Lehenga Fashion Tips 2026: ಫ್ಲೋರಲ್ ಲೆಹೆಂಗಾ ಪ್ರಿಯರಿಗೆ ನಟಿ ಭೂಮಿಕಾ ನೀಡಿದ 5 ಟಿಪ್ಸ್
Lehenga Fashion Tips: ಈ ಬಾರಿ ವಿಂಟರ್ ಸೀಸನ್‌ನಲ್ಲಿ ಫ್ಲೋರಲ್ ಪ್ರಿಂಟ್ಸ್ ಇರುವಂತಹ ಲೆಹೆಂಗಾಗಳು ಟ್ರೆಂಡಿಯಾಗಿವೆ. ಈ ಶೈಲಿಯ ಲೆಹೆಂಗಾಗಳ ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ನಟಿ ಭೂಮಿಕಾ ಒಂದೈದು ಸಿಂಪಲ್ ಟಿಪ್ಸ್ ನೀಡಿದ್ದಾರೆ.
ಈ ಹಿಂದೆ ಸಮ್ಮರ್‌ಗೆ ಮಾತ್ರ ಸೀಮಿತವಾಗಿದ್ದ ಫ್ಲೋರಲ್ ಪ್ರಿಂಟ್ಸ್‌ನ ಲೆಹೆಂಗಾಗಳು ಇದೀಗ ವಿಂಟರ್ ಸೀಸನ್‌ನಲ್ಲೂ ಲಗ್ಗೆ ಇಟ್ಟಿವೆ. ಲೆಹೆಂಗಾ ಪ್ರಿಯರನ್ನು ಸವಾರಿ ಮಾಡತೊಡಗಿವೆ. ಇದಕ್ಕೆ ಪೂರಕ ಎಂಬಂತೆ, ಫ್ಯಾಷನ್ ಲೋಕದಲ್ಲಿ ನಾನಾ ಶೈಲಿಯ ಕಲರ್‌ನ ಫ್ಲೋರಲ್ ಪ್ರಿಂಟ್ಸ್ ಇರುವಂತಹ ಲೆಹೆಂಗಾಗಳು ಬಿಡುಗಡೆಗೊಂಡಿವೆ.
ಭೂಮಿಕಾ ಫ್ಲೋರಲ್ ಲೆಹೆಂಗಾ ಲವ್
ವೆಡ್ಡಿಂಗ್ ಸೀಸನ್‌ನಲ್ಲಿ ಈ ಬಾರಿ ಫ್ಲೋರಲ್ ಲೆಹೆಂಗಾಗಳು ಟ್ರೆಂಡಿಯಾಗಿದ್ದು, ಈ ಲೆಹೆಂಗಾದಲ್ಲಿ ಆಕರ್ಷಕವಾಗಿ ಕಾಣಿಸುವುದು ಹೇಗೆ? ಎಂಬುದರ ಬಗ್ಗೆ ಭೂಮಿಕಾ ನೀಡಿರುವ ಒಂದಿಷ್ಟು ಸ್ಟೈಲಿಂಗ್‌ದ ಟಿಪ್ಸ್ ಇಲ್ಲಿವೆ.
ಉಲ್ಲಾಸ ನೀಡುವ ಫ್ಲೋರಲ್ ಪ್ರಿಂಟೆಡ್ ಲೆಹೆಂಗಾ
ನೀವು ಆಯ್ಕೆ ಮಾಡುವ ಫ್ಲೋರಲ್ ಲೆಹೆಂಗಾಗಳ ಹೂವುಗಳ ಪ್ರಿಂಟ್ಸ್ ನೋಡಲು ಆಕರ್ಷಕವಾಗಿರಬೇಕು. ಹಾಗಾಗಿ ಅಂತಹದ್ದನ್ನೇ ಚೂಸ್ ಮಾಡಿ. ಚಿಕ್ಕ –ದೊಡ್ಡ ಹೂವುಗಳು ಯಾವುದು ಸೂಕ್ತ? ಎಂಬುದು ನಿಮಗೆ ಗೊತ್ತಿರಲಿ.
ಲೆಹೆಂಗಾಗೆ ಟ್ರೆಡಿಷನಲ್ ಮೇಕಪ್ ಮಾಡಿ
ಆದಷ್ಟೂ ಲೆಹೆಂಗಾಗಳಿಗೆ ಟ್ರೆಡಿಷನಲ್ ಮೇಕಪ್ ಮಾಡಿ. ಇಂಡೋ-ವೆಸ್ಟರ್ನ್ ಲುಕ್‌ಗಾದಲ್ಲಿ, ಮೊದಲೇ ಪ್ಲಾನ್ ಮಾಡಿ.
ಫ್ಲೋರಲ್ ಲೆಹೆಂಗಾ ಸ್ಟೈಲಿಂಗ್ ಹೀಗಿರಲಿ
ಫ್ಲೋರಲ್ ಲೆಹೆಂಗಾ ಸ್ಟೈಲಿಂಗ್ ಮಾಡುವಾಗ ಆದಷ್ಟೂ ಮಿನಿಮಲ್ ಸ್ಟೈಲಿಂಗ್ ನಿಮ್ಮದಾಗಿರಲಿ. ತೀರಾ ಹೆವಿ ಸ್ಟೈಲಿಂಗ್ ಕೂಡ ಲೆಹೆಂಗಾ ಸೌಂದರ್ಯವನ್ನು ಮರೆಮಾಚಬಹುದು.
ಫ್ಲೋರಲ್ ಲೆಹೆಂಗಾಗೆ ಆಕ್ಸೆಸರೀಸ್ ಮ್ಯಾಚಿಂಗ್
ದೊಡ್ಡ ಹೂವುಗಳ ಪ್ರಿಂಟ್ಸ್ ಇರುವಂತಹ ಲೆಹೆಂಗಾಗೆ ಹೆವ್ವಿ ಆಕ್ಸೆಸರೀಸ್ ಬೇಡ! ಚಿಕ್ಕ ಹೂವುಗಳಿದ್ದಲ್ಲಿ ಆಕ್ಸೆಸರೀಸ್ ಹೆಚ್ಚು ಧರಿಸಬಹುದು ಎಂಬುದು ನೆನಪಿರಲಿ.
ಫ್ಲೋರಲ್ ಲೆಹೆಂಗಾ ಮೇಕೋವರ್
ಮೇಕಪ್ ಸೇರಿದಂತೆ ಹೇರ್‌ಸ್ಟೈಲಿಂಗ್ ಹಾಗೂ ಕಂಪ್ಲೀಟ್ ಮೇಕೋವರ್ ಫ್ಲೋರಲ್ ಲೆಹೆಂಗಾವನ್ನು ಹೈಲೈಟ್ ಮಾಡುವಂತಿರಬೇಕು. ಆದಷ್ಟೂ ನಿಮ್ಮ ಪರ್ಸನಾಲಿಟಿಗೆ ತಕ್ಕಂತಿರಬೇಕು.