ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Lehenga Fashion 2026: ಎಥ್ನಿಕ್‌ ಲುಕ್‌ ನೀಡುವ ರೆಡ್‌ ಲೆಹೆಂಗಾ ಸೀಕ್ರೆಟ್ಸ್

Lehenga Fashion 2026: ರೆಡ್‌ ಲೆಹೆಂಗಾ ಅಂದರೇ ಯಾರಿಗೆ ಇಷ್ಟವಿಲ್ಲ, ಹೇಳಿ ನೋಡೋಣಾ! ಅತ್ಯಾಕರ್ಷಕವಾಗಿ ಕಾಣಿಸುವ ಈ ಲೆಹೆಂಗಾ ಧರಿಸುವವರು ಪಾಲಿಸಬೇಕಾದ ಫ್ಯಾಷನ್‌ ರೂಲ್ಸ್ ಯಾವುದು? ಫ್ಯಾಷನಿಸ್ಟಾಗಳು ತಿಳಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ಮೇಧಾ ಶಂಕರ್‌, ನಟಿ
1/5

ಸೆಲೆಬ್ರಿಟಿ ಲುಕ್‌ ನೀಡುವ ರೆಡ್‌ ಶೇಡ್‌ನ ಲೆಹೆಂಗಾ ಯಾರಿಗೆ ಇಷ್ಟವಿಲ್ಲ? ಹೇಳಿ ನೋಡೋಣಾ! ಇತ್ತೀಚೆಗೆ ಸೆಲೆಬ್ರೆಟಿ ಲುಕ್‌ಗಾಗಿ ಈ ಕಲರ್‌ನ ಲೆಹೆಂಗಾಗಳನ್ನು ಯುವತಿಯರು ಧರಿಸುವುದು ಹೆಚ್ಚಾಗಿದೆ. ಹೌದು, ಇದಕ್ಕೆ ಪೂರಕ ಎಂಬಂತೆ, ನಟಿ ಮೇಧಾ ಶಂಕರ್‌ ಧರಿಸಿದ್ದ ರೆಡ್‌ ಲೆಹೆಂಗಾ ಇನ್ಸ್ಟಾ ಫ್ಯಾಷನ್‌ ಪೇಜ್‌ಗಳಲ್ಲಿ ವೈರಲ್‌ ಆಗಿತ್ತು. ರೆಡ್‌ ಲೆಹೆಂಗಾದಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದ ಮೇಧಾರಂತೆಯೇ ನೀವು ಕೂಡ ಪರ್ಫೆಕ್ಟ್ ಲುಕ್‌ ಪಡೆಯಬಹುದು. ಅದಕ್ಕಾಗಿ ಒಂದಿಷ್ಟು ಫ್ಯಾಷನ್‌ ರೂಲ್ಸ್ ಫಾಲೋ ಮಾಡಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

2/5

ಸೀಸನ್‌ಗೆ ತಕ್ಕಂತಹ ಫ್ಯಾಬ್ರಿಕ್‌ ಆಯ್ಕೆ

ಸಮ್ಮರ್‌ ಸೀಸನ್‌ನಲ್ಲಿ ಹೆವ್ವಿ ರೆಡ್‌ ಲೆಹೆಂಗಾ ಧರಿಸಲು ಸಾಧ್ಯವಿಲ್ಲ! ಹಾಗಾಗಿ ಆದಷ್ಟೂ ಜಾರ್ಜೆಟ್‌, ಶಿಫಾನ್‌ ಅಥವಾ ಕ್ರೇಪ್‌ ಸಿಲ್ಕ್‌ನಂತಹ ಲೈಟ್‌ವೈಟ್‌ ಫ್ಯಾಬ್ರಿಕ್‌ನ ಲೆಹೆಂಗಾ ಆಯ್ಕೆ ಮಾಡಿ ಧರಿಸುವುದು ಉತ್ತಮ.

3/5

ಎಂಬ್ರಾಯ್ಡರಿ ರೆಡ್‌ ಲೆಹೆಂಗಾ

ಗೋಲ್ಡ್‌ ಮತ್ತು ಸಿಲ್ವರ್‌ ಎಂಬ್ರಾಯ್ಡರಿ ವರ್ಕ್‌ ರೆಡ್‌ ಲೆಹೆಂಗಾಗಳನ್ನು ಅತ್ಯಾಕರ್ಷಕವಾಗಿ ಬಿಂಬಿಸುತ್ತವೆ. ಹಾಗಾಗಿ ನೀವು ಸೆಲೆಕ್ಟ್ ಮಾಡುವಾಗ ಆದಷ್ಟೂ ಹ್ಯಾಂಡ್‌ ಎಂಬ್ರಾಯ್ಡರಿಯ ಶೇಡ್‌ಗಳಿಗೆ ಮಾನ್ಯತೆ ನೀಡಿ.

ವೆಡ್ಡಿಂಗ್‌ ರೆಡ್‌ ಲೆಹೆಂಗಾ

ನೂರು ಜನರ ಮಧ್ಯೆಯೂ ಇವು ಹೈಲೈಟ್‌ ಆಗುತ್ತವೆ ಎಂಬ ಕಾರಣದಿಂದಾಗಿ ಸಾಮಾನ್ಯವಾಗಿ ಸಾಕಷ್ಟು ಮದುವೆಯ ರಿಸೆಪ್ಷನ್‌ಗಳಲ್ಲಿ ರೆಡ್‌ ಲೆಹೆಂಗಾ ಧರಿಸುತ್ತಾರೆ. ಹೆವಿ ಡಿಸೈನ್‌ನವನ್ನು ಪ್ರಿಫರ್‌ ಮಾಡುತ್ತಾರೆ. ಈ ಸೀಸನ್‌ನಲ್ಲಿ ಇದೀಗ ಈಗಾಗಲೇ ಈ ಕಲರ್‌ನಲ್ಲೆ ನಾನಾ ಲೈಟ್‌ ಹಾಗೂ ಡಾರ್ಕ್‌ ಶೇಡ್‌ಗಳು ದೊರೆಯುತ್ತಿವೆ. ಒಮ್ಮೆ ಅವುಗಳನ್ನು ಪ್ರಯೋಗಿಸಿ ನೋಡಿ.

4/5

ಎಥ್ನಿಕ್‌ ಲುಕ್‌ ನೀಡುವ ರೆಡ್‌ ಲೆಹೆಂಗಾ

ಎಥ್ನಿಕ್‌ ಲುಕ್‌ ನೀಡುವಂತಹ ರೆಡ್‌ ಲೆಹೆಂಗಾಗಳಿಗೆ ಗೋಲ್ಡ್ ಅಥವಾ ಇಮೀಟೇಷನ್‌ ಜ್ಯುವೆಲರಿ ಅಥವಾ ಜರ್ಕೋನ್‌ ಡಿಸೈನ್‌ ಆಭರಣಗಳನ್ನು ಧರಿಸುವುದು ಉತ್ತಮ.

5/5

ಟ್ರೆಡಿಷನಲ್‌ ಮೇಕೋವರ್‌

ರೆಡ್‌ ಲೆಹೆಂಗಾಗಳು ಟ್ರೆಡಿಷನಲ್‌ ಲುಕ್‌ ನೀಡುವುದರಿಂದ ಕಂಪ್ಲೀಟ್‌ ಮೇಕೋವರ್‌ ಕೂಡ ಟ್ರೆಡಿಷನಲ್‌ ಆಗಿರಬೇಕು. ಮೇಕಪ್‌ ಕೂಡ ಇದಕ್ಕೆ ಸಾಥ್‌ ನೀಡಬೇಕು.

ಶೀಲಾ ಸಿ ಶೆಟ್ಟಿ

View all posts by this author