ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kangna Sharma: ಡೀಪ್‌ ನೆಕ್‌ ಬಟ್ಟೆ ಧರಿಸಿ ಬೋಲ್ಡ್‌ ಆಗಿ ಕಾಣಿಸಿಕೊಂಡ ನಟಿ ಕಂಗನಾ ಶರ್ಮಾ

ʼಗ್ರೇಟ್ ಗ್ರ್ಯಾಂಡ್ ಮಸ್ತಿʼ ಖ್ಯಾತಿಯ ನಟಿ ಕಂಗನಾ ಶರ್ಮಾ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಫ್ಯಾನ್ ಫಾಲೋವರ್ಸ್ ಹೊಂದಿರುವ ಇವರು ಈ ಭಾರಿ ಮುಂಬೈಯ ಬಾಂದ್ರಾದಲ್ಲಿ ಬೋಲ್ಡ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

Kangna Sharma
1/5

ಹರಿಯಾಣ ಮೂಲದ ನಟಿ ಕಂಗನಾ ಶರ್ಮಾ ಸದಾ ಫ್ಯಾಷನ್ ಸೆನ್ಸ್ ಮೂಲಕ ಸುದ್ದಿಯಲ್ಲಿರುತ್ತಾರೆ. ಸದ್ಯ ಮುಂಬೈಯ ಬಾಂದ್ರಾದಲ್ಲಿ ಆಕರ್ಷಕ ಉಡುಪಿನಲ್ಲಿ ಕಾಣಿಸಿಕೊಂಡ ಇವರು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅವರು ಧರಿಸಿದ್ದ ಬ್ರಾಲೆಟ್ ಮತ್ತು ಮ್ಯಾಚಿಂಗ್ ಸ್ಕರ್ಟ್ ಸಖತ್ ಟ್ರೆಂಡಿಯಾಗಿತ್ತು.

2/5

ಇತ್ತೀಚೆಗೆ ಅವರು ಧರಿಸಿದ ಫಿಟ್ ಬ್ರಾಲೆಟ್ ಮತ್ತು ಸ್ಕರ್ಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಈ ಸೆಕ್ಸಿ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ.

3/5

ಹರಿಯಾಣದಲ್ಲಿ ಜನಿಸಿದ ಕಂಗನಾ ಶರ್ಮಾ, ಆರಂಭದಲ್ಲಿ ಭಾರತೀಯ ಸೇನೆಗೆ ಸೇರುವ ಕನಸು ಹೊಂದಿದ್ದರು. ಆದರೆ 2014ರಲ್ಲಿ ನಡೆದ ಮಿಸ್ ಮ್ಯಾಕ್ಸಿಮ್ ಸ್ಪರ್ಧೆಯಲ್ಲಿ ಅವರು ಮೊದಲ ರನ್ನರ್-ಅಪ್ ಆಗಿ ಗೆದ್ದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದರು.

4/5

2016ರಲ್ಲಿ ತೆರೆಕಂಡ 'ಗ್ರೇಟ್ ಗ್ರ್ಯಾಂಡ್ ಮಸ್ತಿ' ಚಿತ್ರದ ಮೂಲಕ ಕಂಗನಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ರಿತೇಶ್ ದೇಶಮುಖ್, ವಿವೇಕ್ ಒಬೆರಾಯ್ ಮತ್ತು ಅಫ್ತಾಬ್ ಶಿವದಾಸನಿ ಅವರಂತಹ ಕಲಾವಿದರೊಂದಿಗೆ ನಟಿಸಿದ್ದರು.

5/5

ಕಂಗನಾ 'ರಾಮ್ ರತನ್'‌ ಮತ್ತು 'ಯೂಸ್ಡ್'ನಂತಹ ಚಿತ್ರಗಳಲ್ಲಿ, ಹಾಗೆಯೇ ಪಂಜಾಬಿ ಚಲನಚಿತ್ರ 'ದುಲ್ಲಾ ಭಟ್ಟಿ'ಯಲ್ಲಿ ನಟಿಸಿದ್ದಾರೆ. ಅವರು 'ತು ಸೂರಜ್ ಮೇ ಸಾಂಜ್ ಪಿಯಾಜಿ' ಮತ್ತು 'ಮಂಗಳ ಭುವನ್' ಎಂಬ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ.