ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Jewel Fashion 2026: ಜೆಮೆಟ್ರಿಕ್ ಡಿಸೈನ್ ಜ್ಯುವೆಲರಿಗಳ ಜಾದೂ

ಫಂಕಿ ಲುಕ್ ನೀಡುವ ಜೆಮೆಟ್ರಿಕ್ ಜ್ಯುವೆಲರಿಗಳು ಇಂದು ನಾನಾ ಡಿಸೈನ್‌ಗಳಲ್ಲಿ ಆಗಮಿಸಿದ್ದು, ಕಾಲೇಜು ಹುಡುಗಿಯರನ್ನು ಆಕರ್ಷಿಸಿವೆ. ಈ ವಿನೂತನ ಜೆಮೆಟ್ರಿಕ್ ಕಾನ್ಸೆಪ್ಟ್ ಇದೀಗ ಆಕ್ಸೇಸರೀಸ್‌ಗಳಿಗೂ ಕಾಲಿಟ್ಟಿದ್ದು, ವೃತ್ತಾಕಾರ ಮಾತ್ರವಲ್ಲದೇ, ತ್ರಿಭುಜ, ಚೌಕ, ಆಯತ, ವಜ್ರಾಕೃತಿ, ಷಟ್ಬುಜ ಸೇರಿದಂತೆ ನಾನಾ ಚಿತ್ರ ವಿಚಿತ್ರ ಶೈಲಿಯವು ಟ್ರೆಂಡಿಯಾಗಿವೆ. ಈ ಕುರಿತ ವಿವರ ಇಲ್ಲಿದೆ.

ಜೆಮೆಟ್ರಿಕ್ ಜ್ಯುವೆಲರಿಗಳು (ಚಿತ್ರಕೃಪೆ: ಪಿಕ್ಸೆಲ್)
1/5

ಫಂಕಿ ಲುಕ್ ನೀಡುವ ಜೆಮೆಟ್ರಿಕ್ ಜ್ಯುವೆಲರಿಗಳು ಇಂದು ಕಾಲೇಜು ಹುಡುಗಿಯರನ್ನು ಆಕರ್ಷಿಸಿವೆ. ಈ ವಿನೂತನ ಜೆಮೆಟ್ರಿಕ್ ಕಾನ್ಸೆಪ್ಟ್ ಇದೀಗ ಆಕ್ಸೇಸರೀಸ್‌ಗಳಿಗೂ ಕಾಲಿಟ್ಟಿದ್ದು, ವೃತ್ತಾಕಾರ ಮಾತ್ರವಲ್ಲದೇ, ತ್ರಿಭುಜ, ಚೌಕ, ಆಯತ, ವಜ್ರಾಕೃತಿ, ಷಟ್ಬುಜ ಸೇರಿದಂತೆ ನಾನಾ ಚಿತ್ರ ವಿಚಿತ್ರ ಶೈಲಿಯವು ಟ್ರೆಂಡಿಯಾಗಿವೆ.

2/5

ಫಂಕಿ ಲುಕ್ ನೀಡುವ ಇಯರಿಂಗ್ಸ್

ಫಂಕಿ ಲುಕ್ ನೀಡುವ ಈ ಜೆಮೆಟ್ರಿಕ್ ರೂಪದ ಇಯರಿಂಗ್ಸ್‌ನಲ್ಲಿ ಹ್ಯಾಂಗಿಂಗ್ಸ್, ಬಿಗ್ಸ್ಟಡ್ಸ್, ರಿಂಗಿನ ಆಕೃತಿಗಳು, ಶೋಲ್ಡರ್ ಲೆಂತ್‌ ಕಿವಿಯೊಲೆಗಳು ಹೆಚ್ಚು ಪಾಪುಲರ್ ಆಗಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಸೆಲೆಬ್ರೆಟಿಗಳು ಇವನ್ನು ಧರಿಸುತ್ತಿರುವುದು ಪಾಪುಲರ್ ಆಗಲು ಕಾರಣ ಎನ್ನುತ್ತಾರೆ ಫಂಕಿ ಜ್ಯುವೆಲರಿ ಮಾರಾಟಗಾರರು. ಅವರ ಪ್ರಕಾರ, ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವುದರಿಂದ ಇವು ಹೆಚ್ಚು ಪಾಪುಲರ್‌ ಆಗಿವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ರಜತ್.

3/5

ನವ ವಿನ್ಯಾಸದ ಪೆಂಡೆಂಟ್ಸ್

ಕತ್ತನ್ನು ಸುತ್ತುವರೆದ ತೆಳ್ಳನೆಯ ಸರಕ್ಕೆ ನಾನಾ ಶೇಪ್‌ನ ಜೆಮೆಟ್ರಿಕ್‌ ಸ್ಟೈಲಿಶ್ ಪೆಂಡೆಂಟ್‌ಗಳು ಬಂದಿವೆ. ಈಗಂತೂ ಲೆಕ್ಕವಿಲ್ಲದಷ್ಟೂ ಬಗೆಯ ವಿನೂತನ ಶೈಲಿಯ ಊಹೆಗೂ ಮೀರಿದ ರೇಖಾ ಚಿತ್ರಗಳ ಪೆಂಡೆಂಟ್‌ಗಳು ಆಕ್ಸೆಸರೀಸ್ ಲೋಕದಲ್ಲಿ ಕಾಲಿಟ್ಟಿವೆ.

4/5

ವಿಚಿತ್ರಾಕಾರದ ಬಳೆ /ಕಡಗ/ ಬ್ರೇಸ್ಲೇಟ್ ‌

ಕೈಗಳಿಗೆ ಟ್ರಯಾಂಗಲ್, ಆಫ್‌ಸರ್ಕಲ್, ರೆಕ್ಟಾಂಗಲ್ ಸೇರಿದಂತೆ ವಿವಿಧಾಕಾರದ ಬಳೆ ಇಲ್ಲವೇ ಕಡಗ ಶೈಲಿಯವು ಈ ಸೀಸನ್‌ನ ಜೆಮೆಟ್ರಿಕಲ್ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಚಿತ್ರ ವಿಚಿತ್ರ ಬ್ರೇಸ್ಲೇಟ್‌ಗಳನ್ನು ಕೂಡ ಕಾಣಬಹುದು.

5/5

ಜೆಮೆಟ್ರಿಕ್ ಜ್ಯುವೆಲರಿ ಟಿಪ್ಸ್

  • ಕೊಳ್ಳುವ ಮುನ್ನ ಅವುಗಳ ಫಿನಿಶಿಂಗ್‌ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ.
  • ಇವು ಪಾಶ್ಚಿಮಾತ್ಯ ಶೈಲಿಯ ಕ್ಯಾಶುವಲ್‌ ಡ್ರೆಸ್‌ಗಳಿಗೆ ಮ್ಯಾಚ್ ಆಗುತ್ತವೆ.
  • ಅಲರ್ಜಿಯಾದಲ್ಲಿ ಧರಿಸಬೇಡಿ.

ಶೀಲಾ ಸಿ ಶೆಟ್ಟಿ

View all posts by this author