Krishna Janmastami 2026: ಉದ್ಯಾನನಗರಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಶಾಪಿಂಗ್ ಸಡಗರ
ಉದ್ಯಾನನಗರಿ ಬೆಂಗಳೂರಿನಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶಾಪಿಂಗ್ ಸಂಭ್ರಮ ಹೆಚ್ಚಾಗಿದೆ. ಮಾರುಕಟ್ಟೆಗೆ ಬಗೆಬಗೆಯ ರೂಪದ ಮುದ್ದು ಕೃಷ್ಣನ ವಿಗ್ರಹ ಬಂದಿದೆ. ಇದಕ್ಕೆ ಪೂರಕ ಎಂಬಂತೆ, ನಾನಾ ವೆರೈಟಿಯ ಆಕರ್ಷಕ ಅಲಂಕಾರಿಕ ಸಾಮಗ್ರಿಗಳು ಎಲ್ಲೆಡೆ ರಾರಾಜಿಸುತ್ತಿವೆ.
ಕೃಷ್ಣ ಜನ್ಮಾಷ್ಟಮಿ ಸಂಭ್ರಮ
ಶುಕ್ರವಾರ ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉದ್ಯಾನನಗರಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶಾಪಿಂಗ್ ಸಂಭ್ರಮ ಹೆಚ್ಚಾಗಿದೆ. ಮಾರುಕಟ್ಟೆಗೆ ಈಗಾಗಲೇ ಬಗೆಬಗೆಯ ರೂಪದ ಮುದ್ದು ಕೃಷ್ಣನ ವಿಗ್ರಹಗಳು ಬಂದಿವೆ. ಜತೆಗೆ ಆಕರ್ಷಕ ಅಲಂಕಾರಿಕ ಸಾಮಗ್ರಿಗಳು ಎಲ್ಲೆಡೆ ರಾರಾಜಿಸುತ್ತಿವೆ.
ಮಕ್ಕಳಿಗೆ ಕೃಷ್ಣನ ಡ್ರೆಸ್‌ಗಳು
ಚಿಣ್ಣರನ್ನು ಕೃಷ್ಣನಂತೆ ಅಲಂಕರಿಸಬಹುದಾದಂತಹ ಫ್ಯಾನ್ಸಿ ಡ್ರೆಸ್‌ಗಳು ಹಾಗೂ ಆಕ್ಸೆಸರೀಸ್‌ಗಳು ಲೆಕ್ಕವಿಲ್ಲದಷ್ಟು ಬಗೆಯಲ್ಲಿ ಮಾರುಕಟ್ಟೆಯಲ್ಲಿ ಎಂಟ್ರಿ ನೀಡಿವೆ.
ಬಗೆಬಗೆಯ ಕೃಷ್ಣನ ಬೊಂಬೆಗಳು
ಪುಟ್ಟ ಕೃಷ್ಣನ ಮೂರ್ತಿಗಳಿಂದಿಡಿದು ಆಳೆತ್ತರದ ಕೃಷ್ಣನ ಮೂರ್ತಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿವೆ.ಮಣ್ಣಿನ, ಮರದ ಹಾಗೂ ಪಿವಿಸಿ ಕೃಷ್ಣನ ಮೂರ್ತಿಗಳು ಕಳೆದ ವರ್ಷಕ್ಕಿಂತ ಹೆಚ್ಚು ವಿನ್ಯಾಸದಲ್ಲಿ ಎಂಟ್ರಿ ನೀಡಿವೆ.
ನವಿಲುಗರಿಯ ಅಲಂಕಾರಿಕ ವಸ್ತುಗಳು
ಕಾನೂನು ಪ್ರಕಾರ ನವಿಲುಗರಿ ಮಾರಾಟ ನಿಷೇಧವಾಗಿದೆಯಾದರೂ, ಮಾರುಕಟ್ಟೆಯಲ್ಲಿ ಮಾತ್ರ ನವಿಲುಗರಿಯ ಅಲಂಕಾರಿಕ ಐಟಂಗಳು ದೊರೆಯುತ್ತಿವೆ. ಚಾಮರ, ಚಿಕ್ಕದಾದ ನವಿಲು ಗರಿಗಳು, ಉದ್ದನೆಯ ನವಿಲು ಗರಿಗಳು ಹೀಗೆ ನಾನಾ ಬಗೆಯವು ಸಿಗುತ್ತಿವೆ. ಪೂಜಾ ಕೋಣೆಯಲ್ಲಿ ಅಥವಾ ಮನೆಯಲ್ಲಿ ಅಂಟಿಸಬಹುದಾದ ಕುಂದನ್ನ ವೈಟ್, ರೆಡ್, ಪಿಂಕ್ ಹೀಗೆ ನಾನಾ ಶೇಡ್‌ಗಳಿರುವ ಕೃಷ್ಣನ ಹೆಜ್ಜೆಯ ಇನ್‌ಸ್ಟಂಟ್ ಸ್ಟಿಕ್ಕರ್‌ಗಳು ಬಂದಿವೆ.
ಜೋಕಾಲಿಯಲ್ಲಿನ ಕೃಷ್ಣ
ಹಬ್ಬದ ರಂಗನ್ನು ಹೆಚ್ಚಿಸುವ ನಾನಾ ಸೈಜಿನ ತೂಗುವ ಮಿನಿಯೇಚರ್ ಜೋಕಾಲಿಗಳು ಲಗ್ಗೆ ಇಟ್ಟಿವೆ. ಹಬ್ಬದಂದು ಅಲಂಕಾರ ಮಾಡಲು ಉಪಯೋಗವಾಗುವಂತಹ ಟ್ರೆಡಿಷನಲ್ ಲುಕ್ ನೀಡುವಂತಹ ಮಡಿಕೆಗಳು ಮಾರುಕಟ್ಟೆಯ ರಂಗೇರಿಸಿವೆ.