Kiara Advani: ಮೆಟ್ಗಾಲಾ ರೆಡ್ ಕಾರ್ಪೆಟ್ನಲ್ಲಿ ಬೇಬಿ ಬಂಪ್ ಜೊತೆ ಕಂಗೊಳಿಸಿದ ನಟಿ ಕಿಯಾರಾ ಅಡ್ವಾಣಿ
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ‘ಮೆಟ್ಗಾಲಾ 2025’ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಹಲವು ಬಾಲಿವುಡ್ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಮೂಲಕ ಮಿಂಚಿದ್ದಾರೆ. ಅದರಲ್ಲೂ ಪ್ರೆಗ್ನೆನ್ಸಿ ಗ್ಲೋನಿಂದ ಕಂಗೊಳಿಸಿದ ನಟಿ ಕಿಯಾರಾ ಅಡ್ವಾಣಿ ಬೇಬಿ ಬಂಪ್ನೊಂದಿಗೆ ಸಖತ್ ಕ್ಯೂಟ್ ಆಗಿ ಕಾಣಿಸಿ ಕೊಂಡಿದ್ದಾರೆ. ನಟಿ ಕಿಯಾರಾ ಅಡ್ವಾಣಿಯ ಮೆಟ್ ಗಾಲಾದ ಸುಂದರ ಫೋಟೊಗಳು ಇಲ್ಲಿವೆ.



ಮೆಟ್ ಗಾಲಾ 2025 ಫ್ಯಾಷನ್ ಹಬ್ಬದ ಸಂಭ್ರಮ ಜೋರಾಗಿದೆ.ಕಾರ್ಯಕ್ರಮಕ್ಕೆ ದೇಶ-ವಿದೇಶದ ಸೆಲೆಬ್ರಿಟಿಗಳು ಆಗಮಿಸಿ ಪೋಸ್ ನೀಡಿದ್ದಾರೆ. ಮೆಟ್ ಗಾಲಾ 2025 ರಲ್ಲಿ ಪ್ರಿಯಾಂಕಾ ಚೋಪ್ರಾ, ದಿಲ್ಜಿತ್ ದೋಸಾಂಜ್ ಮತ್ತು ಶಾರುಖ್ ಖಾನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಹಾಕಿದ್ದಾರೆ. ಅದರಲ್ಲೂ ನಟಿ ಕಿಯಾರಾ ಕಪ್ಪು ಬಣ್ಣದ ಗೌನ್ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಕಿಯಾರಾ ತಮ್ಮ ಬೇಬಿ ಬಂಪ್ ನೊಂದಿಗೆ ಮೆಟ್ ಗಾಲಾಗೆ ಆಗಮಿಸಿದ್ದು ಬೇಬಿ ಬಂಪ್ ನೊಂದಿಗೆ ಪೋಸ್ ಕೊಟ್ಟಿದ್ದಾರೆ. ಮೆಟ್ ಗಾಲಾದಲ್ಲಿನ ರ್ಯಾಂಪ್ ಮೇಲೆ ಹೆಜ್ಜೆ ಹಾಕಿರುವ ಕಿಯಾರಾ ಫೋಟೊಗಳು ಸದ್ಯ ಎಲ್ಲೆಡೆ ಬಹಳಷ್ಟು ವೈರಲ್ ಆಗುತ್ತಿವೆ.

ಕಿಯಾರಾ ಮೆಟ್ ಗಾಲ ಕಾರ್ಯಕ್ರನದಲ್ಲಿ ಸೆಂಟರ್ ಆಫ್ ಆಟ್ರ್ಯಾಕ್ಷನ್ ಆಗಿದ್ದು ವೇದಿಕೆಯಲ್ಲಿ ಬೇಬಿ ಪ್ರದರ್ಶಿಸಿ ಮನ ಗೆದ್ದಿದ್ದಾರೆ. ಅನೈತಾ ಶ್ರಾಫ್ ಅಡಜಾನಿಯಾ ಡಿಸೈನ್ ಮಾಡಿರುವ ಫುಲ್ ಬ್ಲಾಕ್ ಬಣ್ಣದ ಗೌನ್ ನಲ್ಲಿ ಗೋಲ್ಡ್ ಬಣ್ಣದ ವಿನ್ಯಾಸವಿದೆ. ಈ ಡ್ರೆಸ್ನಲ್ಲಿ ಗರ್ಭಿಣಿ ಕಿಯಾರಾ ತುಂಬಾನೇ ಕ್ಯೂಟ್ ಆಗಿ ಕಾಣಿಸಿದ್ದು ಪ್ರಾಗೆನ್ಸಿ ಗ್ಲೊ ಎದ್ದು ತೋರುವಂತೆ ಮಾಡಿದೆ.

ಗೌನ್ನಲ್ಲಿ ಹೊಟ್ಟೆಯ ಬಳಿ ಹೃದಯಾಕಾರದ ಡಿಸೈನ್ ಇದ್ದು ಬೇಬಿ ಬಂಪ್ ಆಕರ್ಷಣೆ ಹೆಚ್ಚುವಂತೆ ಮಾಡಿದೆ. ಸಖತ್ ಸ್ಟೈಲಿಶ್ ಆಗಿರುವ ಈ ಡ್ರೆಸ್ ಮಾಡರ್ನ್ ಲುಕ್ ನೀಡಿದ್ದು ನಟಿ ಮುದ್ದಾಗಿ ಕಾಣಿಸಿದ್ದಾರೆ.

ಕಿಯಾರಾ ಬ್ಲಾಕ್& ಗೋಲ್ಡ್ ಡ್ರೆಸ್ ನೊಂದಿಗೆ ಆಭರಣಗಳನ್ನು ಧರಿಸಿರುವುದು ಕಂಡುಬಂದಿದೆ. ತನ್ನ ಬೆರಳುಗಳಿಗೆ ಹಲವಾರು ಚಿನ್ನದ ಉಂಗುರಗಳು ಮತ್ತು ಒಂದು ಬೆಳ್ಳಿ ಉಂಗುರವನ್ನು ಧರಿಸಿದ್ದರು.. ನಟಿ ಸಿಂಪಲ್ ಮೇಕಪ್ ನೋಟದೊಂದಿಗೆ ಗ್ರ್ಯಾಂಡ್ ಡ್ರೆಸ್ ಧರಿಸಿ ಸಂಪೂರ್ಣ ವಿಭಿನ್ನ ಲುಕ್ ನೀಡಿದ್ದರು.

ಕಿಯಾರಾ ಅಡ್ವಾಣಿ ಡಾರ್ಕ್ ಐ ಮೇಕಪ್ ಮತ್ತು ನ್ಯೂಡ್ ಲಿಪ್ಸ್ಟಿಕ್ ಮೂಲಕ ತನ್ನ ಲುಕ್ ಅನ್ನು ಪೂರ್ಣಗೊಳಿಸಿದರು. ಅವರ ಕರ್ಲಿ ಹೇರ್ ಅವರ ಲುಕ್ ಗೆ ಮತ್ತಷ್ಟು ಆಕರ್ಷಣೆ ನೀಡಿದೆ.

ವಿವಿಧ ಭಂಗಿಯಲ್ಲಿ ಫೋಟೊಗೆ ಪೋಸ್ ನೀಡಿರುವ ಕಿಯಾರಾ ಬ್ಲಾಕ್ & ಗೋಲ್ಡನ್ ಕಾಂಬಿನೇಷನ್ ಗೌನ್ ಆಕರ್ಷಕವಾಗಿ ಕಾಣಿಸಿದೆ.ನಟಿ ಈ ವೇಳೆ ಪ್ರೆಗ್ನೆನ್ಸಿ ಗ್ಲೋನಿಂದ ಕಂಗೊಳಿಸಿದ್ದು ಅಭಿಮಾನಿಗಳು ಅವರ ಫೊಟೋಸ್ ನೋಡಿ ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.

ಕಿಯಾರಾ ಅಡ್ವಾಣಿ ಕನ್ನಡದ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ ಪ್ರೆಗ್ನೆಂಟ್ ಆಗುವುದಕ್ಕೂ ಮೊದಲೇ ಸಿನಿಮಾದ ಶೂಟ್ನ ಪೂರ್ಣಗೊಳಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ‘ವಾರ್ 2’ ಚಿತ್ರಕ್ಕೂ ನಟಿ ಕಿಯಾರಾ ನಾಯಕಿಯಾಗಿದ್ದಾರೆ.ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು 2023ರಲ್ಲಿ ಮದುವೆಯಾಗಿದ್ದಾರೆ. ಇವರೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.