ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhavya Gowda: ಕರ್ಣನ ನಾಯಕಿ ಭವ್ಯಾ ಗೌಡ ಹೊಸ ಫೋಟೋ ಶೂಟ್: ನಿಟ್ಟುಸಿರು ಬಿಟ್ಟ ಫ್ಯಾನ್ಸ್

ಈ ವಿವಾದದ ಬಳಿಕ ಭವ್ಯಾ ಅವರು ಸೈಲೆಂಟ್ ಆಗಿದ್ದರು. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಯಾವುದೇ ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಂಡಿರಲಿಲ್ಲ. ಆದರೆ, ಕಳೆದ ಎರಡು ದಿನಗಳಿಂದ ಭವ್ಯಾ ಇನ್ಸ್ಟಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಈಗ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

Bhaya Gowda Karna Serial
1/6

ಝೀ ಕನ್ನಡ ವಾಹಿನಿಯಲ್ಲಿ ಜೂನ್ 16 ರಂದು ರಾತ್ರಿ 8 ಗಂಟೆಗೆ ಪ್ರಸಾರ ಕಾಣಬೇಕಿದ್ದ ಬಹುನಿರೀಕ್ಷಿತ ಹೊಸ ಕರ್ಣ ಧಾರಾವಾಹಿಯ ಪ್ರಸಾರವನ್ನು ಕೊನೇ ಕ್ಷಣದಲ್ಲಿ ಏಕಾಏಕಿ ರದ್ದು ಮಾಡಿದ್ದು ಗೊತ್ತೇ ಇದೆ. ಮೂಲಗಳ ಪ್ರಕಾರ ಈ ಧಾರಾವಾಹಿ ಪ್ರಸಾರ ಕಾಣದಿರಲು ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಎನ್ನಲಾಗುತ್ತಿದೆ.

2/6

ತನ್ನ ಪ್ರೊಮೋ ಮೂಲಕವೇ ದೊಡ್ಡ ಹೈಪ್ ಕ್ರಿಯೆಟ್ ಮಾಡಿದ್ದ ಕರ್ಣ ಧಾರಾವಾಹಿ ನೋಡಲು ವೀಕ್ಷಕರು ಕಾದು ಕುಳಿತಿದ್ದರು. ಆದರೆ ವೀಕ್ಷಕರು ಹಾಗೂ ಅಭಿಮಾನಿಗಳ ಆಸೆಗೆ ಈಗ ತಣ್ಣೀರು ಎರಚಿದಂತಾಯಿತು. ಈ ಧಾರಾವಾಹಿ ಪ್ರಸಾರ ಆಗುತ್ತಿಲ್ಲ ಎಂಬ ಸುದ್ದಿಯ ಜೊತೆಗೆ ಭವ್ಯಾ ಗೌಡ ಅವರು ತಮ್ಮ ಸೋಷಿಯಲ್ ಮೀಡಿಯಾದಿಂದ ಕರ್ಣ ಧಾರಾವಾಹಿಯ ಎಲ್ಲ ಪೋಸ್ಟರ್ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿದರು.

3/6

ಈ ವಿವಾದದ ಬಳಿಕ ಭವ್ಯಾ ಅವರು ಸೈಲೆಂಟ್ ಆಗಿದ್ದರು. ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಯಾವುದೇ ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಂಡಿರಲಿಲ್ಲ. ಆದರೆ, ಕಳೆದ ಎರಡು ದಿನಗಳಿಂದ ಭವ್ಯಾ ಇನ್​ಸ್ಟಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಒಂದರ ಹಿಂದೆ ಒಂದರಂತೆ ಸ್ಟೋರಿ ಹಂಚಿಕೊಳ್ಳುತ್ತಿದ್ದಾರೆ.

4/6

ಇದೀಗ ಭವ್ಯಾ ಗೌಡ ಬ್ಲ್ಯಾಕ್ ಡ್ರೆಸ್​ನಲ್ಲಿ ಹೊಸ ಫೋಟೋ ಶೂಟ್ ಮಾಡಿಸಿಕೊಂಡು ಶೇರ್ ಮಾಡಿದ್ದಾರೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಬ್ಲ್ಯಾಕ್ ಬಣ್ಣದ ಆಫ್ ಶೋಲ್ಡರ್ ಶಾರ್ಟ್ ಡ್ರೆಸ್ಸಲ್ಲಿ ಭವ್ಯಾ ಗೌಡ, ಸಿಕ್ಕಾಪಟ್ಟೆ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ. ಫ್ಯಾನ್ಸ್ ನಟಿಯ ಲುಕ್ ಗೆ ಮೆಚ್ಚುಗೆ ಸೂಚಿಸಿದ್ದಾರೆ.

5/6

ಭವ್ಯಾ ಮೊನ್ನೆಯಷ್ಟೇ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದರು. ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಪುನೀತರಾದರು. ಅದಾದ್ಮೇಲೆ ತಮ್ಮ ಇನ್​ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಭವ್ಯಾ ಒಂದು ಸ್ಟೋರಿ ಹಂಚಿಕೊಂಡಿದ್ದಾರೆ. "ತುಳಿದ ಜಾಗದಲ್ಲಿ ಬೆಳೆದು ತೋರಿಸು" ಎಂದು ಬರೆದುಕೊಂಡಿದ್ದರು. ಇದು ಯಾರಿಗೆ ಇರಬಹುದು ಎಂಬುದು ಕಿರುತೆರೆ ವಲಯದಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ.

6/6

ಅಂದಹಾಗೆ ಕರ್ಣ ಧಾರಾವಾಹಿಯಲ್ಲಿ ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸತ್ತಿದ್ದಾರೆ. ಈ ಧಾರಾವಾಹಿ ಪ್ರಸಾರದ ಹೊಸ ದಿನಾಂಕ ಇನ್ನೂ ಬಹಿರಂಗಗೊಂಡಿಲ್ಲ.