Jewel Fashion 2026: ಗ್ರ್ಯಾಂಡ್ ಲುಕ್‌ಗೆ ಬಂತು ಮಲ್ಟಿ ಲೇಯರ್ಡ್ ನೆಕ್ಲೇಸ್
Multi Layered Necklaces: ಶ್ರಾವಣ ಮಾಸದ ಜ್ಯುವೆಲ್ ಟ್ರೆಂಡ್‌ನಲ್ಲಿ ಮಲ್ಟಿ ಲೇಯರ್ಡ್ ನೆಕ್ಲೇಸ್‌ಗಳು ಟ್ರೆಂಡಿಯಾಗಿವೆ. ಹಬ್ಬ ಹಾಗೂ ಮದುವೆ ಸಮಾರಂಭಗಳಲ್ಲಿ ಧರಿಸಿದಾಗ ಗ್ರ್ಯಾಂಡ್ ಲುಕ್ ನೀಡುವ ಈ ನೆಕ್ಲೇಸ್‌ಗಳು ಮಾನಿನಿಯರ ಕುತ್ತಿಗೆಯನ್ನು ಅಲಂಕರಿಸುತ್ತಿವೆ. ಯಾವ್ಯಾವ ಡಿಸೈನ್‌ಗಳು ಪ್ರಚಲಿತದಲ್ಲಿವೆ? ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಶ್ರಾವಣ ಮಾಸದ ಜ್ಯುವೆಲ್ ಟ್ರೆಂಡ್‌ನಲ್ಲಿ ಮಲ್ಟಿ ಲೇಯರ್ಡ್ ನೆಕ್ಲೇಸ್‌ಗಳು ಟ್ರೆಂಡಿಯಾಗಿವೆ. ಹಬ್ಬ ಹಾಗೂ ಮದುವೆ ಸಮಾರಂಭಗಳಲ್ಲಿ ಧರಿಸಿದಾಗ ಗ್ರ್ಯಾಂಡ್ ಲುಕ್ ನೀಡುವ ಈ ನೆಕ್ಲೇಸ್‌ಗಳು ಮಾನಿನಿಯರ ಕುತ್ತಿಗೆಯನ್ನು ಅಲಂಕರಿಸುತ್ತಿವೆ.
ಟ್ರೆಂಡಿಯಾಗಿರುವ ಲೇಯರ್ಡ್ ನೆಕ್ಲೇಸ್‌ಗಳಿವು
ನಾಲ್ಕೈದು ಎಳೆಯ ಸ್ಟೋನ್ಸ್ ಹೊಂದಿದ ನೆಕ್ಲೇಸ್, ಮೋಹನ ಮಾಲೆ, ಮುತ್ತಿನ ಮಾಲೆ, ಸರಪಳಿಯಂತಹ ಲೇಯರ್ ಚೈನ್. ಮಧ್ಯೆ ಮಧ್ಯೆ ಆ್ಯಂಟಿಕ್ ವಿನ್ಯಾಸದವು, ಸೈಡ್ ಪೆಂಡೆಂಟ್ ಇರುವಂತವು ಹೀಗೆ ನಾನಾ ವಿನ್ಯಾಸದ ಮಲ್ಟಿ ಲೇಯರ್ಡ್ ನೆಕ್ಲೇಸ್‌ಗಳು ಈ ಸೀಸನ್‌ನಲ್ಲಿ ಆಭರಣ ಲೋಕಕ್ಕೆ ಎಂಟ್ರಿ ನೀಡಿವೆ.
ಬಂಗಾರ-ವಜ್ರದಲ್ಲೂ ಟ್ರೆಂಡಿಯಾದ ಲೇಯರ್ಡ್ ನೆಕ್ಲೇಸ್
ಇಂದು ಜ್ಯುವೆಲರಿ ಲೋಕದಲ್ಲಿ ಮಿಕ್ಸ್ ಮ್ಯಾಚ್ ಡಿಸೈನ್‌ನ ಲೇಯರ್ಡ್ ಕಾನ್ಸೆಪ್ಟ್ ಮೊದಲಿಗಿಂತ ಹೆಚ್ಚಾಗಿದೆ ಎನ್ನುವ ಜ್ಯುವೆಲ್ಡಿಸೈನರ್ ರಾಘವ್ ಪ್ರಕಾರ, ಬ್ರ್ಯಾಂಡೆಡ್ ಜ್ಯುವೆಲರಿ ಸಂಸ್ಥೆಗಳು ಈ ಶೈಲಿಯ ಲೇಯರ್ಡ್ ನೆಕ್ಲೇಸ್‌ಗಳನ್ನು ಬಿಡುಗಡೆ ಮಾಡಿವೆ ಎನ್ನುತ್ತಾರೆ.
ರ‍್ಯಾಂಪ್‌ನಲ್ಲಿ ಲೇಯರ್ಡ್ ನೆಕ್ಲೇಸ್ ಪ್ರದರ್ಶನ
ಅಂದಹಾಗೆ, ಲೇಯರ್ಡ್ ಹಾರಗಳು ಟ್ರೆಂಡಿಯಾಗಲು ಕಾರಣ, ಬ್ರೈಡಲ್‌ವೇರ್ ಫ್ಯಾಷನ್ ಶೋಗಳು ಎಂದರೇ ಅತಿಶಯೋಕ್ತಿಯಾಗದು. ಮಾಡೆಲ್‌ಗಳು ಹಾಗೂ ಸಿನಿಮಾ ತಾರೆಯರು ವೈಭವಯುತ ಸಮಾರಂಭಗಳಿಗೆ ಈ ಡಿಸೈನ್‌ನ ಆಭರಣಗಳನ್ನು ಧರಿಸತೊಡಗಿರುವುದು ಕೂಡ ಈ ಟ್ರೆಂಡ್ ಪಾಪ್ಯುಲರ್ ಆಗಲು ಕಾರಣವಾಗಿದೆ ಎನ್ನುತ್ತಾರೆ ವಿನ್ಯಾಸಕರು.
ಗ್ರ್ಯಾಂಡ್ ಲುಕ್‌ಗೆ ಸಹಕಾರಿ
ಮಲ್ಟಿ ಲೇಯರ್ಡ್ ನೆಕ್ಲೇಸ್‌ಗಳು ಗ್ರ್ಯಾಂಡ್ ಲುಕ್‌ಗೆ ಸಹಕಾರಿ. ಟ್ರೆಡಿಷನಲ್ ಉಡುಪುಗಳಾದ ಸೀರೆ, ಲೆಹೆಂಗಾ, ಗಾಗ್ರ, ಲಾಚಾಗಳಿಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತವೆ. ಗ್ರ್ಯಾಂಡ್ ಲುಕ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಮಲ್ಟಿ ಲೇಯರ್ಡ್ ಜ್ಯುವೆಲರಿ ಪ್ರಿಯರಿಗೆ ಸಲಹೆ
- ಲೇಯರ್‌ಗಳು ಒಂದರ ಮೇಲೊಂದು ಇರುವ ಬದಲು ಒಂದಕ್ಕೊಂದು ಕೊಂಚ ಗ್ಯಾಪ್ ಇರುವಂತದ್ದನ್ನು ಆಯ್ಕೆ ಮಾಡಬೇಕು.
- ಹೇರ್‌ಸ್ಟೈಲ್ ಹಾಗೂ ಮೇಕಪ್ ನಂತರ ಲೇಯರ್ಡ್ ಹಾರ ಅಥವಾ ನೆಕ್ಲೇಸ್ ದರಿಸಬೇಕು.
- ಒಂದು ಆಭರಣದ ಮೇಲೊಂದು ಓವರ್ ಲ್ಯಾಪ್ ಆಗಬಾರದು.