ದೇಶದ ಇತಿಹಾಸದಲ್ಲಿ ನಡೆದ ಅತೀ ಭೀಕರ ಅಗ್ನಿ ದುರಂತಗಳಿವು
ದೇಶವು ಇತಿಹಾಸದಲ್ಲೇ ಅತ್ಯಂತ ಭೀಕರ ಅಗ್ನಿ ಅವಘಡಗಳಿಗೆ ಸಾಕ್ಷಿಯಾಗಿದೆ. ಇದಕ್ಕೆ ಮುಖ್ಯ ಕಾರಣ ನಿರ್ಲಕ್ಷ್ಯ, ಅಗ್ನಿಶಾಮಕ ನಿರ್ವಹಣೆಗೆ ಸಂಬಂಧಿಸಿದ ಸರಿಯಾದ ನಿಯಮ ಮತ್ತು ನಿಬಂಧನೆಗಳ ಕೊರತೆಯಾಗಿದೆ. ದೆಹಲಿಯ ಮಾಳವೀಯ ನಗರದ ರೆಸ್ಟೋರೆಂಟ್‌ವೊಂದರ ನೆಲಮಾಳಿಗೆಯಲ್ಲಿ ಬುಧವಾರ ಬೆಳಗ್ಗೆ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಸುಮಾರು 20 ಮಂದಿ ಸಾವನ್ನಪ್ಪಿದ್ದರು. ದೆಹಲಿಗೂ ಮೊದಲು ದೇಶದ ವಿವಿಧ ಇದೇ ರೀತಿಯ ಅಗ್ನಿ ಅವಘಡಗಳು ಸಂಭವಿಸಿದ್ದು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಅಂತಹ ದುರಂತಗಳ ಚಿತ್ರಣ ಇಲ್ಲಿದೆ.
ದೆಹಲಿಯ ಮಾಳವೀಯ ನಗರದ ಲೆಮನ್ ಗ್ರೀನ್ ರೆಸ್ಟೋರೆಂಟ್ ನಲ್ಲಿ ಬುಧವಾರ ಬೆಳಗ್ಗೆ ಭೀಕರ ಅಗ್ನಿ ದುರಂತ ಸಂಭವಿಸಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ. ಬೆಳಗ್ಗೆ 8.50ರ ಸುಮಾರಿಗೆ ಬೆಂಕಿ ದುರಂತ ಸಂಭವಿಸಿತ್ತು. ಇಂತಹ ದುರ್ಘಟನೆ ಇದೇ ಮೊದಲೇನಲ್ಲ. ಈ ಹಿಂದೆಯೂ ದೇಶದ ವಿವಿಧ ಭಾಗಗಳಲ್ಲಿ ನಡೆದಿದೆ.
1997ರ ಜೂನ್ 13 ರಂದು ಜನಪ್ರಿಯ ಬಾಲಿವುಡ್ ಚಲನಚಿತ್ರ ಬಾರ್ಡರ್ ಪ್ರದರ್ಶನದ ಸಮಯದಲ್ಲಿ ದೆಹಲಿಯ ಗ್ರೀನ್ ಪಾರ್ಕ್‌ನಲ್ಲಿರುವ ಉಪಹಾರ್ ಚಿತ್ರಮಂದಿರದಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತು. ಇದರಲ್ಲಿ 59 ಮಂದಿ ಸಾವನ್ನಪ್ಪಿದ್ದು, 103 ಮಂದಿ ಗಾಯಗೊಂಡಿದ್ದರು.
ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿರುವ ಶಾಲೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು 94 ಮಕ್ಕಳು ಸಾವನ್ನಪ್ಪಿದ್ದರು. ನರ್ಸರಿ, ಪ್ರಾಥಮಿಕ ಮತ್ತು ಮಾಧ್ಯಮಿಕ ವಿಭಾಗದ ತರಗತಿ ಕೊಠಡಿಗಳಿದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
2006ರ ಏಪ್ರಿಲ್ 15ರಂದು ಮೀರತ್‌ನಲ್ಲಿ ನಡೆದ ಬ್ರಾಂಡ್ ಇಂಡಿಯಾ ಫೇರ್‌ನಲ್ಲಿ ಉಂಟಾದ ಅಗ್ನಿ ದುರಂತದಲ್ಲಿ 50 ಕ್ಕೂ ಹೆಚ್ಚು ಮಂದಿ ಸುಟ್ಟು ಕರಕಲಾದರು. ಇದನ್ನು ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿ ಕೂಡ ಗಾಯಗೊಂಡಿದ್ದರು.
2004ರ ಜನವರಿ 23ರಂದು ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್‌ನಲ್ಲಿರುವ ಐಕಾನಿಕ್ ಸ್ಟೀಫನ್ ಕೋರ್ಟ್ ಕಟ್ಟಡದಲ್ಲಿ ಉಂಟಾದ ಬೆಂಕಿಯು 42 ಜನರನ್ನು ಬಲಿ ತೆಗೆದುಕೊಂಡಿತು. ಇದರಲ್ಲಿ ಹಲವಾರು ಮಂದಿ ಗಾಯಗೊಂಡಿದ್ದರು.
ಹರಿಯಾಣದ ಮಂಡಿ ದಬ್ವಾಲಿ ಅಗ್ನಿ ಅವಘಡದಲ್ಲಿ 300 ಮಂದಿ ಸಾವನ್ನಪ್ಪಿದ್ದರು. ಇದು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದುರಂತ. ಪೆಂಡಲ್ ಗೆ ಬೆಂಕಿ ತಗಲಿ ಕುಸಿದು ಅಪಘಾತ ಸಂಭವಿಸಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.