ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Jewel Fashion 2026: ಜೆನ್ ಜಿ ದೇಸಿ ಲುಕ್‌ಗೆ ಎಂಟ್ರಿ ಕೊಟ್ಟ ಪ್ರೆಸ್ ಆನ್ ಮೂಗುತಿಗಳು

ಮುಂಬರುವ ಹಬ್ಬದ ಸೀಸನ್‌ಗೆ ಜೆನ್ ಜಿ ಹುಡುಗಿಯರ ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುವಂತಹ ಇಮಿಟೇಷನ್ ಪ್ರೆಸ್ ಆನ್ ಮೂಗುತಿಗಳು ಜ್ಯುವೆಲರಿ ಲೋಕಕ್ಕೆ ಲಗ್ಗೆ ಇಟ್ಟಿವೆ. ವಿವಿಧ ವಿನ್ಯಾಸಗಳಲ್ಲಿ ಆಗಮಿಸಿವೆ. ಈ ಕುರಿತಂತೆ ಇಲ್ಲಿದೆ ವರದಿ.

ಚಿತ್ರಕೃಪೆ: ಪಿಕ್ಸೆಲ್
1/5

ಮುಂಬರುವ ನವರಾತ್ರಿಗೆ ಜೆನ್ ಜಿ ಹುಡುಗಿಯರ ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುವಂತಹ ಪ್ರೆಸ್ ಆನ್ ಮೂಗುತಿಗಳು ಜ್ಯುವೆಲರಿ ಲೋಕಕ್ಕೆ ಕಾಲಿಟ್ಟಿವೆ.

2/5

ಜೆನ್ ಜಿ ಹುಡುಗಿಯರ ಪ್ರೆಸ್ ಆನ್ ಮೂಗುತಿಗಳ ಲವ್

ಜೆನ್ ಜಿ ಯುವತಿಯರು ಮೂಗು ಚುಚ್ಚಿಸದಿದ್ದರೇ ಏನಂತೆ, ಸೀರೆ, ಲಂಗ-ದಾವಣಿ, ಸಲ್ವಾರ್, ಹಾಫ್ ಸೀರೆ, ಲೆಹೆಂಗಾ ಧರಿಸಿದಾಗ ಈ ಪ್ರೆಸ್ ಆನ್ ಮೂಗುತಿಗಳನ್ನು ಇತರೇ ಜ್ಯುವೆಲರಿಗಳೊಂದಿಗೆ ಧರಿಸಿದಲ್ಲಿ ಟ್ರೆಡಿಷನಲ್ ಲುಕ್ ಪಡೆಯಬಹುದು. ಈ ಹಿನ್ನೆಲೆಯಲ್ಲಿ ಇವನ್ನು ಕೊಳ್ಳುವವರ ಸಂಖ್ಯೆಯಲ್ಲಿ ಜೆನ್ ಜಿ ಹುಡುಗಿಯರ ಸಂಖ್ಯೆಯೇ ಹೆಚ್ಚಾಗಿದೆ ಎನ್ನುತ್ತಾರೆ ಜ್ಯುವೆಲರಿ ಸ್ಟೈಲಿಸ್ಟ್ ರಾಜನ್.

3/5

ಟ್ರೆಂಡಿಯಾಗಿರುವ ಪ್ರೆಸ್ ಆನ್ ಮೂಗುತಿಗಳು

ಟ್ರೆಡಿಷನಲ್ ಲುಕ್‌ನಲ್ಲಿ ತ್ರಿಶೂಲ, ರಂಗೋಲಿ ಚಿತ್ತಾರ, ಶಂಖ-ಚಕ್ರ, ಕೊಳಲು, ಮಹಾರಾಷ್ಟ್ರೀಯನ್ ಶೈಲಿಯ ಮುತ್ತಿನ ಮೂಗಿನ ರಿಂಗ್, ಪ್ರಿಶಿಯಸ್ ಸ್ಟೋನ್ಸ್ ಇರುವಂತಹ ಕಾಸಗಲದ್ದು, ಎನಮೆಲ್ ಪೇಂಟ್ ಇರುವಂತಹ ಆಂಟಿಕ್ ವಿನ್ಯಾಸದವು, ಕಾಸಗಲದವು, ಏಳು, ಒಂಭತ್ತು ಹಾಗೂ ಹನ್ನೊಂದು ಕಲ್ಲಿನ ಕಿವಿಯೊಲೆಯಂತವು ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಮಾರಾಟಗಾರರು.

4/5

ಜೆನ್ ಜಿ ಚಾಯ್ಸ್‌ನಲ್ಲಿರುವ ಪ್ರೆಸ್ ಆನ್ ಮೂಗುತಿಗಳಿವು

ಕಮಲ, ಸೂರ್ಯಕಾಂತಿ, ಸೇವಂತಿಗೆ, ಡೇರೆಯಂತಹ ಹೂವಿನ ಎಂಬೋಸಿಂಗ್ ಇರುವಂತವು, ಕುಂದನ್ನಿಂದ ಸಿಂಗರಿಸಲ್ಪಟ್ಟವು, ನವಿಲು, ಪಾರಿವಾಳ, ಗಿಳಿ ಸೇರಿದಂತೆ ನಾನಾ ಹಕ್ಕಿ-ಪಕ್ಷಿಗಳ ಮಿನಿಯೇಚರ್‌ನಂತ ಪ್ರೆಸ್ ಆನ್ ಮೂಗುತಿಗಳು ಬೇಡಿಕೆ ಹೆಚ್ಚಿಸಿಕೊಂಡಿದ್ದು, ಕನಿಷ್ಠ 100 ರೂ.ಗಳಿಂದ ಆರಂಭಗೊಂದು ಸಾವಿರ ರೂ.ಗಳವರೆಗೂ ಬೆಲೆಯನ್ನೊಂದಿವೆ ಎನ್ನುತ್ತಾರೆ ಮಾರಾಟಗಾರರು.

5/5

ಪ್ರೆಸ್ ಆನ್ ಮೂಗುತಿ ಧರಿಸುವವರಿಗೆ ಟಿಪ್ಸ್

  • ಮೇಕಪ್ ಮುಗಿದ ನಂತರ ಇದನ್ನು ಧರಿಸಿ.
  • ನಿಮ್ಮ ಮುಖದ ಆಕಾರಕ್ಕೆ ತಕ್ಕಂತೆ ಮೂಗುತಿ ಸೆಲೆಕ್ಟ್ ಮಾಡಿ.
  • ಮೂಗುತಿಗೆ ಇತರೇ ಜ್ಯುವೆಲರಿಗಳು ಹೊಂದಬೇಕು.
  • ಫಿನಿಶಿಂಗ್ ಇರುವಂತಹ ಪ್ರೆಸ್ ಆನ್ ಮೂಗುತಿಯನ್ನೇ ಖರೀದಿಸಿ.

ಶೀಲಾ ಸಿ ಶೆಟ್ಟಿ

View all posts by this author