ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jewel Fashion 2025: ಕೈಗಳ ಅಂದ ಹೆಚ್ಚಿಸುವ ಬ್ರೇಸ್ಲೆಟ್ ಆಗಿ ಬದಲಾದ ಕರಿಮಣಿ ಸರ

ವಿವಾಹಿತೆಯ ಕತ್ತನ್ನು ಸಿಂಗರಿಸುತ್ತಿದ್ದ ಮಾಂಗಲ್ಯದ ಕರಿಮಣಿ ಸರಗಳೀಗ ಕೈಗಳ ಬ್ರೇಸ್ಲೆಟ್ ರೂಪ ಪಡೆದುಕೊಂಡಿವೆ. ಹವಳದ ಜತೆ, ಮುತ್ತಿನ ಜತೆ, ಒಂದೆಳೆ, ಎರಡೆಳೆ ಅಷ್ಟೇಕೆ! ಗೊಂಚಲಿನಂತಹ ಕರಿಮಣಿ ಚೈನ್‌ಗಳು ಬ್ರೇಸ್ಲೆಟ್ ಡಿಸೈನ್‌ನಲ್ಲಿ ಆಗಮಿಸಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಕರಿಮಣಿ ಸರ ವಿನ್ಯಾಸದ ಬ್ರೇಸ್ಲೆಟ್ (ಚಿತ್ರಕೃಪೆ: ಪಿಕ್ಸೆಲ್)
1/5

ವಿವಾಹಿತ ಮಹಿಳೆಯರ ಕರಿಮಣಿ ಸರಗಳು ಇದೀಗ ಬ್ರೇಸ್ಲೆಟ್‌ಗಳಾಗಿ ರೂಪ ಬದಲಿಸಿವೆ. ಹೌದು, ಮಾನಿನಿಯರ ಮಾಂಗಲ್ಯದ ಕರಿಮಣಿಗಳು ಮಾಡರ್ನ್ ಮಹಿಳೆಯರ ಕೈಗಳ ಅಂದ ಹೆಚ್ಚಿಸುವ ಬ್ರೇಸ್ಲೆಟ್‌ಗಳಾಗಿವೆ. ಮಾಡರ್ನ್ ಸ್ತ್ರೀಯರ ಅಲಂಕಾರಿಕ ಜ್ಯುವೆಲರಿಗಳಾಗಿ ಪರಿವರ್ತನೆಗೊಂಡಿವೆ.

2/5

ವೈವಿಧ್ಯಮಯ ಕರಿಮಣಿ ಬ್ರೇಸ್ಲೆಟ್

ಹವಳದ ಜತೆ, ಮುತ್ತಿನ ಜತೆ, ಒಂದೆಳೆ, ಎರಡೆಳೆ ಅಷ್ಟೇಕೆ! ಗೊಂಚಲಿನಂತಹ ಕರಿಮಣಿ ಚೈನ್‌ಗಳು ಬ್ರೇಸ್ಲೆಟ್ ಡಿಸೈನ್‌ನಲ್ಲಿ ಆಗಮಿಸಿವೆ. ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ಅಷ್ಟೇಕೆ? ಇಮಿಟೇಷನ್ ಡಿಸೈನ್, ವನ್ ಗ್ರಾಮ್ ಗೋಲ್ಡ್ ಹಾಗೂ ಆರ್ಟಿಫಿಷಿಯಲ್ ಮೆಟಿರೀಯಲ್‌ನಲ್ಲೂ ಪ್ರಚಲಿತದಲ್ಲಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ಜಗನ್.

3/5

ನಟಿ ಶಿಲ್ಪಾ ಶೆಟ್ಟಿ ಟ್ರೆಂಡಿಯಾಗಿಸಿದ ಬ್ರೇಸ್ಲೇಟ್

ಈ ಟ್ರೆಂಡನ್ನು ಮೊದಲು ಹುಟ್ಟು ಹಾಕಿದ್ದು, ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ. ಮಾಂಗಲ್ಯದ ಕರಿಮಣಿ ಡಿಸೈನ್‌ನ ಬ್ರೇಸ್ಲೆಟ್ ಧರಿಸಿ ಕಾಣಿಸಿಕೊಂಡ ಫೋಟೋಗಳಿಂದ ಸಾಕಷ್ಟು ಸುದ್ದಿಯಾಗಿದ್ದರು ಕೂಡ. ನಂತರ ಅದು ಒಂದಿಷ್ಟು ದಿನಗಳ ಕಾಲ ಕಾಂಟ್ರವರ್ಸಿಯಾಗಿ ಉಳಿದಿತ್ತು. ಆದರೆ ಇದೀಗ ಇದೇ ಟ್ರೆಂಡಿಯಾಗಿದೆ ಎನ್ನುತ್ತಾರೆ ಡಿಸೈನರ್ಸ್.

4/5

ವಿವಾಹಿತೆಯ ಕತ್ತನ್ನು ಸಿಂಗರಿಸುತ್ತಿದ್ದ ಮಾಂಗಲ್ಯದ ಕರಿಮಣಿ ಸರಗಳೀಗ ಕೈಗಳ ಬ್ರೇಸ್ಲೆಟ್ ರೂಪ ಪಡೆದುಕೊಂಡಿವೆ.

5/5

ಟ್ರೆಂಡಿಯಾಗಿರುವ ಕರಿಮಣಿ ಬ್ರೇಸ್ಲೆಟ್ ಪ್ರಿಯರಿಗೆ ಸಲಹೆ

  • ಕರಿಮಣಿ ಜ್ಯುವೆಲರಿ ಸೆಟ್‌ಗೆ ಮ್ಯಾಚ್ ಮಾಡಲು ಧರಿಸಬಹುದು.
  • ಚಿನ್ನದ್ದು ಕೊಳ್ಳಲಾಗದಿದ್ದಲ್ಲಿ ಆರ್ಟಿಫಿಷಿಯಲ್‌ನವನ್ನು ಕೊಳ್ಳಬಹುದು.
  • ಬ್ಲಾಕ್ ಔಟ್‌ಫಿಟ್‌ಗೆ ಆಕರ್ಷಕವಾಗಿ ಕಾಣುತ್ತವೆ.
  • ಬಂಗಾರದಲ್ಲಿ ಲೈಟ್‌ವೇಟ್‌ನವು ಬಿಡುಗಡೆಗೊಂಡಿವೆ.
  • ಡೆಲಿಕೇಟ್ ವಿನ್ಯಾಸದ್ದಾಗಿದ್ದಲ್ಲಿ ರಫ್ ಬಳಕೆ ಬೇಡ.
  • ಹೆಚ್ಚು ಕೆಲಸ ಮಾಡುವ ಕೈಗಳಿಗೆ ಧರಿಸುವುದು ಬೇಡ.
  • ಇಂಡೋ-ವೆಸ್ಟರ್ನ್ ಡಿಸೈನ್‌ನವು ಈ ಸೀಸನ್‌ನಲ್ಲಿ ಆಗಮಿಸಿವೆ.
  • ವೈಟ್ ಮೆಟಲ್‌ನವು ಕೂಡ ಪ್ರಚಲಿತದಲ್ಲಿವೆ.

ಶೀಲಾ ಸಿ ಶೆಟ್ಟಿ

View all posts by this author