Lehenga Fashion 2026: ಲೆಹೆಂಗಾವನ್ನು ದಾವಣಿ-ಲಂಗದಂತೆ ಧರಿಸಿದ ಕೃತಿ ಶೆಟ್ಟಿ
Krithi Shetty: ಡಿಸೈನರ್ ಲೆಹೆಂಗಾವನ್ನು ನಟಿ ಕೃತಿ ಶೆಟ್ಟಿ ದಾವಣಿ-ಲಂಗದಂತೆ ಧರಿಸಿದ್ದಾರೆ. ನವಾ ರಾಜ್‌ಕುಮಾರ್ ಸ್ಟೈಲಿಂಗ್‌ನ ಈ ಲೆಹೆಂಗಾ ಮಿಕ್ಸ್ ಮ್ಯಾಚ್ ಡಿಸೈನ್ ಹೊಂದಿದ್ದು, ಟೂ ಇನ್ ವನ್ ಡಿಸೈನ್‌ನಲ್ಲಿ ಧರಿಸಬಹುದಾಗಿದೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ನಟಿ ಕೃತಿ ಶೆಟ್ಟಿ ಡಿಸೈನರ್ ಲೆಹೆಂಗಾವನ್ನು ದಾವಣಿ-ಲಂಗದಂತೆ ಧರಿಸಿ, ಸಂಭ್ರಮಿಸಿದ್ದಾರೆ. ಹೌದು, ನವಾ ರಾಜ್‌ಕುಮಾರ್ ಸ್ಟೈಲಿಂಗ್‌ನ ಈ ಲೆಹೆಂಗಾ ಮಿಕ್ಸ್ ಮ್ಯಾಚ್ ಡಿಸೈನ್ ಹೊಂದಿದ್ದು, ಟೂ ಇನ್ ವನ್ ಡಿಸೈನ್‌ನಲ್ಲಿ ಧರಿಸಬಹುದಾಗಿದೆ.
ದಾವಣಿ-ಲಂಗದ ಸ್ಟೈಲ್‌ನಲ್ಲಿ ಲೆಹೆಂಗಾ
ಕೃತಿ ಶೆಟ್ಟಿ ಈ ಫ್ಯಾಷನ್ ಶೂಟ್‌ನಲ್ಲಿ ಧರಿಸಿದ ಈ ಸುಂದರ ಲೆಹೆಂಗಾ ಸದ್ಯ ಲೆಹೆಂಗಾ ಪ್ರಿಯರನ್ನು ಸೆಳೆಯುವುದರೊಂದಿಗೆ ಈ ಶೈಲಿಯ ಲೆಹೆಂಗಾವನ್ನು ಹೀಗೂ ಧರಿಸಬಹುದು ಎಂಬುದನ್ನು ತೋರ್ಪಡಿಸಿದೆ.
ಕೃತಿ ಶೆಟ್ಟಿಯ ಕಾಂಜೀವರಂ ಲೆಹೆಂಗಾ
ಅಂದಹಾಗೆ, ನಟಿ ಕೃತಿ ಶೆಟ್ಟಿ ಧರಿಸಿರುವುದು ಕಾಂಜೀವರಂ ಲೆಹೆಂಗಾ. ಮಲ್ಟಿ ಪ್ಯಾನೆಲ್ ಹೊಂದಿರುವ ಈ ಲೆಹೆಂಗಾ ರೇಷ್ಮೆಯದ್ದಾಗಿದೆ. ವಿಶೇಷತೆ ಎಂದರೇ ಈ ಲೆಹೆಂಗಾ ಡಾರ್ಕ್ ಶೇಡ್ ಹೊಂದಿರುವುದರ ಬದಲು ಸ್ಕೈ ಬ್ಲ್ಯೂ ಪಾಸ್ಟೆಲ್ ಶೇಡ್ ಹೊಂದಿದೆ. ಮಧ್ಯೆ ಮಧ್ಯೆ ಸಿಲ್ವರ್ ಶೇಡ್ ಸೇರಿಸಿಕೊಂಡಿದೆ. ಒಟ್ಟಿನಲ್ಲಿ ವಿಭಿನ್ನ ಕಾಂಬಿನೇಷನ್ ಹೊಂದಿದೆ ಎಂದಿದ್ದಾರೆ ಫ್ಯಾಷನಿಸ್ಟಾಗಳು.
ಲೆಹೆಂಗಾಗೆ ಆಕರ್ಷಕ ಬ್ಲೌಸ್ ಮತ್ತು ದುಪಟ್ಟಾ
ಇನ್ನು, ಈ ಲೆಹೆಂಗಾಗೆ ಕೃತಿ ಶೆಟ್ಟಿಯು ಎಂಬಾಲಿಶ್ಡ್ ಸ್ವೀಟ್ ಹಾರ್ಟ್ ನೆಕ್‌ಲೈನ್ ಇರುವಂತಹ ಡಿಸೈನರ್ ಕ್ರಾಪ್ ಬ್ಲೌಸ್ ಧರಿಸಿದ್ದಾರೆ. ಲೆಹೆಂಗಾ ಹಾಗೂ ಬ್ಲೌಸ್‌ಗೆ ಇಂದ್ರೀಯ ಬ್ರಾಂಡ್‌ನ ಜ್ಯುವೆಲ್ ಧರಿಸಿದ್ದಾರೆ. ಜತೆಗೆ ಜ್ಯುವೆಲ್ ಡಿಸೈನ್ ಬಾರ್ಡರ್ ಇರುವಂತಹ ಶೀರ್ ದುಪಟ್ಟಾವನ್ನು ದಾವಣಿ-ಲಂಗದಂತೆ ಹೊದ್ದುಕೊಂಡಿದ್ದಾರೆ ಎಂದು ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.
ಕೃತಿ ಶೆಟ್ಟಿಯಂತೆ ಕಾಣಿಸಲು ಇಲ್ಲಿವೆ 5 ಟಿಪ್ಸ್
- ಪಾಸ್ಟೆಲ್ ಶೇಡ್‌ನ ಸಿಲ್ಕ್ ಲೆಹೆಂಗಾ ವನ್ನೇ ಆಯ್ಕೆ ಮಾಡಿ, ಧರಿಸಿ.
- ಡಿಸೈನರ್ ಬ್ಲೌಸ್ ಧರಿಸುವುದು ಉತ್ತಮ.
- ದುಪಟ್ಟಾ ಶೀರ್ ಆಗಿರಬೇಕು.
- ಲೆಹೆಂಗಾಗೆ ಸೈಡಿಗೆ ದುಪಟ್ಟಾ ಹಾಕುವ ಬದಲು ದಾವಣಿ-ಲಂಗದೊಂದಿಗೆ ಸ್ಟೈಲ್ ಮಾಡಿ.
- ಸ್ಟೋನ್ ಅಥವಾ ಕ್ರಿಸ್ಟಲ್ ಜ್ಯುವೆಲರಿಗಳನ್ನು ಧರಿಸಿ.