Jewel Trend 2025: ದಾಂಡಿಯಾ ಸಂಭ್ರಮಕ್ಕೆ ಬಂತು ವೈವಿಧ್ಯಮಯ ಕುಂದನ್ ಆಭರಣಗಳು
ನವರಾತ್ರಿಯಲ್ಲಿ ನಡೆಯುವ ದಾಂಡಿಯಾ ಸಂಭ್ರಮಕ್ಕೆ ಸಾಥ್ ನೀಡಲು ನಾನಾ ಬಗೆಯ ಕುಂದನ್ ಜ್ಯುವೆಲರಿಗಳು ಬಿಡುಗಡೆಗೊಂಡಿವೆ. ಇದುವರೆಗೂ ಉತ್ತರ ಭಾರತದ ಮಹಿಳೆಯರು ಧರಿಸುತ್ತಿದ್ದ ಕುಂದನ್ ಡಿಸೈನ್ನ ಆಭರಣಗಳು ಇದೀಗ ನಮ್ಮಲ್ಲೂ ಟ್ರೆಂಡಿಯಾಗಿದೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಆಯ್ಕೆ ಹೇಗೆ? ಈ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ.

ಚಿತ್ರಕೃಪೆ: ಪಿಕ್ಸೆಲ್ -


ಕುಂದನ್ ಆಭರಣಗಳ ವಿಶೇಷತೆ
ನವರಾತ್ರಿಯಲ್ಲಿ ನಡೆಯುವ ದಾಂಡಿಯಾ ಸಂಭ್ರಮಕ್ಕೆ ಸಾಥ್ ನೀಡಲು ನಾನಾ ಬಗೆಯ ಕುಂದನ್ ಜ್ಯುವೆಲರಿಗಳು ಬಿಡುಗಡೆಗೊಂಡಿವೆ. ಉತ್ತರ ಭಾರತದಲ್ಲಿ ಪ್ರಚಲಿದಲ್ಲಿರುವ ಈ ಕುಂದನ್ ಡಿಸೈನ್ನ ಆಭರಣಗಳು ಇದೀಗ ನಮ್ಮಲ್ಲೂ ಟ್ರೆಂಡಿಯಾಗತೊಡಗಿವೆ. ತಕ್ಷಣಕ್ಕೆ ನೋಡಿದರೇ ಹರಳಿನ ಸ್ಟಿಕ್ಕರ್ನಂತೆ ಕಾಣುವ ಸರಮಾಲೆ, ಆಯಿಲ್ ರೆಡ್ ಇಲ್ಲವೇ ಗ್ರೀನ್ ಕಲರ್ನ ಬಿಂದಿಯಂತಹ ಲೇಯರ್ನ ಹಾರ, ಕತ್ತನ್ನು ಆವರಿಸಿದ ನಾಲ್ಕೈದು ಎಳೆಯ ನೆಕ್ಲೆಸ್ ಈ ಬಾರಿಯ ಫೆಸ್ಟೀವ್ ಸೀಸನ್ನ ಟ್ರೆಂಡಿ ಜ್ಯುವೆಲ್ ಲಿಸ್ಟ್ಗೆ ಸೇರಿವೆ. ನೂರಾರು ವಿನ್ಯಾಸಗಳಲ್ಲಿ ಕುಂದನ್ ಬಿಗ್ ನೆಕ್ಲೆಸ್ ಹಾಗೂ ಹಾರಗಳು ಈಗಾಗಲೇ ಬಿಡುಗಡೆಗೊಂಡು ಎಲ್ಲರ ಮನಸೂರೆಗೊಳ್ಳುತ್ತಿವೆ.

ಅತ್ಯಾಕರ್ಷಕ ಲುಕ್ ಕುಂದನ್ ಜ್ಯುವೆಲರಿಗಳು
ಮೂರ್ನಾಲ್ಕು ಸೆಟ್ ಆಭರಣಗಳ ಜಾಗವನ್ನು ಈ ಕುಂದನ್ ಸೆಟ್ ಧರಿಸಿದರೇ ಸಾಕು ಕತ್ತನ್ನು ಆವರಿಸಿಕೊಳ್ಳುತ್ತವೆ. ಗ್ರ್ಯಾಂಡ್ ಲುಕ್ಗೆ ನಾಂದಿ ಹಾಡುತ್ತವೆ. ಫ್ಯಾಷನ್ ಡಿಸೈನರ್ ರಿಯಾ. ಅವರ ಪ್ರಕಾರ, ಕಣ್ಮನ ಸೆಳೆಯುವ ಈ ಕುಂದನ್ ಆಭರಣಗಳು ಇಂದಿನ ಡ್ರೆಸ್ಸಿಂಗ್ ಸೆನ್ಸ್ ಹಾಗೂ ಲೈಫ್ಸ್ಟೈಲ್ಗೆ ತಕ್ಕಂತೆ ವಿನ್ಯಾಸಗೊಳ್ಳುತ್ತಿವೆ. ಪ್ರತಿ ಉಡುಪಿಗೂ ಹೊಂದುವಂತೆ ಧರಿಸಬಹುದಂತೆ.

ಉತ್ತರದಿಂದ ದಕ್ಷಿಣಕ್ಕೆ ಕಾಲಿಟ್ಟ ಆಭರಣಗಳು
ಮೊದಲೆಲ್ಲ ಈ ಆಭರಣಗಳು ಕೇವಲ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತದಲ್ಲಿದ್ದವು. ಕುಂದನ್ ವಿನ್ಯಾಸದ ಡಿಸೈನರ್ ಜ್ಯುವೆಲ್ ಇಲ್ಲದೇ ಅಲ್ಲಿನ ಮದುಮಗಳ ಸಿಂಗಾರ ಕೊನೆಗೊಳ್ಳುತ್ತಿರಲಿಲ್ಲ. ಫ್ಯಾಷನ್ ಲೋಕ ಕುಂದನ್ ಡಿಸೈನ್ಸ್ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಪ್ರಚಾರ ಕೊಟ್ಟಿತು. ಬರಬರುತ್ತಾ ಕುಂದನ್ ಸೆಟ್ಗಳು ಬಾಲಿವುಡ್ ಸಿನಿಮಾಗಳ ಮೂಲಕ ಹೆಸರು ಮಾಡಿದವು. ಇದೀಗ ದಕ್ಷಿಣ ಭಾರತದ ಮಹಿಳೆಯರು ಕೂಡ ಇವುಗಳತ್ತ ವಾಲತೊಡಗಿದ್ದಾರೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ದಾಮಿನಿ.

ಗ್ರ್ಯಾಂಡ್ ಲುಕ್ಗೆ ಕುಂದನ್ ಆಭರಣಗಳು
ಮಾಡೆಲ್ ದೀಪ್ತಿ ಹೇಳುವಂತೆ, ಈ ಆಭರಣಗಳನ್ನು ಗ್ರ್ಯಾಂಡ್ ಫಂಕ್ಷನ್ಗಳಲ್ಲಿ ಧರಿಸಬಹುದು. ಟಿಪಿಕಲ್ ಸಲ್ವಾರ್, ಗಾಗ್ರ, ಲೆಹೆಂಗಾಗೆ ಮ್ಯಾಚ್ ಆಗುವಂತೆ ಧರಿಸಬಹುದು.

ಕುಂದನ್ ಆಭರಣಗಳ ಆಯ್ಕೆ ಹೀಗಿರಲಿ
- ಕುಂದನ್ ಆಭರಣಗಳ ಫಿನಿಶಿಂಗ್ ನೋಡಿ ಖರೀದಿಸಿ.
- ಹರಳುಗಳ ಜೋಡಣೆ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.
- ಉಡುಪಿನ ಬಣ್ಣಕ್ಕೆ ತಕ್ಕಂತೆ ಮ್ಯಾಚ್ ಮಾಡಿ.
- ನವರಾತ್ರಿ ಹಾಗೂ ದಸರಾ ಹಬ್ಬದ ಸೀಸನ್ಗೆ ಬೆಸ್ಟ್ ಫ್ಯಾಷನ್ ಆಕ್ಸೆಸರೀಸ್.