ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Global Achievers Award held at Manila, Philippines: ಫಿಲಿಫೈನ್ಸ್‌ʼನಲ್ಲಿ ಕರುನಾಡ ಸಾಧಕರಿಗೆ ಸನ್ಮಾನ

ವಿಶ್ವವಾಣಿ ಗ್ಲೋಬಲ್‌ ಪೋರಂ ನೀಡುವ ಗ್ಲೋಬಲ್‌ ಅಚೀವರ್ಸ್‌ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿದ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರು, ರಾಜ್ಯದ ಸಾಧಕರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಮೂರು ಜನರ ಆಯ್ಕೆದಾರರ ಸಮಿತಿಯಿರುತ್ತದೆ. ಆ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಸಾಧಕರನ್ನು ಗುರುತಿಸಲಾಗುತ್ತದೆ.

ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿದೇಶದಲ್ಲಿ ನಾಡಿನ ಸಾಧಕರನ್ನು ಸನ್ಮಾನಿಸುವ ವಿಶ್ವವಾಣಿಯ ಗ್ಲೋಬಲ್‌ ಅಚೀವರ್ಸ್‌ ಅವಾರ್ಡ್‌ ಕಾರ್ಯ ಕ್ರಮದ ವೇಳೆ ನಾನಾ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸುವುದರ ತೆ ಭಾರತ ಹಾಗೂ ಆಯಾ ದೇಶದ ಕಲೆ, ಸಂಸ್ಖೃತಿಯನ್ನು ಪಸರಿಸುವ ಪ್ರಯತ್ನದಲ್ಲಿ ಪತ್ರಿಕೆ ಯಶಸ್ವಿಯಾಗಿದೆ. ಕಳೆದ ಎರಡು ವರ್ಷದ ಅವಧಿಯ್ಲಿ 12 ದೇಶಗಳಲ್ಲಿ ನಡೆದ ಯಶಸ್ವಿ ಕಾರ್ಯಕ್ರಮದ ಬಳಿಕ ಇದೀಗ ಕರುನಾಡಿನ ಸಾಧಕರಿಗೆ ಫಿಲಿಫೈನ್ಸ್‌ ದೇಶದ ಮನಿಲಾದಲ್ಲಿ ಗ್ಲೋಬಲ ಅಚೀವರ್ಸ್‌ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಾಧಕರಿಗೆ ಕರ್ನಾಟಕ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌, ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಪರ್ವ ಗ್ರೂಪ್‌ ಸಂಸ್ಥಾಪಕ ಎಚ್.ಪಿ.ನೀಲೇಶ್‌, ವಾಲ್ಯೂ ಪ್ರಾಡಕ್ಟ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀನಿವಾಸಮೂರ್ತಿ ಸೇರಿದಂತೆ ಹಲವರ ಸಮ್ಮುಖ ದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

award 2.1 Arun
award 2.1 Dasappa
award 2.1 Dharmanagowda
award 2.1 Funstay

ಹೇಗಿರಲಿದೆ ಪ್ರಶಸ್ತಿ ಆಯ್ಕೆ ?

ವಿಶ್ವವಾಣಿ ಗ್ಲೋಬಲ್‌ ಪೋರಂ ನೀಡುವ ಗ್ಲೋಬಲ್‌ ಅಚೀವರ್ಸ್‌ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿದ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರು, ರಾಜ್ಯದ ಸಾಧಕರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಮೂರು ಜನರ ಆಯ್ಕೆದಾರರ ಸಮಿತಿಯಿರುತ್ತದೆ. ಆ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಸಾಧಕರನ್ನು ಗುರುತಿಸಲಾಗುತ್ತದೆ. ಫಿಲಿಫೈನ್ಸ್‌ʼನಲ್ಲಿ ನಡೆದ 1ನೇ ಆವೃತ್ತಿಗೆ 90 ಜನರ ಪಟ್ಟಿಯನ್ನು ಆಯ್ಕೆದಾರರ ಸಮಿತಿ ನೀಡಿತ್ತು. ಆದರೆ 40ಕ್ಕಿಂತ ಹೆಚ್ಚು ಜನರ ತಂಡವಾದರೆ ಪ್ರತ್ಯೇಕವಾಗಿ ತೆರಳಬೇಕಾಗುತ್ತದೆ. ಆದ್ದರಿಂದ ಭಾವನಾತ್ಮಕವಾಗಿ ಒಂದು ತಂಡವಾಗಿ ಇರಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ನಿಯೋಗದ ಮಿತಿಯನ್ನು 40ಕ್ಕೆ ತಗ್ಗಿಸ ಲಾಗಿದೆ. ಕಳೆದ 12 ಕಾರ್ಯ ಕ್ರಮದಲ್ಲಿ ಸುಮಾರು 240ಕ್ಕೂ ಹೆಚ್ಚು ಸಾಧಕರನ್ನು ವಿಶ್ವವಾಣಿ ಗುರುತಿಸಿದೆ. ಸಾಮಾನ್ಯವಾಗಿ ಬೆಂಗಲೂರು ಅಥವಾ ಮುಬೈನಲ್ಲಿ ಕಾರ್ಯಕ್ರಮವನ್ನು ನಡೆಸುವ ಪ್ರತೀತಿ ನಡೆದುಕೊಂಡು ಬಂದಿತ್ತು. ಆದರೆ ರಾಜ್ಯದ ಸಾಧಕರನ್ನು ವಿದೇಶಿ ನೆಲದಲ್ಲಿ ಗುರುತಿದಿ, ಸನ್ಮಾನಿಸಬೇಕು ಎನ್ನುವುದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರ ಅಭಿಪ್ರಾಯ

award 2.1 K M
award 2.1 Khader
award 2.1 Mohyuddin
award 2.1 MRV
award 2.1 sri thammanaa
award 2.1 Veena
award 2.1 Vikas
award 2.1 Vinod