್ ಮಾಡಿಸಿಕೊಳ್ಳಿ.
  • ಹೆಚ್ಚಿನ ವಿನ್ಯಾಸಗಳಿಗಾಗಿ ತಿರಂಗಾ ನೇಲ್ ಆರ್ಟ್ ಡಿಸೈನ್‌ಗಳನ್ನು ಯೂಟ್ಯೂಬ್‌ನಲ್ಲಿ ನೋಡಿ, ಫೈನಲ್ ಮಾಡಿ, ಟ್ರೈ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author