Lehenga Fashion 2026: ಗ್ರ್ಯಾಂಡ್ ಲೆಹೆಂಗಾಗೆ ಡಿಸೈನರ್ ಲಾಂಗ್ ಸ್ಲೀವ್ ಬ್ಲೌಸ್ ಸಾಥ್
Designer Long Sleeve Blouses: ಫೆಸ್ಟೀವ್ ಸೀಸನ್‌ನಲ್ಲಿ ಗ್ರ್ಯಾಂಡ್ ಲೆಹೆಂಗಾಗಳಿಗೆ ಡಿಸೈನರ್ ಲಾಂಗ್ ಸ್ಲೀವ್ ಬ್ಲೌಸ್‌ಗಳು ಜತೆಯಾಗಿವೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ಔಟ್‌ಫಿಟ್ ವಿಶೇಷತೆಯೇನು? ಆಯ್ಕೆ ಹಾಗೂ ಸ್ಟೈಲಿಂಗ್ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಹೆವ್ವಿ ಡಿಸೈನ್ ಹೊಂದಿರುವಂತಹ ಡಿಸೈನರ್ ಲೆಹೆಂಗಾಗಳಿಗೆ ಇದೀಗ ಮಾನ್ಸೂನ್ ಸೀಸನ್‌ನಲ್ಲಿ ಫುಲ್ ಸ್ಲೀವ್ ಅಥವಾ ಲಾಂಗ್ ಸ್ಲೀವ್ ಡಿಸೈನರ್ ಬ್ಲೌಸ್‌ಗಳು ಜತೆಯಾಗಿವೆ.
ಅತ್ಯಾಕರ್ಷಕವಾಗಿ ಬಿಂಬಿಸುವ ಔಟ್‌ಫಿಟ್
ಹೌದು, ಈ ಬಾರಿಯ ಫೆಸ್ಟೀವ್ ಸೀಸನ್‌ನಲ್ಲಿ ಕಲರ್‌ಫುಲ್ ಆಗಿರುವಂತಹ ಬಗೆಬಗೆಯ ಗ್ರ್ಯಾಂಡ್ ಲೆಹೆಂಗಾಗಳಿಗೆ ಡಿಸೈನರ್ ಲಾಂಗ್ ಸ್ಲೀವ್ ಬ್ಲೌಸ್‌ಗಳು ಸಾಥ್ ನೀಡುತ್ತಿವೆ. ಅಲ್ಲದೇ ಧರಿಸಿದವರನ್ನು ಅತ್ಯಾಕರ್ಷಕವಾಗಿ ಬಿಂಬಿಸುತ್ತಿವೆ.
ಟ್ರೆಂಡಿಯಾಗಿರುವ ಫುಲ್ ಸ್ಲೀವ್ ಡಿಸೈನರ್ ಬ್ಲೌಸ್ ಲೆಹೆಂಗಾ
ಅಂದಹಾಗೆ, ಫುಲ್ ಸ್ಲೀವ್ ಲೆಹೆಂಗಾಗಳು ಈ ಮಾನ್ಸೂನ್ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಇವು ಚಳಿ-ಮಳೆ-ಗಾಳಿಗೆ ಬೆಚ್ಚಗಿಡುವುದರೊಂದಿಗೆ ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತವೆ. ಅದರಲ್ಲೂ ಪ್ಲಂಪಿಯಾಗಿರುವವರಿಗಂತೂ ಇವು ಹೇಳಿ ಮಾಡಿಸಿದ ಡಿಸೈನರ್ ಬ್ಲೌಸ್‌ಗಳು ಎನ್ನಬಹುದು. ಆದರೆ, ಇವನ್ನು ಅತಿ ಹೆಚ್ಚಾಗಿ ಯುವತಿಯರೇ ಧರಿಸುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಗಮನಸೆಳೆದ ಮಾಡೆಲ್ ಹೆಲಿ ದಾರುವಾಲಾ ಲೆಹೆಂಗಾ ಬ್ಲೌಸ್
ನಟಿ ಹಾಗೂ ಮಾಡೆಲ್ ಹೆಲಿ ದಾರುವಾಲಾ ಅವರು ಇತ್ತೀಚೆಗೆ ಫ್ಯಾಷನ್ ಶೂಟ್‌ವೊಂದರಲ್ಲಿ ಧರಿಸಿದ್ದ ಪರ್ಪಲ್ ಅಥವಾ ಲೈಲಾಕ್ ಕಲರ್‌ನ ಹೆವ್ವಿ ಡಿಸೈನ್‌ನ ಜೆಮೆಟ್ರಿಕ್ ಪ್ಯಾಟರ್ನ್‌ನ ಮಿರರ್ ವರ್ಕ್ ಹಾಗೂ ಎಂಬ್ರಾಯ್ಡರಿ ಇರುವಂತಹ ಗ್ರ್ಯಾಂಡ್ ಲೆಹೆಂಗಾವು ಲೆಹೆಂಗಾ ಪ್ರಿಯರನ್ನು ಸೆಳೆಯುವುದರೊಂದಿಗೆ ಟ್ರೆಂಡಿಯಾಯಿತು.
ಫುಲ್ ಸ್ಲೀವ್ ಲೆಹೆಂಗಾ ಬ್ಲೌಸ್ ಪ್ರಿಯರಿಗೆ ಸಲಹೆ
- ಆದಷ್ಟೂ ಲೆಹೆಂಗಾಗೆ ಮ್ಯಾಚ್ ಆಗುವಂತೆ ಡಿಸೈನ್ ಇರಲಿ.
- ಕೈಗಳಿಗೆ ತೀರಾ ಟೈಟಾಗದಿರಲಿ.
- ತೀರಾ ಒಣಕಲು ಇರುವಂತಹ ಕೈಗಳಿಗೆ ಈ ಶೈಲಿಯ ಬ್ಲೌಸ್ ಬೇಡ!
- ಪ್ಲಂಪಿಯಾಗಿರುವವರಿಗೆ ಇದು ಹೇಳಿಮಾಡಿಸಿದ ಡಿಸೈನ್ ಎನ್ನಬಹುದು.