ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇತಿಹಾಸ ಸೃಷ್ಟಿಸಿದ ʻಕುಣಿಗಲ್ ಉತ್ಸವʼ; 35 ಸಾವಿರ ಜನರ ಎದುರು ʻಕಿಚ್ಚʼ ಸುದೀಪ್‌ಗೆ ಸನ್ಮಾನಿಸಿದ ಡಿ.ಕೆ. ಶಿವಕುಮಾರ್‌

ಕುಣಿಗಲ್ ನಗರದ ಇತಿಹಾಸದಲ್ಲೇ ಮೊಟ್ಡ ಮೊದಲ ಬಾರಿಗೆ ಸುಮಾರು 35 ಸಾವಿರ ಜನರ ಸಮ್ಮುಖದಲ್ಲಿ 'ಕುಣಿಗಲ್ ಉತ್ಸವ' ನಡೆಯಿತು. ಸಿನಿಮಾ ಸೆಟ್‌ಗಿಂತಲೂ ಅದ್ದೂರಿಯಾಗಿ ಹಾಕಲಾಗಿದ್ದ ಬೃಹತ್ ಸೆಟ್‌ನಲ್ಲಿ ಶಾಸಕ‌ ಡಾ. ರಂಗನಾಥ್ ಅವರ ನೇತೃತ್ವದಲ್ಲಿ ಈ ವರ್ಣರಂಜಿತ ಸಮಾರಂಭ ನಡೆಯಿತು. ಮೂರು ದಿನಗಳ ಕಾಲ‌ ನಡೆದ ಈ ಅದ್ದೂರಿ ಉತ್ಸವದ ಕೊನೆಯ ದಿನದ ಸಮಾರಂಭವು ಕಿಚ್ಚ ಸುದೀಪ್, ಮಾಲಾಶ್ರೀ, ಅನು ಪ್ರಭಾಕರ್, ನೆನಪಿರಲಿ ಪ್ರೇಮ್, ಡಾಲಿ ಧನಂಜಯ್, ಜೈದ್ ಖಾನ್, ಆರಾಧನಾ ರಾಮ್, ನಿರ್ಮಾಪಕ ಸಂಜಯ್‌ ಗೌಡ್ರು‌ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ತಾರೆಗಳ ಆಗಮನದಿಂದ ರಂಗೇರಿತ್ತು. ಕೊರೆವ ಚಳಿಯನ್ನೂ ಲೆಕ್ಕಿಸದೇ 35 ರಿಂದ 40 ಸಾವಿರ ಸಂಖ್ಯೆಯಲ್ಲಿ ನೆರೆದಿದ್ದ ಜನರು ಸತತ ಮೂರು ಗಂಟೆಗಳ ಕಾಲ ನಡೆದ ನವೀನ್ ಸಜ್ಜು, ಚಂದನ್ ಶೆಟ್ಟಿ ಅವರ ಸಂಗೀತ ಸಂಜೆ ಕಾರ್ಯಕ್ರಮವನ್ನು ಖುಷಿಯಿಂದ ಆನಂದಿಸಿದರು.

ಕುಣಿಗಲ್ ಉತ್ಸವ: 35 ಸಾವಿರ ಜನರ ಎದುರು ಕಿಚ್ಚನಿಗೆ ಡಿಕೆ ಶಿವಕುಮಾರ್ ಸನ್ಮಾನ

-

Avinash GR
Avinash GR Jan 12, 2026 7:01 PM