ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karisma Kapoor: ಅಜ್ಜನೊಂದಿಗೆ ನೃತ್ಯ ಮಾಡಿದ ಕರಿಷ್ಮಾ ಕಪೂರ್ ಚಿತ್ರ ವೈರಲ್

ಅಂತಾರಾಷ್ಟ್ರೀಯ ನೃತ್ಯ ದಿನವಾದ ಏಪ್ರಿಲ್ 29ರಂದು ಬಾಲಿವುಡ್‌ ನಟಿ ಕರಿಷ್ಮಾ ಕಪೂರ್ ಬಾಲ್ಯದಲ್ಲಿ ಅಜ್ಜ ರಾಜ್ ಕಪೂರ್ ಅವರೊಂದಿಗೆ ನೃತ್ಯ ಮಾಡುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಇದಕ್ಕೆ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

1/7

ಅಂತಾರಾಷ್ಟ್ರೀಯ ನೃತ್ಯ ದಿನವಾದ ಏಪ್ರಿಲ್ 29ರಂದು ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರು ತಮ್ಮ ಬಾಲ್ಯದ ಚಿತ್ರವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇದು ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಇದಕ್ಕೆ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

2/7

ಅಂತಾರಾಷ್ಟ್ರೀಯ ನೃತ್ಯ ದಿನದಂದು ಕರಿಷ್ಮಾ ಕಪೂರ್ ತನ್ನ ಅಜ್ಜ ರಾಜ್ ಕಪೂರ್ ಅವರೊಂದಿಗೆ ನೃತ್ಯ ಮಾಡುತ್ತಿರುವ ಹೃದಯಸ್ಪರ್ಶಿ ಫೋಟೋ ಅನೇಕರ ಹೃದಯವನ್ನು ಗೆದ್ದಿದೆ. ಇವರು ತಮ್ಮ ಮೊದಲ ನೃತ್ಯ ಸಂಗಾತಿ ಎಂದು ಹೇಳುವ ಮೂಲಕ ಅವರು ತಮ್ಮ ಅಜ್ಜ ರಾಜ್ ಕಪೂರ್ ಅವರಿಗೆ ಗೌರವ ಸಲ್ಲಿಸಿದರು.

3/7

ಕರಿಷ್ಮಾ ಕಪೂರ್‌ ತಮ್ಮ ಬಾಲ್ಯದ ಅಮೂಲ್ಯವಾದ ಕಪ್ಪು-ಬಿಳುಪಿನ ಚಿತ್ರ ಹಂಚಿಕೊಂಡ ತಕ್ಷಣವೇ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಕರಿಷ್ಮಾ ಅವರು ರಾಜ್ ಕಪೂರ್ ಕೈಗಳನ್ನು ಹಿಡಿದು ನಗುತ್ತಿರುವುದನ್ನು ಕಾಣಬಹುದು. ಸ್ಕರ್ಟ್ ಮತ್ತು ಟಾಪ್ ಧರಿಸಿರುವ ಕರಿಷ್ಮಾ 'ಬಾಲಿವುಡ್‌ನ ಶೋಮ್ಯಾನ್' ಎಂದೇ ಪ್ರೀತಿಯಿಂದ ಕರೆಯಲ್ಪಡುವ ರಾಜ್ ಕಪೂರ್ ಅವರೊಂದಿಗೆ ನೃತ್ಯ ಮಾಡುತ್ತಾ ಸಂತೋಷವನ್ನು ವ್ಯಕ್ತಪಡಿಸುವುದನ್ನು ಕಾಣಬಹುದು.

4/7

ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡ ಕರಿಷ್ಮಾ, ಅಂತಾರಾಷ್ಟ್ರೀಯ ನೃತ್ಯ ದಿನದ ಸಂದರ್ಭದಲ್ಲಿ ನನ್ನ ಮೊದಲ ಅಧಿಕೃತ ನೃತ್ಯವನ್ನು ಹಂಚಿಕೊಳ್ಳುತ್ತಿದ್ದೇನೆ. ಇದಕ್ಕಿಂತ ಉತ್ತಮ ನೃತ್ಯ ಸಂಗಾತಿಯನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಬರೆದಿದ್ದಾರೆ. ಈ ಪೋಸ್ಟ್ ಗೆ ಅವರ ಸಾಕಷ್ಟು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

5/7

ಕರಿಷ್ಮಾ ಕಪೂರ್ ಹಂಚಿಕೊಂಡಿರುವ ಚಿತ್ರಕ್ಕೆ ಸಹೋದರಿ ಕರೀನಾ ಕಪೂರ್ ಖಾನ್ ಕೂಡ ಪ್ರತಿಕ್ರಿಯಿಸಿದ್ದು, "ಇದು ಕೇವಲ ಪ್ರೀತಿ" ಎಂಬ ಶೀರ್ಷಿಕೆಯೊಂದಿಗೆ ಮರುಹಂಚಿಕೊಂಡಿದ್ದಾರೆ. ಇವರ ಈ ಪೋಸ್ಟ್ ಬಹುಬೇಗನೆ ಇತರ ಸೆಲೆಬ್ರಿಟಿಗಳ ಗಮನ ಸೆಳೆಯಿತು. ಇದಕ್ಕೆ ರಿದಿಮಾ ಕಪೂರ್ ಸಾಹ್ನಿ ಮತ್ತು ಸಂಜಯ್ ಕಪೂರ್ ಅವರು ಹೃದಯದ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಸೋಫಿ ಚೌಧರಿ ಎಂತಹ ಅದ್ಭುತ ಚಿತ್ರ ಎಂದು ಹೇಳಿದ್ದಾರೆ.

6/7

1988ರಲ್ಲಿ ನಿಧನರಾದ ರಾಜ್ ಕಪೂರ್ ಭಾರತೀಯ ಚಿತ್ರರಂಗದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ನಟಿಸಿರುವ ʼಆವಾರಾʼ, ʼಬರ್ಸಾತ್ʼ, ʼಅನಾರಿʼ ʼಸಂಗಮ್‌ʼ, ʼಮೇರಾ ನಾಮ್ ಜೋಕರ್ʼ, ʼಬಾಬಿʼ ಮತ್ತು ʼರಾಮ್ ತೇರಿ ಗಂಗಾ ಮೈಲಿʼ ಚಿತ್ರಗಳು ಸಾಕಷ್ಟು ಮೆಚ್ಚುಗೆ ಗಳಿಸಿವೆ. ನಟನಾಗಿ, ನಿರ್ದೇಶಕನಾಗಿ ಇವರು ಚಿತ್ರರಂಗದಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ.

7/7

1990ರ ದಶಕದಲ್ಲಿ ʼರಾಜಾ ಹಿಂದೂಸ್ತಾನಿʼ, ʼಬಿವಿ ನಂ.1ʼ ಮತ್ತು ʼದಿಲ್ ತೋ ಪಾಗಲ್ ಹೈʼ ಮೊದಲಾದ ಹಿಟ್‌ ಚಿತ್ರಗಳಲ್ಲಿ ನಟಿಸಿ ಎಲ್ಲರ ಮನ ಗೆದ್ದಿರುವ ಕರಿಷ್ಮಾ ಕಪೂರ್ ತಮ್ಮ ಕುಟುಂಬದ ಪರಂಪರೆಯನ್ನು ಅತ್ಯಂತ ಪ್ರೀತಿಯಿಂದ ಜೀವಂತವಾಗಿರಿಸುತ್ತಿದ್ದಾರೆ. ಇವರು ಕೊನೆಯದಾಗಿ 2024ರಲ್ಲಿ ಬಿಡುಗಡೆಯಾದ ʼಮರ್ಡರ್ ಮುಬಾರಕ್ʼ ವೆಬ್ ಸಿರೀಸ್‌ನಲ್ಲಿ ನಟಿಸಿದ್ದರು.

ವಿದ್ಯಾ ಇರ್ವತ್ತೂರು

View all posts by this author