ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jewel Blouse Trend 2025: ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಂಡಿಯಾದ ಜ್ಯುವೆಲ್ ಬ್ಲೌಸ್

Jewel Blouse Trend 2025: ವರಮಹಾಲಕ್ಷ್ಮಿ ಹಬ್ಬಕ್ಕೆ ಗ್ರ್ಯಾಂಡ್ ಲುಕ್ ನೀಡುವಂತಹ ಜ್ಯುವೆಲ್ ಸೀರೆ ಬ್ಲೌಸ್‌ಗಳು ಟ್ರೆಂಡಿಯಾಗಿವೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ದುಬಾರಿ ವೆಚ್ಚದ ಈ ಬ್ಲೌಸ್‌ಗಳು ಹೇಗೆಲ್ಲಾ ವಿನ್ಯಾಸ ಒಳಗೊಂಡಿರುತ್ತವೆ? ಎಂಬುದರ ಬಗ್ಗೆ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿ ಕೃಷ್ಣ ಇಲ್ಲಿ ವಿವರಿಸಿದ್ದಾರೆ.

ಚಿತ್ರಗಳು: ಲಕ್ಷ್ಮಿ ಕೃಷ್ಣ, ಸೆಲೆಬ್ರೆಟಿ ಡಿಸೈನರ್
1/5

ವರಮಹಾಲಕ್ಷ್ಮಿ ಹಬ್ಬದ ಈ ಸೀಸನ್‌ನಲ್ಲಿ ಗ್ರ್ಯಾಂಡ್ ಲುಕ್ ನೀಡುವ ಜ್ಯುವೆಲ್ ಬ್ಲೌಸ್‌ಗಳು ಟ್ರೆಂಡಿಯಾಗಿವೆ.

2/5

ಏನಿದು ಜ್ಯುವೆಲ್ ಬ್ಲೌಸ್?

ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿ ಕೃಷ್ಣ ಅವರು ಹೇಳುವಂತೆ, ಇವು ಸಾಮಾನ್ಯ ಬ್ಲೌಸ್‌ಗಳಲ್ಲ! ಅತ್ಯಂತ ಗ್ರ್ಯಾಂಡ್ ಇರುವಂತಹ ಡಿಸೈನರ್ ಬ್ಲೌಸ್‌ಗಳಿವು. ಇಡೀ ಬ್ಲೌಸ್‌ಗೆ ಡಿಸೈನ್ ಮಾಡುವುದರೊಂದಿಗೆ ನಾನಾ ಬಗೆಯ ಮಿನಿ ಜ್ಯುವೆಲರಿಗಳನ್ನು ಬಳಸಿ ವಿನ್ಯಾಸ ಮಾಡಲಾಗಿರುತ್ತದೆ. ಉದಾಹರಣೆಗೆ., ಬಾಜುಬಂದ್ ಧರಿಸುವ ಬ್ಲೌಸ್‌ನ ಜಾಗದಲ್ಲಿ ಅದೇ ರೀತಿಯ ವಿನ್ಯಾಸ ಮಾಡಲಾಗಿರುತ್ತದೆ. ನೋಡಲು ಇದು ಥೇಟ್ ಬಾಜುಬಂದ್ ಧರಿಸಿದಂತೆ ಭಾಸವಾಗುತ್ತದೆ.

3/5

ಅತ್ಯಾಕರ್ಷಕ ವಿನ್ಯಾಸ

ಇನ್ನು, ನೆಕ್‌ಲೈನ್‌ನಲ್ಲೂ ಅಷ್ಟೇ ನೆಕ್ಲೇಸ್ ಧರಿಸಿದಂತೆ ಕಾಣುವ ನೆಕ್‌ಲೈನ್‌ಗಳನ್ನು ಸೂಕ್ಷ್ಮ ಕಸೂತಿ ಹಾಗೂ ಹ್ಯಾಂಡ್ ಎಂಬ್ರಾಯ್ಡರಿ ಮೂಲಕ ಗೋಲ್ಡನ್ ಜ್ಯುವೆಲರಿಗಳನ್ನು ಬಳಸಿ ವಿನ್ಯಾಸಗೊಳಿಸಲಾಗಿರುತ್ತದೆ. ಈ ರೀತಿ ಆಕರ್ಷಕವಾದ ಜ್ಯುವೆಲರಿಗಳನ್ನು ಬಳಸಿ ಡಿಸೈನ್‌ ಮಾಡಲಾದ ಗ್ರ್ಯಾಂಡ್ ಸೀರೆ ಬ್ಲೌಸ್‌ಗಳನ್ನು ಜ್ಯುವೆಲ್ ಬ್ಲೌಸ್ ಎಂದು ಹೇಳಲಾಗುತ್ತದೆ ಎನ್ನುತ್ತಾರೆ ಲಕ್ಷ್ಮಿ ಕೃಷ್ಣ.

4/5

ಟ್ರೆಂಡ್‌ನಲ್ಲಿರುವ ಜ್ಯುವೆಲ್ ಬ್ಲೌಸ್‌ಗಳಿವು

ಆಂಟಿಕ್ ಜ್ಯುವೆಲ್‌ನಲ್ಲಿ ವಿನ್ಯಾಸಗೊಂಡಿರುವ ಜ್ಯುವೆಲ್ ಬ್ಲೌಸ್‌ಗಳು, ಕುಂದನ್ ವರ್ಕ್ ಜ್ಯುವೆಲ್ ಬ್ಲೌಸ್, ನೆಕ್ಲೇಸ್ ಡಿಸೈನ್‌ನ ಗೋಲ್ಡನ್ ಬೀಡ್ಸ್‌ನ ನೆಕ್‌ಲೈನ್, ಬ್ಲೌಸ್‌ನ ಮಧ್ಯೆ ಮಧ್ಯೆ ಬೂಟಾದಂತಹ ಜಾಗದಲ್ಲಿ ಕುಂದನ್ ಡಿಸೈನ್, ಬ್ಲೌಸ್‌ನ ಬ್ಯಾಕ್ಸೈಡ್‌ನಲ್ಲಿ ಏಳು, ಒಂಭತ್ತು ಕೆಂಪು, ಹಸಿರು ಹರಳಿನ ಫ್ಲೋರಲ್ ಕಿವಿಯೊಲೆಯಂತಹ, ಲಕ್ಷ್ಮಿ, ನವಿಲು, ಆನೆ ಹೀಗೆ ನಾನಾ ಆಭರಣಗಳ ವಿನ್ಯಾಸದ ಕಾನ್ಸೆಪ್ಟ್‌ನ ಜ್ಯುವೆಲ್ ಡಿಸೈನ್‌ನ ಸೀರೆ ಬ್ಲೌಸ್‌ಗಳು ಈ ಸೀಸನ್‌ನಲ್ಲಿ ಟ್ರೆಂಡ್‌ನಲ್ಲಿವೆ.

5/5

ದುಬಾರಿ ಜ್ಯುವೆಲ್ ಬ್ಲೌಸ್

ಹೌದು. ಜ್ಯುವೆಲ್ ಸೀರೆ ಬ್ಲೌಸ್‌ಗಳು ದುಬಾರಿ. ಜ್ಯುವೆಲರಿಗಳಿಂದ ವಿನ್ಯಾಸಗೊಳಿಸುವ ಈ ಬ್ಲೌಸ್‌ಗಳು ಕನಿಷ್ಠ ಎಂದರೂ ಐದಾರು ಸಾವಿರ ರೂ.ಗಳಿಂದ ಆರಂಭವಾಗುತ್ತದೆ ಎನ್ನುತ್ತಾರೆ ಡಿಸೈನರ್ಸ್. ಪ್ರತಿ ಜ್ಯುವೆಲ್ ಬ್ಲೌಸ್‌ಗಳು ವಿನ್ಯಾಸಕ್ಕೆ ಬಳಸುವ ಆಭರಣಗಳ ಬೆಲೆಯ ಆಧಾರದ ಮೇಲೆ ನಿರ್ಧರಿತವಾಗಿರುತ್ತವೆ ಎನ್ನುತ್ತಾರೆ.

ಶೀಲಾ ಸಿ ಶೆಟ್ಟಿ

View all posts by this author