Jewel Fashion 2026: ವದನದ ಸೌಂದರ್ಯ ಹೆಚ್ಚಿಸುವ ಬಿಗ್ ಮಾಂಗ್ ಟೀಕಾ ಫ್ಯಾಷನ್
Big Maang Tikka Fashion: ಇದುವರೆಗೂ ಕೇವಲ ವೆಡ್ಡಿಂಗ್ ಫ್ಯಾಷನ್‌ಗೆ ಸೀಮಿತವಾಗಿದ್ದ ಡಿಸೈನರ್ ಬಿಗ್ ಮಾಂಗ್ ಟೀಕಾಗಳು ಇದೀಗ ಹೊಸ ಎಲ್ಲಾ ವರ್ಗದ ಮಾನಿನಿಯರ ಹಣೆಯನ್ನು ಅಲಂಕರಿಸುತ್ತಿವೆ. ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುತ್ತಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ವೆಡ್ಡಿಂಗ್ ಫ್ಯಾಷನ್‌ನಲ್ಲಿದ್ದ ಡಿಸೈನರ್ ಬಿಗ್ ಮಾಂಗ್ ಟೀಕಾಗಳು ಇದೀಗ ಯುವತಿಯರನ್ನು ಹಾಗೂ ಎಲ್ಲಾ ವರ್ಗದ ಮಾನಿನಿಯರ ಹಣೆಯನ್ನು ಸಿಂಗರಿಸುತ್ತಿವೆ.
ಟ್ರೆಂಡಿಯಾಗಿರುವ ಡಿಸೈನರ್ ಬಿಗ್ ಮಾಂಗ್ ಟೀಕಾಗಳು
ಡಿಸೈನರ್ ಉಡುಪಿಗೆ ತಕ್ಕಂತೆ ಹೊಂದುವ ಸ್ಟೇಟ್ಮೆಂಟ್ ಮಾಂಗ್ ಟೀಕಾಗಳು, ಹಣೆಯನ್ನು ಸಿಂಗರಿಸುವ ಕುಂದನ್ನ ಬೈತಲೆ ಬೊಟ್ಟು, ಗುಂಡು ಗುಂಡಾಗಿರುವ ಬೋರಾ ಮಾಂಗ್ ಟೀಕಾಗಳು ಸೇರಿದಂತೆ ನಾನಾ ಬಗೆಯ ಡಿಸೈನರ್ ಮಾಂಗ್ ಟೀಕಾಗಳು ಜ್ಯುವೆಲ್ ಫ್ಯಾಷನ್ ಲಿಸ್ಟ್‌ಗೆ ಸೇರಿವೆ.
ವೆರೈಟಿ ಮೆಟಲ್ & ವಿನ್ಯಾಸದಲ್ಲಿ ಮಾಂಗ್ ಟೀಕಾಗಳು
ಡಿಸೈನರ್ ಮಾಂಗ್ ಟೀಕಾಗಳು ಬಗೆಬಗೆಯ ಲೋಹದಲ್ಲೂ ಲಭ್ಯ. ಉದಾಹರಣೆಗೆ., ವೈಟ್ ಮೆಟಲ್, ಬ್ಲಾಕ್ ಮೆಟಲ್, ಕ್ರಿಸ್ಟಲ್ಸ್, ಸ್ಟೋನ್ಸ್, ರೂಬಿ, ಜೇಡ ಸೇರಿದಂತೆ ನಾನಾ ಮೆಟಲ್ ಹಾಗೂ ಡಿಸೈನ್‌ಗಳಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಡಿಸೈನರ್‌ಗಳು.
ಯಾರಿಗೆ ಯಾವುದು?
ಉದ್ದ ಮುಖದವರು ಆದಷ್ಟು ಮುಂಭಾಗದಲ್ಲಿಅಗಲ ವಿನ್ಯಾಸವಿರುವಂತದ್ಧನ್ನು ಆಯ್ಕೆ ಮಾಡಿಕೊಳ್ಳಬಹುದು. ಇನ್ನು, ಅಗಲ ಮುಖದವರು ತೆಳುವಾದ ಲೈನ್‌ನಂತಿರುವ ಹರಳಿನ ಬಿಗ್ ಮಾಂಗ್ ಟೀಕಾ ಧರಿಸಿದರೇ ಚೆನ್ನಾಗಿ ಕಾಣುತ್ತದೆ. ಟ್ರೆಂಡಿಯಾಗಿ ಕಾಣಿಸಲು ಕುಂದನ್‌ನದ್ದನ್ನು ಹಾಕಬಹುದು. ಟ್ರೆಡಿಷನಲ್ ಲುಕ್ಗಾಗಿ ಆಂಟಿಕ್ ಡಿಸೈನ್‌ನವನ್ನು ಧರಿಸಬಹುದು ಎಂದು ಸಲಹೆ ನೀಡುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ರಿಚಾ.
ಡಿಸೈನರ್ ಮಾಂಗ್ಟೀಕಾ ಸ್ಟೈಲಿಂಗ್ ಹೀಗಿರಲಿ
- ಮಾಂಗ್ ಟೀಕಾ/ಬೈತಲೆ ಬೊಟ್ಟು ಧರಿಸಿದವರು ಆದಷ್ಟು ಟ್ರೆಡಿಷನಲ್ ಲುಕ್‌ಗೆ ಸೈ ಎನ್ನಬೇಕು.
- ಸರ್ವಾಲಂಕಾರ ಆದ ನಂತರ ಮಾಂಗ್ಟೀಕಾ ಧರಿಸಿದರೇ ಉತ್ತಮ.
- ಹಣೆಯ ಮೇಲೆ ಸರಿಯಾಗಿ ಹಾಕಿ. ಇದಕ್ಕಾಗಿ ಏರ್ಪಿನ್ ಬಳಸಬಹುದು.
- ಕೂದಲು ಉದುರುವವರು ಬಳಸದಿದ್ದರೇ ಉತ್ತಮ.
- ಬ್ಲಾಕ್-ವೈಟ್ ಮೆಟಲ್‌ನದ್ದು ಇಂಡೋ-ವೆಸ್ಟರ್ನ್ ಫ್ಯಾಷನ್‌ವೇರ್‌ಗೆ ಧರಿಸಬಹುದು.
- ಗ್ರ್ಯಾಂಡ್ ಲುಕ್ ನಿಮ್ಮದಾಗಬೇಕಿದ್ದಲ್ಲಿ ಕುಂದನ್ ಹಾಗೂ ಕಲಾಂಕಾರಿಯ ಮಾಂಗ್ಟೀಕಾ ಆಯ್ಕೆ ಮಾಡಿ, ಧರಿಸಿ.