Operation Sindoor: ಆ 25 ನಿಮಿಷಗಳು...ಉಗ್ರರ ನೆಲೆಗೆ ನುಗ್ಗಿ ಪರಾಕ್ರಮ ಮೆರೆದ ಭಾರತ; ಇಲ್ಲಿದೆ ಕ್ಯಾಮೆರಾದಲ್ಲಿ ಸೆರೆಯಾದ ರೋಚಕ ಕ್ಷಣಗಳು...
ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನದ ಉಗ್ರರು ದಾಳಿ ನಡೆಸಿ 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿರುವುದಕ್ಕೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆಯನ್ನು ಧ್ವಂಸಗೊಳಿಸಿದೆ. ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಕಡೆ ಕ್ಷಿಪಣಿ ದಾಳಿ ನಡೆಸಿ ಸುಮಾರು 80ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದೆ. ಪಹಲ್ಗಾಮ್ ದಾಳಿ ನಡೆದ ಸುಮಾರು 15 ದಿನಗಳ ಬಳಿಕ ಭಾರತೀಯ ಸೇನೆ ಈ ಕಾರ್ಯಾಚರಣೆ ಕೈಗೊಂಡಿದೆ. ಮೇ 7ರ ಮುಂಜಾನೆ ನಡೆದ ಈ ಆಪರೇಷನ್ನಲ್ಲಿ ಭಾರತೀಯ ಕರ ಸೇನೆ, ವಾಯು ಸೇನೆ ಮತ್ತು ನೌಕಾ ದಳದ ಸಿಬ್ಬಂದಿ ಭಾಗವಹಿಸಿದ್ದರು.



ಶಪಥ ಕೈಗೊಂಡಿದ್ದ ಭಾರತ
ಜಮ್ಮು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಗೆ ತೆರಳಿದ್ದ ಪ್ರವಾಸಿಗರನ್ನು ಗುರಿಯಾಗಿಸಿದ್ದ ಪಾಕ್ ಉಗ್ರರು ಅವರ ಧರ್ಮ ಕೇಳಿ ಮುಸ್ಲಿಮೇತರರನ್ನು ಶೂಟ್ ಮಾಡಿದ್ದರು. 25 ಪ್ರವಾಸಿಗರು ಸೇರಿ ಒಟ್ಟು 26 ಮಂದಿ ಬಲಿಯಾಗಿದ್ದರು. ಈ ಪೈಕಿ ಆಗಷ್ಟೇ ಮದುವೆಯಾಗಿ ಹನಿಮೂನ್ಗೆ ಬಂದವರೂ ಇದ್ದರು. ಗಂಡನನ್ನು ಕೊಲೆ ಮಾಡಿ ಹೋಗಿ ಮೋದಿಗೆ ಹೇಳು ಎಂದು ಉದ್ಧಟತನ ಮೆರೆದಿದ್ದರು. ಮಹಿಳೆಯರ ಸಿಂಧೂರ ಅಳಿಸಿದ ಪಾಕ್ ಉಗ್ರರ ವಿರುದ್ದ ಇದೀಗ ಪ್ರತೀಕಾರ ತೀರಿಸಲಾಗಿದೆ.

ಎಲ್ಲೆಲ್ಲಿ ದಾಳಿ?
ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರದ ವಿವಿಧ ಭಾಗಗಳಾದ ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರದ ವಿವಿಧ ಭಾಗಗಳಾದ ಬಹವಾಲ್ಪುರ್, ಮುರಿಡ್ಕೆ, ಗುಲ್ಪುರ, ಸಾಯಿ ಕ್ಯಾಂಪ್, ಬಿಲಾಲ್ ಕ್ಯಾಂಪ್, ಕೊಟ್ಲಿ ಕ್ಯಾಂಪ್, ಬರ್ನಾಲ ಕ್ಯಾಂಪ್, ಸರ್ಜಲ್ ಕ್ಯಾಂಪ್, ಮೆಹಮೂನಾ ಕ್ಯಾಂಪ್ ಮುಂತಾದೆಡೆ ದಾಳಿ ನಡೆದಿದೆ. ಇದೀಗ ಸೇನೆ ದಾಳಿಯ ಹಿಂದಿನ ಮತ್ತು ನಂತರ ಫೋಟೊ ರಿಲೀಸ್ ಮಾಡಿದೆ.

ಕ್ಯಾಂಪ್ ನಾಶ
ಬರ್ನಾಲಾ ಕ್ಯಾಂಪ್ ಶಸ್ತ್ರಾಸ್ತ್ರಗಳು, ಐಇಡಿ ತರಬೇತಿಯ ಕೇಂದ್ರವಾಗಿದ್ದರೆ, ನಿಯಂತ್ರಣ ರೇಖೆಯಿಂದ 13 ಕಿ.ಮೀ. ದೂರದಲ್ಲಿರುವ ಕೋಟ್ಲಿ ಶಿಬಿರವು 15 ಭಯೋತ್ಪಾದಕರ ತರಬೇತಿ ನೀಡಿದೆ. ಇದೀಗ ಈ ಕ್ಯಾಂಪ್ ಸಂಪೂರ್ಣ ನಾಶವಾಗಿದೆ. ಸೇನೆ ಬಿಡುಗಡೆ ಮಾಡಿದ ಫೋಟೊದಲ್ಲಿ ಇದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಎಲ್ಇಟಿಯ ತರಬೇತಿ ಕೇಂದ್ರ
ರಾಜೌರಿಯ ಅಬ್ಬಾಸ್ ಕ್ಯಾಂಪ್ ಎದುರಿನ ನಿಯಂತ್ರಣ ರೇಖೆಯಿಂದ ಸುಮಾರು 13 ಕಿ.ಮೀ. ದೂರದಲ್ಲಿರುವ ಕೋಟ್ಲಿಯನ್ನು ಎಲ್ಇಟಿಯ ಆತ್ಮಾಹುತಿ ಬಾಂಬರ್ಗಳ ತರಬೇತಿಯ ಕೇಂದ್ರವೆಂದು ಕರೆಯಲಾಗುತ್ತಿತ್ತು. ಇದೀಗ ಈ ಕೇಂದ್ರವೂ ನಾಸವಾಗಿದೆ.

ಭಯೋತ್ಪಾದಕರಿಗೆ ತರಬೇತಿ
ಸಿಯಾಲ್ಕೋಟ್, ಸಾಂಬಾ-ಕಥುವಾದ ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 6 ಕಿ.ಮೀ. ದೂರದಲ್ಲಿ ಸರ್ಜಲ್ ಕ್ಯಾಂಪ್ ಇದೆ. 2025ರ ಮಾರ್ಚ್ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರನ್ನು ಹತ್ಯೆಗೈದ ಭಯೋತ್ಪಾದಕರಿಗೆ ಸರ್ಜಲ್ ಶಿಬಿರದಿಂದ ತರಬೇತಿ ನೀಡಲಾಯಿತು.

80 ಉಗ್ರರು ಫಿನಿಶ್
ಮೆಹಮೂನಾ ಜೋಯಾ ಕ್ಯಾಂಪ್, ಸಿಯಾಲ್ಕೋಟ್ ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 12 ಕಿ.ಮೀ. ದೂರದಲ್ಲಿದೆ. ಇದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಪ್ರಮುಖ ತರಬೇತಿ ಕೇಂದ್ರವಾಗಿತ್ತು. ಪಠಾಣ್ಕೋಟ್ ವಾಯುನೆಲೆಯ ಮೇಲಿನ ದಾಳಿ ಸೇರಿದಂತೆ ಪ್ರಮುಖ ಭಯೋತ್ಪಾದಕ ದಾಳಿಗಳನ್ನು ಈ ಶಿಬಿರದಿಂದ ಯೋಜಿಸಲಾಗಿತ್ತು. ಪಾಕಿಸ್ತಾನದ ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾ ಪ್ರಸಿದ್ಧ ಭಯೋತ್ಪಾದಕ ತರಬೇತಿ ಶಿಬಿರವಾಗಿತ್ತು. ಸದ್ಯ ಇವೆಲ್ಲವನ್ನೂ ನಿರ್ನಾಮ ಮಾಡಲಾಗಿದೆ. ಘಟನೆಯಲ್ಲಿ ಒಟ್ಟು 80ಕ್ಕೂ ಹೆಚ್ಚು ಉಗ್ರರನ್ನು ಫಿನಿಶ್ ಮಾಡಲಾಗಿದೆ.